ಮೂಡುಬಿದಿರೆ: ನಾಳೆ ವಿದ್ಯುತ್ ನಿಲುಗಡೆ
ಮಂಗಳೂರು, ಎ.13: ಮೂಡುಬಿದಿರೆ ವಿದ್ಯುತ್ ಉಪ ಕೇಂದ್ರದಲ್ಲಿ 20 ಎಂವಿಎ ಪರಿವರ್ತಕ ಸಂಖ್ಯೆ 1ರ 110 ಕೆವಿ ವಿಭಾಗದಲ್ಲಿ ಎ.15ರಂದು ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಮೂಡುಬಿದಿರೆ ಉಪಕೇಂದ್ರದಿಂದ ಹೊರಡುವ ಎಲ್ಲ 11 ಕೆವಿ ಫೀಡರ್ಗಳಲ್ಲಿ ಅಂದು ಬೆಳಗ್ಗೆ 10ರಿಂದ ಸಂಜೆ 4ರವರೆಗೆ ವಿದ್ಯುತ್ ನಿಲುಗಡೆ ಆಗಲಿದೆ. ಅದರಂತೆ ಮೂಡುಬಿದಿರೆ, ಕೋಟೆಬಾಗಿಲು, ಶಿರ್ತಾಡಿ, ಬೆಳುವಾಯಿ, ನಿಡ್ಡೋಡಿ, ಕಲ್ಲಮುಂಡ್ಕೂರು, ತೋಡಾರು, ಮಿಜಾರು, ಪುಚ್ಚೆಮೊಗರು, ಇರುವೈಲು, ಪಾಲಡ್ಕ, ಕಡಂದಲೆ, ಪುತ್ತಿಗೆ, ತಾಕೊಡೆ, ಮಾರೂರು, ಅಳಿಯೂರು, ಅಶ್ವಥಪುರ, ತೆಂಕಮಿಜಾರು, ಬಡಗಮಿಜಾರು, ನೀರುಡೆ, ದರೆಗುಡ್ಡೆ, ಮೂಡು ಮಾರ್ನಾಡು, ಪಡುಮಾರ್ನಾಡು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಪ್ರಕಟನೆ ತಿಳಿಸಿದೆ.
Next Story