Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಚುಟುಕು ಸುದ್ದಿಗಳು

ಚುಟುಕು ಸುದ್ದಿಗಳು

ವಾರ್ತಾಭಾರತಿವಾರ್ತಾಭಾರತಿ13 April 2016 11:37 PM IST
share

ಇಂದಿನ ಕಾರ್ಯಕ್ರಮ
ಅಂಬೇಡ್ಕರ್ ಜನ್ಮದಿನಾಚರಣೆ: ಜಿಲ್ಲಾಡಳಿತ, ಉಡುಪಿ ನಗರಸಭೆ, ಸಮಾಜ ಕಲ್ಯಾಣ ಇಲಾಖೆ, ದಲಿತ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ 125ನೆ ಜನ್ಮದಿನಾಚರಣೆ. ಸಮಯ: ಬೆಳಗ್ಗೆ 9:30ಕ್ಕೆ. ಸ್ಥಳ: ಜಿಲ್ಲಾ ಅಂಬೇಡ್ಕರ್ ಭವನ, ಆದಿಉಡುಪಿ, ಉಡುಪಿ.

ಅಂಬೇಡ್ಕರ್ ಹಬ್ಬ-ಜೈಭೀಮ್ ರ್ಯಾಲಿ: ಸಂವಿಧಾನ ಶಿಲ್ಪಿಡಾ.ಬಾಬಾ ಸಾಹೇಬ ಅಂಬೇಡ್ಕರ್‌ರ 125ನೆ ಜನ್ಮದಿನೋತ್ಸವದ ಪ್ರಯುಕ್ತ ಕರ್ನಾಟಕ ರಾಜ್ಯ ದಸಂಸದ ವತಿಯಿಂದ ಉಡುಪಿ ಜಿಲ್ಲಾದ್ಯಂತ ಸಂಚರಿಸುವ ಅಂಬೇಡ್ಕರ್ ಹಬ್ಬ-ಜೈಭೀಮ್ ರ್ಯಾಲಿಗೆ ಚಾಲನೆ. ಸಮಯ: ಬೆಳಗ್ಗೆ 9ಕ್ಕೆ. ಸ್ಥಳ: ಕ್ಲಾಕ್ ಟವರ್ ಬಳಿ ಉಡುಪಿ.
ಪ್ರತಿಭಾ ಪುರಸ್ಕಾರ: ವಡಬಾಂಡೇಶ್ವರ ಕೀರ್ತಿಶಾಲಾ ಕ್ರೀಡಾ ಮತ್ತು ಸಾಂಸ್ಕೃತಿಕ ಕಲಾ ಸಂಘದ ವತಿಯಿಂದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಜನ್ಮದಿನಾಚರಣೆ ಪ್ರಯುಕ್ತ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ. ಸಮಯ: ಸಂಜೆ 6:30ಕ್ಕೆ. ಸ್ಥಳ: ಸಾರ್ವಜನಿಕ ಶ್ರೀಗಣೇಶ ವೇದಿಕೆ, ಸುಜಾತ ಹೊಟೇಲ್ ವಠಾರ, ತೊಟ್ಟಂ, ಮಲ್ಪೆ.
ಅಂಬೇಡ್ಕರ್ ಜನ್ಮದಿನಾಚರಣೆ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮಜ್ಯೋತಿ) ಉಡುಪಿ ಮತ್ತು ದ.ಕ.ಜಿಲ್ಲಾ ಸಮಿತಿ ವತಿಯಿಂದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್‌ರ 125ನೆ ಜನ್ಮದಿನಾಚರಣೆ. ಸಮಯ: ಪೂರ್ವಾಹ್ನ 11ಕ್ಕೆ. ಸ್ಥಳ: ಉಪ್ಪೂರು ಸರಕಾರಿ ಪ್ರೌಢಶಾಲೆ ಉಪ್ಪೂರು.
ಪ್ರವಚನ ಸಪ್ತಾಹ: ಪರ್ಯಾಯ ಶ್ರೀಪೇಜಾವರ ಮಠದ ವತಿಯಿಂದ ಶ್ರೀರಾಮನವಮಿ ಪ್ರಯುಕ್ತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯ ರಿಂದ ‘ಶ್ರೀರಾಮನ ವ್ಯಕ್ತಿತ್ವ’ ವಿಷಯದ ಕುರಿತು ವಿಶೇಷ ಪ್ರವಚನ ಸಪ್ತಾಹ. ಸಮಯ: ಸಂಜೆ 5:45ರಿಂದ 6:45ರವರೆಗೆ. ಸ್ಥಳ: ಶ್ರೀಕೃಷ್ಣ ಮಠದ ರಾಜಾಂಗಣ ಉಡುಪಿ. ವಾರ್ಷಿಕೋತ್ಸವ: ಉಡುಪಿ ಯಕ್ಷರಂಗ-ಯಕ್ಷಗಾನ ಕೇಂದ್ರ ಇದರ 45ನೆ ವಾರ್ಷಿಕೋತ್ಸವದಲ್ಲಿ ಅಪರಾಹ್ನ 2:30ರಿಂದ ಯಕ್ಷಗಾನ ತಾಳಮದ್ದಳೆ ‘ಬಲಿ’. ಸಂಜೆ 4:30ರಿಂದ ಸಮಾರೋಪ ಸಮಾರಂಭ, 5ರಿಂದ ಯಕ್ಷಗಾನ ಕೇಂದ್ರದ ವಿದ್ಯಾರ್ಥಿ ಗಳಿಂದ ಯಕ್ಷಗಾನ ಪ್ರಾತ್ಯಕ್ಷಿಕೆ, 5:30ರಿಂದ 8ರವರೆಗೆ ಯಕ್ಷಗಾನ ಪ್ರದರ್ಶನ ‘ವಿದ್ಯುನ್ಮತಿ ಕಲ್ಯಾಣ’. ಸ್ಥಳ: ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪ ಉಡುಪಿ. ನಾಟಕ ಪ್ರದರ್ಶನ: ಶತಮಾನೋತ್ಸವದ ಸಂಭ್ರಮದಲ್ಲಿರುವ ಸಿಎಚ್‌ಪಿ ಶಾಲೆ ಬ್ರಹ್ಮಾವರ ಮತ್ತು ಪೃಥ್ವಿ ಸಹಯೋಗದಲ್ಲಿ ಬ್ರಹ್ಮಾವರದ ದಿಮ್‌ಸಾಲ್ ನಾಟಕ ಶಾಲೆ ಪ್ರಸ್ತುತ ಪಡಿಸುವ ನಾಟಕ ವೈದೇಹಿ ಅವರ ‘ಸತ್ರೂ ಅಂದ್ರೆ ಸಾಯ್ತೆರಾ’. ಸಮಯ: ಸಂಜೆ 6:30ಕ್ಕೆ. ಸ್ಥಳ: ಸಿಎಚ್‌ಪಿ ಶಾಲೆ ವಠಾರ, ಬ್ರಹ್ಮಾವರ.
ಚಿತ್ರ ಬಿಡಿಸುವ ಸ್ಪರ್ಧೆ: ಉಡುಪಿ ಜಿಲ್ಲಾ ಕೇಂದ್ರ ಗ್ರಂಥಾಲಯ ವ್ಯಾಪ್ತಿಯಲ್ಲಿ ಬರುವ ಶಾಖಾ ಗ್ರಂಥಾಲಯಗಳಾದ ಕುಂದಾಪುರ, ಕಾರ್ಕಳ, ಸಾಲಿಗ್ರಾಮಗಳಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಜನ್ಮದಿನಾಚರಣೆ ಪ್ರಯುಕ್ತ ಮಕ್ಕಳಿಗೆ ಅಂಬೇಡ್ಕರ್ ಚಿತ್ರ ಬಿಡಿಸುವ ಸ್ಪರ್ಧೆ. ಸಮಯ: ಬೆಳಗ್ಗೆ 9ಕ್ಕೆ. ಸ್ಥಳ: ಗ್ರಂಥಾಲಯ ಶಾಖೆ, ಕುಂದಾಪುರ, ಸಾಲಿಗ್ರಾಮ, ಕಾರ್ಕಳ. ಪುಸ್ತಕ ಪ್ರದರ್ಶನ: ಜಿಲ್ಲಾ ಕೇಂದ್ರ ಗ್ರಂಥಾಲಯದ ವತಿಯಿಂದ ಕುಂದಾಪುರ ಶಾಖೆಯಲ್ಲಿ ಬಿ. ಆರ್.ಅಂಬೇಡ್ಕರ್ ಬರೆದ ಹಾಗೂ ಅವರ ಕುರಿತು ಇತರರು ಬರೆದಿರುವ ಪುಸ್ತಕಗಳ ಪ್ರದರ್ಶನ ಉದ್ಘಾಟನೆ ಸಚಿವ ವಿನಯಕುಮಾರ್ ಸೊರಕೆ. ಸಮಯ: ಪೂರ್ವಾಹ್ನ 11ಕ್ಕೆ. ಸ್ಥಳ: ಶಾಖಾ ಗ್ರಂಥಾಲಯ,ಕುಂದಾಪುರ.
ಅಂಬೇಡ್ಕರ್ ದಿನಾಚರಣೆ: ದ.ಕ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಅಂಬೇಡ್ಕರ್ ದಿನಾಚರಣೆ, ಸಮಯ: ಬೆಳಗ್ಗೆ 10 ಗಂಟೆ, ಸ್ಥಳ: ದ.ಕ ಜಿಲ್ಲಾ ಕಾಂಗ್ರೆಸ್ ಕಚೇರಿ, ಹಂಪನಕಟ್ಟೆ,ಮಂಗಳೂರು. ಅಂಬೇಡ್ಕರ್ ದಿನಾಚರಣೆ: ಮಂಗಳೂರು ವಿವಿ ಕಾಲೇಜು ಹಾಗೂ ಯುವಜನ ಹಾಗೂ ಕ್ರೀಡಾ ಸಚಿವಾಲಯ ನೆಹರೂ ಯುವ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ 125ನೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಆಚರಣೆ, ಸಮಯ: ಅಪರಾಹ್ನ:2:30, ಸ್ಥಳ: ರವೀಂದ್ರ ಕಲಾಭವನ, ವಿವಿ ಕಾಲೇಜು,ಮಂಗಳೂರು. ಬಿಸು ಆಚರಣೆ:ಡಾ: ಶಿವರಾಮ ಕಾರಂತ ನಿಸರ್ಗಧಾಮ ಪಿಲಿಕುಳದ ವತಿಯಿಂದ ಬಿಸು ಆಚರಣೆ, ಸಮಯ:ಬೆಳಗ್ಗೆ 9 ಗಂಟೆ, ಸ್ಥಳ: ಪಿಲಿಕುಳ ನಿಸರ್ಗಧಾಮದಲ್ಲಿರುವ ಗುತ್ತುಮನೆ ಮಂಗಳೂರು ಪುಟ್ಬಾಲ್ ಕಪ್ ಉದ್ಘಾಟನೆ: ರಾಷ್ಟ್ರೀಯ ಮಟ್ಟದ ಎಂಎಸ್‌ಸಿ ಕಪ್ ಫುಟ್ಬಾಲ್ ಪಂದ್ಯಾಟ, ಸಮಯ: ಸಂಜೆ 4 ಗಂಟೆ, ಸ್ಥಳ: ನೆಹರೂ ಮೈದಾನ, ಮಂಗಳೂರು. ಮಂಗಳೂರು ದರ್ಶನ ಕೃತಿ ಅನಾವರಣ: ದಕ್ಷಿಣ ಕನ್ನಡ ಜಿಲ್ಲಾಡಳಿತ, ಮನಪಾ, ಮುಡಾ ಸಹಯೋಗದಲ್ಲಿ ಮೂರು ಸಂಪುಟಗಳ ಮಂಗಳೂರು ನಗರ ಕೋಶ ಮಂಗಳೂರು ದರ್ಶನ ಕೃತಿ ಬಿಡುಗಡೆ, ಸಮಯ: ಸಂಜೆ- 4 ಗಂಟೆ, ಸ್ಥಳ-ಪುರಭವನ, ಮಂಗಳೂರು.

ಇಂದು ಶಾಲಾ ವಾರ್ಷಿಕೋತ್ಸವ
ಕಡಬ, ಎ.13: ಬಂಟ್ರ ಮರ್ಧಾಳ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ ಹಾಗೂ ನೂತನ ಶಾಲಾ ದ್ವಾರದ ಉದ್ಘಾಟನೆ ಕಾರ್ಯಕ್ರಮವು ಎ.14ರಂದು ನಡೆಯಲಿದೆ ಎಂದು ಶಾಲಾ ಸಹಶಿಕ್ಷಕ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಮಲ್ಲಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ವಾರ್ಷಿಕೋತ್ಸವ ಸಮಿತಿಯ ಅಧ್ಯಕ್ಷ ಶಿವಪ್ರಸಾದ್ ಕೈಕುರೆ, ಎಸ್‌ಡಿಎಂಸಿ ಅಧ್ಯಕ್ಷ ಸತೀಶ್ ಟಿ., ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಂಜುನಾಥ ಕೊಲಂತ್ತಾಡಿ, ಮುಖ್ಯಗುರು ದೇವಕಿ ಉಪಸ್ಥಿತರಿದ್ದರು.

ಇಂದು ಬೋಳಂತೂರಿಗೆ ಪೇರೋಡ್
ಕಲ್ಲಡ್ಕ, ಎ.13: ಬೋಳಂತೂರಿನ ರಹ್ಮಾನಿಯಾ ಜುಮಾ ಮಸೀದಿ ಹಾಗೂ ಖುವ್ವತುಲ್ ಇಸ್ಲಾಮ್ ಮದ್ರಸ ಸಮಿತಿಯ ಆಶ್ರಯದಲ್ಲಿ ಸುನ್ನಿ ಆದರ್ಶ ಸಂಗಮ ಮತ್ತು ಸೌಹಾರ್ದ ಸಮಾವೇಶವು ಎ.14ರಂದು ಸಂಜೆ 4ಕ್ಕೆ ಬೋಳಂತೂರಿನ ತಾಜುಲ್ ಉಲಮಾ ನಗರದ ಮರ್ಹೂಂ ಮಮ್ಮುಂಞಿ ಉಸ್ತಾದ್ ವೇದಿಕೆಯಲ್ಲಿ ನಡೆಯಲಿದೆ.  ಜಮಾಅತ್ ಅಧ್ಯಕ್ಷ ಉಮರ್ ದಾರುಲ್ ಫೌಝ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಎಸ್‌ವೈಎಸ್ ಕೇರಳ ರಾಜ್ಯಾಧ್ಯಕ್ಷ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ಮುಖ್ಯ ಪ್ರಭಾಷಣ ಮಾಡಲಿರುವರು ಎಂದು ಸ್ವಾಗತ ಸಮಿತಿಯ ಸಂಚಾಲಕ ಇಬ್ರಾಹೀಂ ಖಲೀಲ್ ಬೋಳಂತೂರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ರಾಜ್ಯ ಎಸ್ಕೆಎಸ್ಸೆಸ್ಸೆಫ್ ಸಂತಾಪ
ಮಂಗಳೂರು, ಎ.13: ಕೇರಳದ ಕೊಲ್ಲಂ ಪರವೂರು ಪುಟ್ಟಿಂಗಳ್ ಮೂಕಾಂಬಿಕ ದೇವಸ್ಥಾನದಲ್ಲಿ ನಡೆದಿರುವ ದುರಂತಕ್ಕೆ ಎಸ್ಕೆಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿಯು ಸಂತಾಪ ಸೂಚಿಸಿದೆ.
ಇದೊಂದು ಆಘಾತಕಾರಿ ಘಟನೆಯಾಗಿದ್ದು ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಸಂಬಂಧ ಪಟ್ಟವರು ಕ್ರಮ ಕೈಗೊಳ್ಳಬೇಕಿದೆ. ದುರಂತದ ವೇಳೆ ಪರಿಹಾರ ಕಾರ್ಯಾಚರಣೆಗೆ ಜಾತಿಭೇದ ಮರೆತು ಎಲ್ಲರೂ ಸಹಕರಿಸಿದ್ದು, ಜೊತೆಗೆ ಎಸ್ಕೆಎಸ್ಸೆಸ್ಸೆಫ್ ಕೇರಳ ರಾಜ್ಯ ಸಮಿತಿಯ ವಿಖಾಯ ಸ್ವಯಂ ಸೇವಕರ ತಂಡವು ಸಲ್ಲಿಸಿದ ತುರ್ತುಸೇವೆ ಹಾಗೂ ರಕ್ತದಾನವೂ ಶ್ಲಾಘನೀಯ ಎಂದು ಎಸ್ಕೆಎಸ್ಸೆಸ್ಸೆಫ್ ಕರ್ನಾಟಕ ರಾಜ್ಯಾಧ್ಯಕ್ಷ ಅನೀಸ್ ಕೌಸರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ನಾಳೆ ಕೆಸಿಎಫ್ ಶೈಕ್ಷಣಿಕ ಕ್ವಿಝ್
ದಮ್ಮಾಮ್, ಎ.13: ಕೆಸಿಎಫ್ ದಮಾಮ್ ವಲಯ ವತಿಯಿಂದ ‘ತಖದ್ದುಮ್-2016’ನ ಅಂಗವಾಗಿ ಎ.15ರಂದು ಅಪರಾಹ್ನ 3ರಿಂದ ರಾತ್ರಿ 10ರವರೆಗೆ ದಮಾಮ್ ಜುಬೈಲ್ ಹೈವೆಯ ಅಲ್ ಶಾದಿ ಆಡಿಟೋರಿಯಂ ಉಮ್ಮು ಅಲ್ ಶಾಹೆಕ್‌ನಲ್ಲಿ ಶೈಕ್ಷಣಿಕ ಕ್ವಿಝ್ ಕಾರ್ಯಕ್ರಮ ನಡೆಯಲಿವೆ ಎಂದು ಪ್ರಕಟನೆ ತಿಳಿಸಿದೆ.

ಎ.16ರಂದು ಮಾಡನ್ನೂರಿಗೆ ನೌಶಾದ್ ಬಾಖವಿ
ಪುತ್ತೂರು, ಎ.13: ಕಾವು ಸಮೀಪದ ಮಾಡನ್ನೂರಿನಲ್ಲಿರುವ ನೂರುಲ್ ಹುದಾ ಇಸ್ಲಾಮಿಕ್ ಅಕಾಡಮಿ ವತಿಯಿಂದ ಮಾಡನ್ನೂರಿನಲ್ಲಿ ಎ.16ರಂದು ಎ.ಎಂ. ನೌಶಾದ್ ಬಾಖವಿಯವರ ಮತಪ್ರವಚನ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮ ಸ್ವಾಗತ ಸಮಿತಿಯ ಅಧ್ಯಕ್ಷ ಹಾಜಿ ಮುಸ್ತಫಾ ಕೆಂಪಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಮಾಡನ್ನೂರು ಮಖಾಂ ಝಿಯಾರತ್‌ನೊಂದಿಗೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಪುತ್ತೂರು ಕೇಂದ್ರ ಮಸೀದಿಯ ಮುದರ್ರಿಸ್ ಸೈಯದ್ ಅಹ್ಮದ್ ಪೂಕೋಯ ತಂಙಳ್ ನೇತೃತ್ವದಲ್ಲಿ ಮಖಾಂ ಝಿಯಾರತ್ ನಡೆಯಲಿದೆ. ನೂರುಲ್ ಹುದಾ ಇಸ್ಲಾಮಿಕ್ ಅಕಾಡಮಿಯ ಅಧ್ಯಕ್ಷ ಬುಶ್ರಾ ಅಬ್ದುಲ್ ಅಝೀಝ್‌ಧ್ವಜಾರೋಹಣ ನೆರವೇರಿಸಲಿದ್ದಾರೆ. ಆ ಬಳಿಕ ಬುರ್ದಾ ಮಜ್ಲಿಸ್ ನಡೆಯಲಿದ್ದು, ಸಂಸ್ಥೆಯ ಗೌರವಾಧ್ಯಕ್ಷ ಕುಂಬೋಳ್ ಸೈಯದ್ ಅಲಿ ತಂಙಳ್ ದುಆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಪುತ್ತೂರು ತಾಲೂಕು ಮುಸ್ಲಿಮ್ ಸಂಯುಕ್ತ ಜಮಾಅತ್ ಅಧ್ಯಕ್ಷ ಹಾಜಿ ಎಸ್.ಇಬ್ರಾಹೀಂ ಕಮ್ಮಾಡಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ನೂರುಲ್ ಹುದಾ ಇಸ್ಲಾಮಿಕ್ ಅಕಾಡಮಿಯ ಅಧ್ಯಕ್ಷ ಅಬ್ದುಲ್ ಅಝೀಝ್ ಬುಶ್ರಾ, ಸಂಚಾಲಕ ಅಬ್ದುಲ್ ಖಾದರ್ ಹಾಜಿ ಇರಾ, ಪ್ರಾಂಶುಪಾಲ ನ್ಯಾಯವಾದಿ ಹನೀಫ್ ಹುದವಿ ದೇಲಂಪಾಡಿ ಮತ್ತು ಮಾಡನ್ನೂರು ಮಸೀದಿ ಅಧ್ಯಕ್ಷ ಅಬ್ದುಲ್ ಖಾದರ್ ಮುಸ್ಲಿಯಾರ್ ಉಪಸ್ಥಿತರಿದ್ದರು.
 

ನದಿಗೆ ಬಿದ್ದು ಮೃತ್ಯು
ಬೆಳ್ತಂಗಡಿ, ಎ.13: ಧರ್ಮಸ್ಥಳ ಗ್ರಾಮದ ನೇತ್ರಾವತಿ ಸ್ನಾನಘಟ್ಟದಲ್ಲಿ ಕುಂದಾಪುರ ತಾಲೂಕಿನ ಬೆಳ್ವೆ ಗ್ರಾಮದ ನಿವಾಸಿ ಸತೀಶ್ ನಾಯಕ್(40) ಎಂಬವರು ಬುಧವಾರ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿದ್ದಾರೆ. ಕುಟುಂಬದೊಂದಿಗೆ ಬಂದಿದ್ದ ಇವರು ನದಿಯಲ್ಲಿ ಸ್ನಾನ ಮಾಡು ತ್ತಿದ್ದಾಗ ಈ ಘಟನೆ ಸಂಭವಿಸಿದೆ.

‘ಎಸೆಸೆಲ್ಸಿ, ಪಿಯುಸಿ ನಂತರ ಮುಂದೇನು?’
19ರಂದು ಮಾರ್ಗದರ್ಶನ ಶಿಬಿರ
ಮಂಗಳೂರು, ಎ. 13: ತೊಕ್ಕೊಟ್ಟಿನ ಹೆಲ್ಪ್ ಇಂಡಿಯಾ ಫೌಂಡೇಶನ್ ವತಿಯಿಂದ ಎ.19ರಂದು ಬೆಳಗ್ಗೆ 9 ಗಂಟೆಗೆ ತೊಕ್ಕೊಟ್ಟು ಕಲ್ಲಾಪುವಿನ ಯುನಿಟಿ ಸಭಾಂಗಣದಲ್ಲಿ ‘ಎಸೆಸೆಲ್ಸಿ ಮತ್ತು ಪಿಯುಸಿ ನಂತರ ಮುಂದೇನು?’ ಎಂಬ ವಿಷಯದಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಮಾರ್ಗದರ್ಶನ ಶಿಬಿರ ಹಮ್ಮಿಕೊಳ್ಳಲಾಗಿದೆ. ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ನಗರದ ಕೆರಿಯರ್ ಗೈಡೆನ್ಸ್ ಆ್ಯಂಡ್ ಇನ್ಫಾರ್‌ಮೇಶನ್ ಸೆಂಟರ್‌ನ ಸ್ಥಾಪಕಾಧ್ಯಕ್ಷ ಉಮರ್ ಯು.ಎಚ್. ಭಾಗವಹಿಸಲಿದ್ದಾರೆ. ಅತ್ಯುತ್ತಮ ಕೋರ್ಸ್‌ನ್ನು ಆಯ್ಕೆ ಮಾಡಲು ಅನುಸರಿಸಬೇಕಾದ ಮಾನದಂಡಗಳು, ಎಸೆಸೆಲ್ಸಿ ಮತ್ತು ಪಿಯುಸಿ ನಂತರದ ಕಲಿಕೆಗೆ ಲಭ್ಯವಿರುವ ಕೋರ್ಸ್‌ಗಳು, ಸರಕಾರಿ ಉದ್ಯೋಗ ಪಡೆಯಲು ಬರೆಯಬೇಕಾದ ಸ್ಪರ್ಧಾತ್ಮಕ ಪರೀಕ್ಷೆಗಳು, ಸರಕಾರ ಮತ್ತು ಸರಕಾರೇತರ ಸಂಸ್ಥೆಗಳಿಂದ ಸಿಗಬೇಕಾದ ವಿದ್ಯಾರ್ಥಿವೇತನಗಳು ಮೊದಲಾದ ವಿಷಯಗಳಿಗೆ ಸಂಬಂಧಿಸಿ ಮಾರ್ಗದರ್ಶನ ನಡೆಯಲಿದೆ. ಶಿಬಿರದಲ್ಲಿ ಪ್ರವೇಶ ಉಚಿತವಾಗಿದ್ದು, ಆಸಕ್ತರು ಎ.17ರೊಳಗೆ ಮುಖತಃ ಅಥವಾ ದೂರವಾಣಿ ಮೂಲಕ ಹೆಸರನ್ನು ನೋಂದಾಯಿಸಬಹುದು. ನೋಂದಣಿ ಅಥವಾ ಮಾಹಿತಿಗಾಗಿ ಮೊ.ಸಂ. 8050507800 ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

ಸಾಮಾಜಿಕ ನ್ಯಾಯದಿನವಾಗಿ ಅಂಬೇಡ್ಕರ್ ಜಯಂತಿ ಆಚರಣೆ: ಎಸ್‌ಡಿಪಿಐ
ಪುತ್ತೂರು, ಎ.13: ಸಂವಿಧಾನಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್‌ರ ಜನ್ಮ ದಿನವನ್ನು ಎಸ್‌ಡಿಪಿಐ ಸಾಮಾಜಿಕ ನ್ಯಾಯ ದಿನಾಚರಣೆಯಾಗಿ ಆಚರಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಎ.14ರಂದು ಪುತ್ತೂರಿನಲ್ಲಿ ಜಿಲ್ಲಾ ಮಟ್ಟದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷದ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷ ಅಬೂಬಕರ್ ಸಿದ್ದೀಕ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಅಂಬೇಡ್ಕರ್ ದಿನಾಚರಣೆ ಅಂಗವಾಗಿ ಎ.14ರಂದು ಸಂಜೆ ಪುತ್ತೂರಿನ ಎಪಿಎಂಸಿ ರಸ್ತೆಯಲ್ಲಿರುವ ಪಕ್ಷದ ಕಚೇರಿ ಬಳಿಯಿಂದ ಮೆರವಣಿಗೆ ನಡೆಯಲಿದ್ದು, ಮುಖ್ಯರಸ್ತೆಯಲ್ಲಿ ಸಾಗಿ ಸರಕಾರಿ ಆಸ್ಪತ್ರೆಯ ಬಳಿಯಲ್ಲಿರುವ ಚಿಣ್ಣರ ಪಾರ್ಕ್‌ನಲ್ಲಿ ಸಮಾಪನಗೊಳ್ಳಲಿದೆ. ಬಳಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ಲತೀಫ್ ಮುಖ್ಯ ಭಾಷಣ ಮಾಡಲಿದ್ದಾರೆ. ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಹನೀಫ್‌ಖಾನ್ ಕೊಡಾಜೆ ಅಧ್ಯಕ್ಷತೆ ವಹಿಸಲಿದ್ದಾರೆ. ರಾಜ್ಯ ಸಮಿತಿಯ ಸದಸ್ಯ ಎಂ.ಕೂಸಪ್ಪಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಎಸ್‌ಡಿಪಿಐ ಪುತ್ತೂರು ವಿಧಾನ ಸಭಾ ಕ್ಷೇತ್ರ ಸಮಿತಿಯ ಕಾರ್ಯದರ್ಶಿ ಅಬ್ದುಲ್ ಹಮೀದ್ ಹಾಜಿ, ಜೊತೆ ಕಾರ್ಯದರ್ಶಿ ಹಂಝ ಅಫ್ನಾನ್, ಕಬಕ ವಲಯ ಅಧ್ಯಕ್ಷ ಅಬ್ದುರ್ರಹ್ಮಾನ್ ಕೊಡಿಪ್ಪಾಡಿ ಉಪಸ್ಥಿತರಿದ್ದರು.

ಕೂಳೂರು: ಇಂದಿನಿಂದ ‘ಸಮ್ಮರ್ ಫೆಸ್ಟಿವಲ್-2016’
ಮಂಗಳೂರು, ಎ.13: ನಗರದ ಹೊರವಲಯದ ಬಂಗ್ರಕೂಳೂರಿನ ಗೋಲ್ಡ್ ಫಿಂಚ್ ಸಿಟಿಯಲ್ಲಿ ಎ.14ರಿಂದ ‘ಮಂಗಳೂರು ಸಮ್ಮರ್ ಫೆಸ್ಟಿವಲ್-2016’ ವಸ್ತು ಪ್ರದರ್ಶನ ಆಯೋಜಿಸಲಾಗಿದೆ. ಇದರಲ್ಲಿ ಮಂಗಳೂರಿನಲ್ಲೇ ಪ್ರಥಮ ಬಾರಿಗೆ ಪ್ರಪಂಚದ 7 ಅದ್ಭುತಗಳ ಮಾದರಿ ಪ್ರದರ್ಶನ ಇರಲಿದೆ. ಸಮ್ಮರ್ ಫೆಸ್ಟಿವಲ್‌ಗೆ ಸಂಜೆ 5:30ಕ್ಕೆ ಆರೋಗ್ಯ ಸಚಿವ ಯು.ಟಿ.ಖಾದರ್‌ಚಾಲನೆ ನೀಡುವರು. ಮೇಯರ್ ಹರಿನಾಥ್ ಮತ್ತಿತರ ಗಣ್ಯರು ಭಾಗವಹಿಸುವರು.
ಸ್ನೋ ವರ್ಲ್ಡ್, ಅಮ್ಯೂಸ್‌ಮೆಂಟ್ ಪಾರ್ಕ್, ಶಾಪಿಂಗ್, ಆಹಾರ ಮಳಿಗೆ ಮೊದಲಾದವುಗಳು ವಸ್ತುಪ್ರದರ್ಶನದಲ್ಲಿ ಇರಲಿದೆ. ಫೆಸ್ಟಿವಲ್ ಎ.14ರಿಂದ 45 ದಿನಗಳು ಪ್ರತಿದಿನ ಅಪರಾಹ್ನ 3:30ಕ್ಕೆ ಆರಂಭಗೊಳ್ಳಲಿದೆ ಎಂದು ರಾಯಲ್ ಕಾರ್ನಿವಲ್‌ನ ಮುಷ್ತಾಕ್ ಖತೀಬ್ ಮತ್ತು ಸೈಯದ್ ಹಫೀಝ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ವಿಶೇಷ ಆರೋಗ್ಯ ತಪಾಸಣಾ ಶಿಬಿರ
ಮಂಗಳೂರು, ಎ.13: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಂಡೋಸಲ್ಫಾನ್ ಸಂತ್ರಸ್ತರಿಗಾಗಿ ನಡೆಯಲಿರುವ ವಿಶೇಷ ಆರೋಗ್ಯ ತಪಾಸಣಾ ಶಿಬಿರಗಳನ್ನು ಜಿಲ್ಲೆಯ ಖಾಸಗಿ ವೈದ್ಯಕೀಯ ಕಾಲೇಜ್‌ಗಳ ಸಹಯೋಗದೊಂದಿಗೆ ಎ.16ರಂದು ಪುತ್ತೂರು ತಾಲೂಕಿನ ಪಾಣಾಜೆ ಮತ್ತು ಎ.19ರಂದು ಬೆಳ್ತಂಗಡಿ ತಾಲೂಕಿನ ಕಣಿಯೂರು, ಪುತ್ತೂರು ತಾಲೂಕಿನ ಕೊಯಿಲಾ, ಸುಳ್ಯ ತಾಲೂಕಿನ ಬೆಳ್ಳಾರೆ, ಮಂಗಳೂರು ತಾಲೂಕಿನ ಶಿರ್ತಾಡಿ ಹಾಗೂ ಎ.20ರಂದು ಬೆಳ್ತಂಗಡಿ ತಾಲೂಕಿನ ಕೊಕ್ಕಡ, ಬಂಟ್ವಾಳ ತಾಲೂಕಿನ ವಿಟ್ಲ ಆರೋಗ್ಯ ಕೇಂದ್ರಗಳಲ್ಲಿ ಏರ್ಪಡಿಸಲಾಗಿದೆ. ಈ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಪ್ರಕಟನೆ ತಿಳಿಸಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X