Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಲೆಟ್ ಫಿಶಿಂಗ್ ಆಧುನಿಕ ತಂತ್ರ ಜ್ಞಾನದಿಂದ...

ಲೆಟ್ ಫಿಶಿಂಗ್ ಆಧುನಿಕ ತಂತ್ರ ಜ್ಞಾನದಿಂದ ಮೀನುಗಾರರಲ್ಲಿ ಆತಂಕ

ವಾರ್ತಾಭಾರತಿವಾರ್ತಾಭಾರತಿ13 April 2016 9:53 PM IST
share
ಲೆಟ್ ಫಿಶಿಂಗ್ ಆಧುನಿಕ ತಂತ್ರ ಜ್ಞಾನದಿಂದ ಮೀನುಗಾರರಲ್ಲಿ ಆತಂಕ

-ಶ್ರೀನಿವಾಸ್ ಬಾಡ್ಕರ್

ಕಾರವಾರ, ಎ. 13: ಮೀನುಗಾರಿಕೆಯಲ್ಲಿ ಆಧುನಿಕ ತಂತ್ರ ಜ್ಞಾನ ಬೆಳೆದಂತೆ, ಮೀನುಗಾರಿಕೆ ಉದ್ಯೋಗದ ಮೇಲೆ ವ್ಯತಿ ರಿಕ್ತ ಪರಿಣಾಮ ಬೀರುತ್ತಿದ್ದು, ಭವಿಷ್ಯದಲ್ಲಿ ಮೀನು ಸಂತತಿ ನಾಶವಾಗಿ ಮೀನುಗಾರರ ಬದುಕು ಅತಂತ್ರವಾಗುವ ಸ್ಥಿತಿ ನಿರ್ಮಾಣವಾಗುತ್ತಿರುವುದು ಕರಾವಳಿ ಭಾಗದ ಮೀನು ಗಾರರಲ್ಲಿ ಆತಂಕ ಶುರುವಾಗಿದೆ.

ಸಾಂಪ್ರದಾಯಿಕ ರಂಪಣಿ ಮೀನುಗಾರಿಕೆಯಿಂದ ಮೀನುಗಾರರು ಆಧುನಿಕ ಮೀನುಗಾರಿಕೆಯತ್ತ ಹೊರಳಿ ಹಲವಾರು ದಶಕಗಳೇ ಕಳೆದಿವೆ. ಆದರೆ, ಆಧುನಿಕತೆ ಈಗ ಶಾಪವಾಗಿ ಮೀನುಗಾರರನ್ನು ಕಾಡುತ್ತಿದೆ. ಕರಾವಳಿಯುದ್ದಕ್ಕೂ ಸಾವಿರಾರು ಸಂಖ್ಯೆಯಲ್ಲಿ ಆಳ ಸಮುದ್ರದಲ್ಲಿ ಯಾಂತ್ರಿಕ ಮೀನುಗಾರಿಕೆ ಅವ್ಯಾಹತವಾಗಿ ನಡೆಸಲಾಗುತ್ತದೆ. ಅದರಲ್ಲಿ ಫರ್ಸಿನ್, ಟ್ರಾಲರ್, ದೊಡ್ಡ ಗಾತ್ರದ ಡೀಪ್‌ಸೀ ಟ್ರಾಲರ್, ಬುಲ್ ಟ್ರಾಲರ್ ಜೊತೆಗೆ ಈಗ ಹೊಸದಾಗಿ ಸೇರ್ಪಡೆಯಾಗಿರುವ ಲೈಟ್ ಫಿಶಿಂಗ್ ಆಧುನಿಕ ತಂತ್ರಜ್ಞಾನ ಸೇರಿದೆ.

ಸಾಮಾನ್ಯವಾಗಿ ಫರ್ಸಿನ್ ಹಾಗೂ ಸಣ್ಣ ಪ್ರಮಾಣದ ಟ್ರಾಲರ್ ಮೀನುಗಾರಿಕೆಯನ್ನು ಅಧಿಕೃತವಾಗಿ ಲಕ್ಷಾಂತರ ಮೀನುಗಾರರು ನಂಬಿ ಜೀವನ ನಡೆಸುತ್ತಿದ್ದಾರೆ. ಆದರೆ ಅವರೆಲ್ಲರಿಗೂ ಹಾಗೂ ಸಾಂಪ್ರದಾಯಿಕ ಮೀನುಗಾರಿಕೆಯಾದ ಏಂಡಿ, ಚಿಟ್‌ಕಾಂಟ್ಲೆ, ಮಾಟ್ ಬಲೆಯಂತಹ ನಂಬಿ ಬದು ಕುವ ಸಾವಿರಾರು ಮೀನುಗಾರರಿಗೆ ಬುಲ್‌ಟ್ರಾಲ್ ಹಾಗೂ ಹೊಸ ತಂತ್ರಜ್ಞಾನ ಲೈಟ್ ಫಿಶಿಂಗ್ ದುಸ್ವಪ್ನವಾಗಿ ಕಾಡುತ್ತಿದೆ. ಬುಲ್‌ಟ್ರಾಲ್ ಮೀನುಗಾರಿಕೆಗೆ ಸರಕಾರ ಅರೆಬರೆ ರೀತಿಯಲ್ಲಿ ಪರವಾನಿಗೆ ನೀಡಿದರೂ,ಈ ಲೈಟ್ ಫಿಶ್ ಮೀನುಗಾರಿಕೆಗೆ ಮಾತ್ರ ಸರಕಾರದ ಪರವಾನಿಗೆ ಇಲ್ಲ ಎನ್ನಲಾಗುತ್ತಿದೆ. ಮೀನುಗಾರಿಕೆ ತಂತ್ರಜ್ಞ್ಞಾನ ಬಳಸುವ ಬೋಟುಗಳು ರಾತ್ರಿ ಹೊತ್ತಿನಲ್ಲಿ ಕಾನೂನು ಬಾಹಿರವಾಗಿ ಮೀನುಗಾರಿಕೆ ನಡೆಸುತ್ತಿದ್ದಾರೆ. ಸರಕಾರ ಮಾತ್ರ ಯಾವುದೇ ರೀತಿಯ ಕಾನೂನು ಕ್ರಮ ಕೈಗೊಳ್ಳದೆ, ಕಣ್ಣು ಮುಚ್ಚಿ ಕುಳಿತಿದೆ ಎಂಬುದು ಮೀನುಗಾರರ ಆರೋಪವಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಅಂದಾಜು 80 ಕ್ಕೂ ಹೆಚ್ಚಿನ ಬೋಟುಗಳು ಕಾನೂನು ಬಾಹಿರವಾಗಿ ಕಾರ್ಯಾಚರಿಸುತ್ತಿವೆ. ದೇಶದ ಎರಡೂ ಕರಾವಳಿಯಲ್ಲಿ ಇಂತಹ ಬೋಟುಗಳು ಸಾವಿರಾರು ಸಂಖ್ಯೆಯಲ್ಲಿವೆ. ಬುಲ್‌ಟ್ರಾಲ್ ಮೀನುಗಾರಿಕೆ ತಂತ್ರಜ್ಞಾನಕ್ಕಿಂತ ಅತ್ಯಂತ ಅಪಾಯಕಾರಿ ತಂತ್ರಜ್ಞಾನವಾಗಿದೆ ಎಂದು ಮೀನುಗಾರರು ಕಳವಳ ವ್ಯಕ್ತಪಡಿಸುತ್ತಾರೆ. ಈ ತಂತ್ರಜ್ಞಾನದಿಂದ ಭವಿಷ್ಯದ ಒಂದು ದಶಕದೊಳಗೆ ಮೀನು ಸಂತತಿ ಸಂಪೂರ್ಣವಾಗಿ ನಾಶವಾಗಿ, ಮೀನುಗಾರರು ಉದ್ಯೋಗವಿಲ್ಲದೇ, ಬೀದಿಗೆ ಬೀಳುವುದು ಗ್ಯಾರಂಟಿ ಎಂದು ಮೀನುಗಾರರು ಆತಂಕ ವ್ಯಕ್ತಪಡಿಸುತ್ತಾರೆ.

ಏನಿದು ಲೈಟ್‌ಫಿಶಿಂಗ್?: ರಾತ್ರಿ ಸಮಯದಲ್ಲಿ ಒಂದು ಸಣ್ಣ ಬೋಟಿಗೆ ಸುಮಾರು 1 ಸಾವಿರ ಮೇಗಾವ್ಯಾಟ್ ಸಾಮರ್ಥ್ಯದ 8 ಬಲ್ಬುಗಳನ್ನು ಅಳವಡಿಸಲಾಗುತ್ತದೆ. ಈ ಬಲ್ಬಿನ ಹಾಗೂ 20 ಸಾವಿರ ಮೆಗಾಹರ್ಟ್ಸ್ ಸಾಮರ್ಥ್ಯದ ಜನರೇಟರ್ ಬೆಲೆ 3.50 ಲಕ್ಷ ರೂ. ಎನ್ನಲಾಗುತ್ತದೆ.

ಬಲ್ಬುಗಳ ಪ್ರಕಾಶಕ್ಕೆ ಮರಳಾಗುವ ಟನ್ನುಗಟ್ಟಲೆ ಸಂಖ್ಯೆಯ ಮೀನು ಆ ಬೋಟಿನ ಕೆಳಗಡೆ ಗಿರಕಿ ಹೊಡೆಯುತ್ತಿರುತ್ತದೆ. ಇದೇ ಸಂದರ್ಭದಲ್ಲಿ ಇನ್ನೊಂದು ಬೋಟಿನ ಮೂಲಕ ಈ ಲೈಟು ಹೊತ್ತ ಬೋಟನ್ನು ಮಧ್ಯದಲ್ಲಿ ಇಟ್ಟುಕೊಂಡು ಬಲೂನಿನಂತಹ ದೊಡ್ಡ ಗಾತ್ರದ ಬಲೆ ಬೀಸಲಾಗುತ್ತದೆ.ಬಲೆಯಲ್ಲಿ ಚಿಕ್ಕ ಮರಿಗಳು ಸೇರಿದಂತೆ ಎಲ್ಲ ಗಾತ್ರದ ವಿವಿಧ ಜಾತಿಯ ಮೀನುಗಳು ಟನ್‌ಗಟ್ಟಲೆ ಸೆರೆಯಾಗುತ್ತವೆ.

ಗೋವಾದಲ್ಲಿ ಸಂಪೂರ್ಣ ನಿಷೇಧ: ಕೆಲವೇ ಸಾವಿರ ಸಂಖ್ಯೆಯಲ್ಲಿರುವ ಮೀನುಗಾರರ ಹಿತ ಕಾಪಾಡಲು ಗೋವಾ ಸರಕಾರ ಸದಾ ಮುಂದಿರುತ್ತದೆ. ಅದು ತನ್ನ ಕಡಲ ವ್ಯಾಪ್ತಿಯೊಳಗೆ ಈ ಲೈಟ್ ಫಿಶಿಂಗ್ ಮೀನುಗಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಕಾನೂನು ಬಾಹಿರವಾಗಿ ಈ ರೀತಿಯ ಮೀನುಗಾರಿಕೆ ನಡೆಸುವವರನ್ನು ಕಸ್ಟಮ್ಸ್ ಹಾಗೂ ಕೋಸ್ಟ್ ಗಾರ್ಡ್ ಮೂಲಕ ಬಂಸಿ ಬೋಟನ್ನು ಜಫ್ತಿ ಮಾಡಲಾಗುತ್ತದೆ. ಅಲ್ಲದೆ ದಂಡದ ಜೊತೆಗೆ ಉಗ್ರವಾದ ಶಿಕ್ಷೆ ನೀಡಲಾಗುತ್ತದೆ. ಹಾಗಾಗಿ ಗೋವಾ ಕಡೆ ಯಾರೂ ಸುಳಿಯಲ್ಲ ಎಂದು ಇಲ್ಲಿ ಮೀನುಗಾರರು ಮಾಹಿತಿ ನೀಡುತ್ತಾರೆ.

‘ರಾಜ್ಯ ಸರಕಾರ ಕ್ರಮಕ್ಕೆ ಮುಂದಾಗಲಿ’

ಕರ್ನಾಟಕ ಸರಕಾರ ಮಾತ್ರ ಮೀನುಗಾರರನ್ನು ತಾತ್ಸಾರ ಮನೋಭಾವನೆಯಿಂದ ನೋಡುತ್ತಿದೆ ಎನ್ನುವ ಆರೋಪ ವ್ಯಕ್ತವಾಗಿದೆ. ರಾಜ್ಯ ಸರಕಾರ ಲಕ್ಷಾಂತರ ಮೀನುಗಾರರ ಬದುಕಿನ ಹಕ್ಕನ್ನು ಕಸಿ ಯುವ ಈ ಮೀನುಗಾರಿಕೆ ತಂತ್ರಜ್ಞಾನದ ಬಗ್ಗೆ ಕ್ರಮ ಕೈಗೊಂಡು, ಸರಕಾರ ಆದಷ್ಟು ಬೇಗ ಲೈಟ್ ಫಿಶಿಂಗ್ ತಂತ್ರಜ್ಞಾನವನ್ನು ನಿಷೇಧಿಸಬೇಕು ಎಂಬ ಅಭಿಪ್ರಾ ಯವನ್ನು ಇಲ್ಲಿನ ಮೀನುಗಾರರು ಒತ್ತಾಯಿಸುತ್ತಾರೆ.

ನಿರ್ದೇಶಕರಿಗೆ ವರದಿ ಸಲ್ಲಿಸಿದ್ದೇನೆ

ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ಲೈಟ್ ಫಿಶಿಂಗ್ ನಡೆಯುತ್ತಿದೆ. ಕಳೆದ ಹದಿನೈದು ದಿನಗಳ ಹಿಂದೆ ಭಟ್ಕಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ನಿಷೇಧ ಮಾಡಿದರೆ ಎಲ್ಲ ಕಡೆಗೂ ನಿಷೇಧ ಮಾಡಬೇಕು. ಈ ತಾಂತ್ರಿಕೆಯನ್ನು ನಿಷೇಧಿಸಲು ಮೀನುಗಾರಿಕೆ ಇಲಾಖೆಯ ನಿರ್ದೇಶಕರಿಗೆ ವರದಿ ಸಲ್ಲಿಸಿದ್ದೇನೆ.

 <

ಎಂ.ಎಲ್.ದೊಡ್ಡಮನಿ,ಜಿಲ್ಲಾ ಮೀನುಗಾರಿಕೆ ಉಪನಿರ್ದೇಶಕರು ಕಾರವಾರ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X