ಬೆಳ್ಳಿಹಬ್ಬದ ಸಂಭ್ರಮದಲ್ಲಿ ಕ್ರೈಸ್ಟ್‌ಕಿಂಗ್ ಶಿಕ್ಷಣ ಸಂಸ್ಥೆ

ಕಾರ್ಕಳ,ಎ.13: ಸರ್ವಧರ್ಮೀಯರ ಸಹ ಬಾಳ್ವೆಯ ಸಾಂಸ್ಕೃತಿಕ ಹಾಗೂ ಐತಿಹಾಸಿಕ ಸುಂದರ ನಗರಿ ಕಾರ್ಕಳದ ಕ್ರೈಸ್ಟ್‌ಕಿಂಗ್ ಶಿಕ್ಷಣ ಸಂಸ್ಥೆ ಇದೀಗ ಬೆಳ್ಳಿ ಹಬ್ಬದ ಸಂಭ್ರಮದಲ್ಲಿದೆ.
ಕ್ರೈಸ್ಟ್‌ಕಿಂಗ್ ಚರ್ಚ್‌ಗೆ 80ರ ದಶಕದಲ್ಲಿ ಧರ್ಮಗುರುಗಳಾಗಿ ಬಂದ ಫಾ. ದಿ. ಎಫ್. ಪಿ.ಎಸ್ ಮೋನಿಸ್ ಸಮಾನ ಮನಸ್ಕರನ್ನು ಸೇರಿಸಿ ಕ್ರೈಸ್ಟ್‌ಕಿಂಗ್ ಚಾರಿಟೇಬಲ್ ಟ್ರಸ್ಟನ್ನು ಸ್ಥಾಪಿಸಿದರು. ಈ ಟ್ರಸ್ಟ್‌ನ ಮೂಲಕ ಕಟ್ಟಿದ ದೇಗುಲವೇ ಕ್ರೈಸ್ಟ್‌ಕಿಂಗ್ ಶಿಕ್ಷಣ ಸಂಸ್ಥೆ. ಅಂದಿನ ಶಿಕ್ಷಣ ಸಚಿವರಾದ ಎಚ್.ಜಿ. ಗೋವಿಂದೇ ಗೌಡ ರ ಸಹಕಾರದಿಂದ ಶಾಲೆ ಆರಂಭಿಸಲುಬೇಕಾದ ಅನುಮತಿ ದೊರೆ ಯಿತು. ಈ ಕಾರ್ಯದಲ್ಲಿ ಬೆನ್ನೆಲುಬಾಗಿ ನಿಂತವರು ಕಾರ್ಕಳದ ಅಂದಿನ ಶಾಸಕರಾಗಿದ್ದ ವೀರಪ್ಪಮೊಯ್ಲಿ. ಜೊತೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಅಂದಿನ ದ.ಕ. ಜಿಲ್ಲಾ ಉಪನಿರ್ದೇಶಕರಾಗಿದ್ದ ತಿರುಮಲೇಶ್ವರ ರಾವ್ ಹಾಗೂ ಅಂದಿನ ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ ದಿ. ಜಗನ್ನಾಥ ರೈ ಅವರ ಸಹಾಯ ಅಪಾರ. ಈಗಿನ ರಂಗಮಂದಿರದ ಪಕ್ಕದಲ್ಲಿದ್ದ ಹಳೆಯ ಹೆಂಚಿನ ಛಾವಣಿಯ ಕಟ್ಟಡದಲ್ಲಿ ಕ್ರಿ.ಶ 1989-90ರಲ್ಲಿ ಪೂರ್ವ ಪ್ರಾಥಮಿಕ (ಎಲ್.ಕೆ.ಜಿ) ವಿಭಾಗದಿಂದ ಈ ಸಂಸ್ಥೆಯ ಬೀಜ ಮೊಳಕೆಯೊಡೆಯಿತು. ಅಲ್ಲಿಂದ ಈ ಸಂಸ್ಥೆಯ ಜೈತ್ರಯಾತ್ರೆ ಮುಂದುವರಿಯಿತು. ಸಂಸ್ಥೆಯ ಸ್ಥಾಪಕಾಧ್ಯಕ್ಷ ಫಾ.ಮೋನಿಸ್‌ರಿಗೆ ಅನೇಕ ಮಹನೀಯರು ಬೆನ್ನೆಲುಬಾಗಿ ನಿಂತಿದ್ದಾರೆ.
ಉತ್ತಮ ಗುಣಮಟ್ಟದ, ಸರ್ವ ಸೌಲಭ್ಯಗಳ ರಸಾಯನ ಶಾಸ್ತ್ರ, ಭೌತಶಾಸ್ತ್ರ, ಜೀವಶಾಸ್ತ್ರ ಮತ್ತು ಕಂಪ್ಯೂಟರ್ ವಿಜ್ಞಾನಕ್ಕೆ ಸಂಬಂಧಿಸಿದ ಪ್ರಯೋಗಾಲಯಗಳು ಹಾಗೂ ಗ್ರಂಥಾಲಯಗಳು ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಶಕ್ತಿ ತುಂಬಿಸುತ್ತಿವೆ. 2014-15ರಲ್ಲಿ ಈ ಸಂಸ್ಥೆಗೆ ಗುಣಮಟ್ಟದ ಶಿಕ್ಷಣಕ್ಕಾಗಿ ಐ.ಎಸ್.ಒ 9001- 2008 ಪ್ರಮಾಣ ಪತ್ರವು ದೊರೆಯಿತು. ಕಾರ್ಕಳ ದಲ್ಲೇ ಮೊದಲ ಬಾರಿಗೆ ಸುಧಾರಿತ ಆಧುನಿಕ ಬೋಧನಾ ವಿಧಾನವಾದ ಸ್ಮಾರ್ಟ್ ಕ್ಲಾಸ್ ತಂತ್ರಾಂಶವನ್ನು ಅಳವಡಿಸಿದ ಹೆಗ್ಗಳಿಕೆ ಕ್ರೈಸ್ಟ್‌ಕಿಂಗ್ ಶಿಕ್ಷಣ ಸಂಸ್ಥೆಯದ್ದು. ಈಗ ಇವುಗಳಿಗೆಲ್ಲ ಕಲಶ ಪ್ರಾಯವಾಗಿ ಬೆಳ್ಳಿ ಹಬ್ಬದ ಸಂಭ್ರಮ ನೂರ್ಮಡಿಗೊಳಿಸುವಂತೆ ಈ ಸಂಸ್ಥೆಯ ಶಿಕ್ಷಣ ಕ್ಷೇತ್ರದ ಸಾಧನೆಗೆ ವರ್ಲ್ಡ್ ವೈಡ್ ಎಚೀವರ್ಸ್ ಸಂಸ್ಥೆ ಕೊಡ ಮಾಡಿದ ಕರ್ನಾಟಕದ ಅತ್ಯುತ್ತಮ ಸಾರ್ವ ಜನಿಕ ಶಿಕ್ಷಣ ಸಂಸ್ಥೆ ಎಂಬ ಪ್ರಶಸ್ತಿಯ ಗರಿ ಲಭಿಸಿದೆ. *ಇನ್ನಿತರ ಚಟುವಟಿಕೆಗಳು: ಇಲ್ಲಿ ಕೇವಲ ಕಲಿಕೆಗೆ ಮಾತ್ರ ಒತ್ತು ನೀಡದೆ ಮಕ್ಕಳಲ್ಲಿರುವ ವೈವಿಧ್ಯಮಯ ಕನಸುಗಳಿಗೆ ನಿಜರೂಪವನ್ನು ನೀಡುವ ರಚನಾತ್ಮಕ ಕಾರ್ಯಚಟುವಟಿಕೆಗಳಿಗೆ ವೇದಿಕೆಯನ್ನೊದಗಿಸಲಾಗುತ್ತದೆ. ಮಕ್ಕಳಲ್ಲಿ ಸಾಂಸ್ಕೃತಿಕ, ಸಾಹಿತ್ಯಿಕ ಮನೋಭಾವನೆ, ಕಲಾಭಿರುಚಿ ಮತ್ತು ಸೃಜನಶೀಲತೆಯನ್ನು ಬೆಳೆಸಲು
ವಿವಿಧ ಕಾರ್ಯ ಚಟುವ ಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಪ್ರತಿ ಹದಿನೈದು ದಿವಸಗಳಿಗೊಮ್ಮೆ ವಿವಿಧ ಸಂಪ ನ್ಮೂಲ ವ್ಯಕ್ತಿಗಳಿಂದ ಮಕ್ಕಳ ಮಾನಸಿಕ ಮತ್ತು ಜ್ಞಾನಾಭಿವೃದ್ಧಿಗೆ ಪೂರಕವಾದ ಚಟುವ ಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಈ ಸಂಸ್ಥೆಯಲ್ಲಿ ಜ್ಞಾನಾರ್ಜನೆಗೈದ ಸಾವಿರಾರು ವಿದ್ಯಾರ್ಥಿಗಳು ಇಂದು ದೇಶ, ವಿದೇಶಗಳಲ್ಲಿ ಉನ್ನತ ಸ್ಥಾನಗಳನ್ನು ಅಲಂ ಕರಿಸಿ ಸಾರ್ಥಕ ಜೀವನ ಸಾಗಿಸುತ್ತಿರುವುದು ಸಂಸ್ಥೆಯ ಪಾಲಿಗೆ ಹೆಮ್ಮೆಯ ವಿಚಾರ. ರಜತ ಮಹೋತ್ಸವವನ್ನು ಅವಿಸ್ಮ ರಣೀಯವನ್ನಾಗಿ ಮಾಡಲು ಈ ಸಂಸ್ಥೆಯಲ್ಲಿ ಸುಮಾರು 4.5 ಕೋಟಿ ರೂಪಾಯಿ ವೆಚ್ಚದಲ್ಲಿ ಹಲವಾರು ಅಭಿವೃದ್ಧಿ ಕಾರ್ಯ ಗಳು ನಡೆದಿವೆ. ಸಂಸ್ಥೆಯ ಪ್ರಾಥಮಿಕ ವಿಭಾಗಕ್ಕೆ ಅತ್ಯುತ್ತಮ ದರ್ಜೆಯ ನೂತನ ಕಟ್ಟಡ ನಿರ್ಮಾಣಗೊಂಡಿದೆಕಿಂಡರ್ ಗಾರ್ಡನ್ ಮಕ್ಕಳಿಗೆ ಸುಸಜ್ಜಿತವಾದ ಆಟದ ಉದ್ಯಾನವನ ಹಾಗೂ ಆಟದ ಮನೆಯನ್ನು ನಿರ್ಮಿಸಲಾಗಿದೆ. ವಿದ್ಯಾರ್ಥಿಗಳಿಗಾಗಿ ಸುಸಜ್ಜಿತವಾದ ಕ್ಯಾಂಟೀನ್ ನಿರ್ಮಾಣವಾಗಿದೆ. ಸಾಂಸ್ಕೃತಿಕ ಮತ್ತು ಸಭಾ ಕಾರ್ಯ ಕ್ರಮಗಳಿಗಾಗಿ ವಿನೂ ತನ ಶೈಲಿಯ ಸಭಾಂಗಣ ಸಜ್ಜುಗೊಂಡಿದೆ. ಸಂಸ್ಥೆಗೆ ಭದ್ರವಾದ ಆವರಣ ಗೋಡೆ ಮತ್ತು ಸುಂದರವಾದ ಸ್ವಾಗತ ಗೋಪುರವನ್ನು ನಿರ್ಮಿಸಲಾಗಿದೆ. ಕ್ರೈಸ್ಟ್‌ಕಿಂಗ್ ಚಾರಿಟೇಬಲ್ ಟ್ರಸ್ಟ್‌ನ ಈಗಿನ ಕಾರ್ಯದರ್ಶಿಗಳಾದ ಆವೆಲಿನ್ ಲೂಯಿಸ್, ಸದಸ್ಯರಾದ ಡಾ.ಪೀಟರ್ ಫೆರ್ನಾಂಡಿಸ್, ವಾಲ್ಟರ್ ಡಿಸೋಜ, ಲೂಸಿ ಡಿಲಿಮಾ ಇವರುಗಳ ನೇತೃತ್ವದ ಆಡಳಿತ ಮಂಡಳಿಯ ಮೂಲಕ ಸಾಧನೆಯ ಉತ್ತುಂಗದ ಕಡೆಗೆ ಸಾಗುತ್ತಿದೆ.







