ಬಸ್ ಢಿಕ್ಕಿ: ಬೈಕ್‌ನಲ್ಲಿದ್ದ ಇಬ್ಬರು ಸಾವು
ಶಿವಮೊಗ್ಗ, ಎ. 13: ವೇಗವಾಗಿ ಆಗಮಿಸಿದ ಖಾಸಗಿ ಸಿಟಿ ಬಸ್‌ವೊಂದು ಹಿಂಬದಿಯಿಂದ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಹಾಗೂ ಹಿಂಬದಿ ಸವಾರ ಅಸುನೀಗಿದ ಘಟನೆ ಶಿವಮೊಗ್ಗ ನಗರದ ಶಿವಮೂರ್ತಿ ಸರ್ಕಲ್ ಸಮೀಪದ ಸವಳಂಗ ರಸ್ತೆಯಲ್ಲಿ ಮಂಗಳವಾರ ಸಂಜೆ ವರದಿಯಾಗಿದೆ. ಸೂಳೇಬೈಲು ಬಡಾವಣೆಯ ನಿವಾಸಿಗಳಾದ ದಾದಾಪೀರ್ (40) ಹಾಗೂ ಸೈಯದ್ ಆಫ್ರೋಝ್ (18) ಮೃತಪಟ್ಟವರೆಂದು ಗುರುತಿಸ ಲಾಗಿದೆ. ಅವಘಡದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಇವರಿಬ್ಬರನ್ನು ತಕ್ಷಣವೇ ಸಾರ್ವಜನಿಕರು ಸರಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಅವಘಡದ ನಂತರ ಬಸ್ ಚಾಲಕ ಪರಾರಿಯಾಗಿದ್ದಾನೆ. ಮಿತಿಮೀರಿದ ವೇಗ, ಅಜಾಗರೂಕ ಚಾಲನೆಯೇ ಅವಘಡಕ್ಕೆ ಕಾರಣವೆಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಪೂರ್ವ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





