ಬಂಟ್ವಾಳ : ಪುರಸಭೆಯಿಂದ ವಿಕಲಚೇತನರಿಗೆ ವಾಹನ ವಿತರಣೆ

ಬಂಟ್ವಾಳ: ಪುರಸಭೆಯ 2015-16ನೆ ಸಾಲಿನ ಶೇಕಡ 3ರ ಯೋಜನೆಯಡಿ ಹಾಗೂ ಶೇಕಡಾ 75ಕ್ಕಿಂತ ಅಧಿಕ ವಿಕಲತೆ ಹೊಂದಿರುವ ನಾಲ್ಕು ಮಂದಿ ವಿಕಲಚೇತನ ಫಲಾನುಭವಿಗಳಿಗೆ ವಿಶೇಷ ವಾಹನಗಳ ವಿತರಣಾ ಕಾರ್ಯಕ್ರಮ ಬುಧವಾರ ಬಂಟ್ವಾಳ ಪುರಸಭೆಯ ವಠಾರದಲ್ಲಿ ಜರಗಿತು. ಫಲಾನುಭವಿಗಳಾದ ಮುಸ್ತಾಫಾ ತಾಳಿಪಡ್ಪು, ಯೂಸುಫ್ ಗುಡ್ಡೆಯಂಗಡಿ, ಖತಿಜಮ್ಮ ಗೂಡಿನಬಳಿ, ಪೂಂಜೆರೆಕೋಡಿ ಶಿವಪ್ರಸಾದರವರಿಗೆ ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ ವಾಹನದ ಕೀ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಪುರಸಭಾ ಉಪಾಧ್ಯಕ್ಷ ಮುಹಮ್ಮದ್ ನಂದರಬೆಟ್ಟು, ಸದಸ್ಯರಾದ ವಾಸು ಪೂಜಾರಿ, ಗಂಗಾಧರ ಮಂಡಾಡಿ, ಜಗ ದೀಶ್ ಕುಂದರ್, ಯಾಸ್ಮಿನ್ ಅಹ್ಮದ್, ಪ್ರಭಾ ಆರ್ ಸಾಲ್ಯಾನ್ , ಚಂಚಲಾಕ್ಷಿ , ಜೆಸಿಂತಾ, ಸಂಜೀವಿನಿ , ಭಾಸ್ಕರ ಟೈಲರ್, ಪ್ರವೀಣ್ ಕಿಣಿ, ನೊಬರ್ಟ್ ರೋಡ್ರಿಗಸ್, ಆಶ್ರಯ ಸಮಿತಿ ಸದಸ್ಯರಾದ ಸಂಜೀವ ಕುಲಾಲ್, ಖಾಸಿಂ, ಬೂಡಾ ಅಧ್ಯಕ್ಷ ಪಿಯೂಸ್ ಎಲ್ ರೋಡ್ರಿಗಸ್, ಮುಖ್ಯಾಧಿಕಾರಿ ಸುಧಾಕರ ಭಟ್ ಮತ್ತಿತರರು ಉಪಸ್ಥಿತರಿದ್ದರು.
Next Story





