ಗಡಿ ನಿಯಂತ್ರಣಕ್ಕೆ ಆಸ್ಟ್ರಿಯ ಮುಂದು
ಐರೋಪ್ಯ ಒಕ್ಕೂಟ ಆತಂಕ
ಬ್ರಸೆಲ್ಸ್, ಎ. 13: ಹೊಸದಾಗಿ ವಲಸಿಗರ ಪ್ರವಾಹದ ಭೀತಿಯಲ್ಲಿ ಇಟಲಿಯೊಂದಿಗಿನ ತನ್ನ ಗಡಿಯಲ್ಲಿ ನಿಯಂತ್ರಣಗಳನ್ನು ಹೇರಲು ಆಸ್ಟ್ರಿಯ ಮುಂದಾಗಬಹುದು ಎಂಬ ಕಳವಳ ತನಗೆ ಉಂಟಾಗಿದೆ ಎಂದು ಐರೋಪ್ಯ ಒಕ್ಕೂಟ ಮಂಗಳವಾರ ಹೇಳಿದೆ.
ಆಲ್ಪ್ಸ್‌ನ ಬ್ರೆನರ್ ಪಾಸ್‌ನಲ್ಲಿ ಗಡಿದಾಟಿನ ನಿಯಂತ್ರಣಕ್ಕಾಗಿ ಕಾಂಕ್ರಿಟ್ ಕಂಬಗಳ ನಿರ್ಮಾಣ ಕಾಮಗಾರಿ ಆರಂಭವಾಗಿದೆ ಎಂದು ಆಸ್ಟ್ರಿಯದ ಪೊಲೀಸರು ಹೇಳಿದ್ದಾರೆ. ಕಳೆದ ವರ್ಷ 90,000 ಆಶ್ರಯ ಕೋರಿಕೆಗಳನ್ನು ಪಡೆದ ಬಳಿಕ ಆಸ್ಟ್ರಿಯ ತನ್ನ ಗಡಿ ನಿಯಮಗಳನ್ನು ಬಿಗಿಗೊಳಿಸುತ್ತಿದೆ. ಸ್ಲೊವೇನಿಯ ಮತ್ತು ಹಂಗೇರಿಯೊಂದಿಗಿನ ತನ್ನ ಗಡಿಗಳಲ್ಲಿ ನಿಯಂತ್ರಣ ಕಾಮಗಾರಿಗಳನ್ನು ಅದು ಹೆಚ್ಚಿಸಿದೆ.
Next Story





