ಪ್ಯಾರಿಸ್ ಭಯೋತ್ಪಾದಕ ದಾಳಿ: ಬ್ರಸೆಲ್ಸ್ ನಲ್ಲಿ ಬಂಧಿತ ಮೂವರ ಬಿಡುಗಡೆ

ಬ್ರಸೆಲ್ಸ್, ಎ. 13: ಕಳೆದ ವರ್ಷದ ನವೆಂಬರ್‌ನಲ್ಲಿ ಪ್ಯಾರಿಸ್ ಮೇಲೆ ನಡೆದ ಭಯೋತ್ಪಾದಕ ದಾಳಿಗೆ ಸಂಬಂಧಿಸಿ ಬ್ರಸೆಲ್ಸ್‌ನಲ್ಲಿ ಮಂಗಳವಾರ ಬಂಧಿಸಲ್ಪಟ್ಟಿದ್ದ ಮೂವರನ್ನು ನ್ಯಾಯಾಧೀಶರೊಬ್ಬರು ಇಂದು ಬಿಡುಗಡೆ ಮಾಡಿದ್ದಾರೆ ಎಂದು ಬೆಲ್ಜಿಯಂನ ಪ್ರಾಸಿಕ್ಯೂಟರ್‌ಗಳು ಹೇಳಿದರು.
ಪ್ಯಾರಿಸ್ ದಾಳಿಗೆ ಸಂಬಂಧಿಸಿ ಬ್ರಸೆಲ್ಸ್‌ನ ಅಕ್ಸಲ್ ಜಿಲ್ಲೆಯಲ್ಲಿ ಮಂಗಳವಾರ ಮನೆಯೊಂದನ್ನು ಶೋಧಿಸಲಾಗಿತ್ತು. ಈ ಸಂದರ್ಭದಲ್ಲಿ ಮೂವರನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿತ್ತು ಎಂದು ಪ್ರಾಸಿಕ್ಯೂಟರ್‌ಗಳು ತಿಳಿಸಿದರು.
ಪ್ಯಾರಿಸ್‌ನಲ್ಲಿ ಕಳೆದ ವರ್ಷದ ನವೆಂಬರ್ 13ರಂದು ನಡೆದ ಭಯೋತ್ಪಾದಕ ದಾಳಿಯಲ್ಲಿ 130 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಭಯೋತ್ಪಾದಕರ ಬೃಹತ್ ಜಾಲವೊಂದು ಪ್ಯಾರಿಸ್ ಉಗ್ರ ದಾಳಿಯ ಹಿಂದಿದೆ ಎಂಬುದು ಈ ದಾಳಿಯ ಬಗ್ಗೆ ನಡೆದ ತನಿಖೆಯಿಂದ ಬಹಿರಂಗಗೊಂಡಿದೆ. ಈ ಜಾಲದ ಕೆಲವು ಸದಸ್ಯರು ಮಾರ್ಚ್ 22ರಂದು ಬ್ರಸೆಲ್ಸ್‌ನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟಗಳಲ್ಲೂ ಶಾಮೀಲಾಗಿದ್ದರು.
Next Story





