ಅಂಕೋಲಾದ ಉಪ್ಪಿನ ಸತ್ಯಾಗ್ರಹಕ್ಕೆ 85 ವರ್ಷ

ಅಂಕೋಲಾ, ಎ.13: ಅಂಕೋಲಾದಲ್ಲಿ ಉಪ್ಪಿನ ಸತ್ಯಾಗ್ರಹ ನಡೆದು ಎಪ್ರಿಲ್ 13ಕ್ಕೆ 85 ವರ್ಷವಾದ ಹಿನ್ನೆಲೆಯಲ್ಲಿ ಸಮಾನ ಮನಸ್ಕರು ಸೇರಿ ಬುಧವಾರ ಇಲ್ಲಿಯ ಪೂಜಗೇರಿಯ ಹಳ್ಳಕ್ಕೆ ಬಾಗಿನ ಅರ್ಪಿಸುವ ಮೂಲಕ ಹಳೆ ಘಟನೆಗಳನ್ನು ನೆನಪಿಸಿಕೊಂಡರು. ಹಿರಿಯ ಸ್ವಾತಂತ್ರ ಹೋರಾಟಗಾರ ಹೊನ್ನೆಕೇರಿಯ ವಿಠ್ಠಲ ಕೃಷ್ಣ ಶೆಟ್ಟಿ ಇವರು ಹಳ್ಳಕ್ಕೆ ಬಾಗಿನ ಬಿಡುವ ಮೂಲಕ ತಮ್ಮ ಹಿಂದಿನ ಹೋರಾಟದ ನೆನಪುಗಳನ್ನು ಹಂಚಿಕೊಂಡರು.
ಕನ್ನಡ ಚಂದ್ರಮದ ಅಧ್ಯಕ್ಷ ಜಗದೀಶ ನಾಯಕ ಹೊಸ್ಕೇರಿ ಮಾತನಾಡಿ, ಅಂಕೋಲಾದಲ್ಲಿ 1930ರಲ್ಲಿ ನಡೆದ ಉಪ್ಪಿನ ಸತ್ಯಾಗ್ರಹದಿಂದಾಗಿ ಇಂದು ದೇಶದ ಭೂಪಟದಲ್ಲಿ ನಮ್ಮ ತಾಲೂಕು ಸೇರಿಕೊಳ್ಳಲು ಸಾಧ್ಯವಾಯಿತು. ವಿವಿಧ ಹೋರಾಟಗಳು ಅಂಕೋಲಾದಲ್ಲಿ ನಡೆದಿದ್ದು, ಅದರಲ್ಲಿ ಉಪ್ಪಿನ ಸತ್ಯಾಗ್ರಹ ಕೂಡ ಪ್ರಮುಖವಾದದ್ದಾಗಿದೆ ಎಂದರು.
Next Story





