Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸೋಷಿಯಲ್ ಮೀಡಿಯಾ
  3. ರೈತನ ಹೆಣದ ಮೇಲೆ “ಕಾರ್ಪೋರೇಟ್”ಗಳಿಗೆ...

ರೈತನ ಹೆಣದ ಮೇಲೆ “ಕಾರ್ಪೋರೇಟ್”ಗಳಿಗೆ ಗುತ್ತಿಗೆಯ ಹರಿವಾಣ ಇದು ಅಂಬೇಡ್ಕರ್ ಜಯಂತಿಗೆ ಕೊಡುಗೆ…

ರಾಜಾರಾಂ ತಲ್ಲೂರ್ರಾಜಾರಾಂ ತಲ್ಲೂರ್14 April 2016 10:44 AM IST
share
ರೈತನ ಹೆಣದ ಮೇಲೆ “ಕಾರ್ಪೋರೇಟ್”ಗಳಿಗೆ ಗುತ್ತಿಗೆಯ ಹರಿವಾಣ ಇದು ಅಂಬೇಡ್ಕರ್ ಜಯಂತಿಗೆ ಕೊಡುಗೆ…

ಅಂಬೇಡ್ಕರ್ ಜಯಂತಿ ದಿನ ನಾಡಿನ ರೈತ-ತಳ ಸಮುದಾಯಗಳಿಗೆ ಕೇಂದ್ರ ಸರಕಾರ ಮುಟ್ಟಿ ನೋಡಿಕೊಳ್ಳುವಂತಹ ಏಟು ನೀಡಿದೆ. ಆತ್ಮಹತ್ಯೆ ಮಾಡಿಕೊಳ್ಳುವ ರೈತರ ಹೆಸರಿನಲ್ಲಿ ಕಾರ್ಪೋರೇಟ್ ಸಮುದಾಯಕ್ಕೆ ಭೂಮಿಯನ್ನು ತಟ್ಟೆಯಲ್ಲಿಟ್ಟು ಕೊಡುವ ಹುನ್ನಾರದಂತೆ ಇದು ಕಾಣಿಸುತ್ತಿದೆ.
ಟಿ. ಹಕ್ ನೇತ್ರತ್ವದ ಸಮಿತಿ ನೀತಿ ಆಯೋಗದ ಮೂಲಕ ನೀಡಿರುವ ಈ ಕರಡು ಮಸೂದೆ ವಿರೋಧಿಸದಿದ್ದರೆ ರೈತರಿಗೆ ಉಳಿಗಾಲ ಇಲ್ಲ. ಭೂರಹಿತ ರೈತರಿಗೆ ಸಾಲ, ವಿಮೆ, ಪರಿಹಾರ ಒದಗಿಸುವ ಹೆಸರಲ್ಲಿ ಕಾರ್ಪೋರೇಟ್ ಗಳ ಹೊಟ್ಟೆ ತುಂಬಿಸುವ ದುಷ್ಟ ಯೋಚನೆ ಇದು. ರೈತಪರ ಎಂದು ಹೇಳಿಕೊಳ್ಳುವ ನಾಡಿನ ಎಲ್ಲ ಸಂಘಟನೆಗಳಿಗೆ ರೈತರ ಮೇಲೆ ಕಿಂಚಿತ್ತಾದರೂ ಕಾಳಜಿ ಇದ್ದರೆ, ಉಳಿವಿಗಾಗಿ ಹೋರಾಟ ಆರಂಭ ಆಗುವುದು ಅನಿವಾರ್ಯ ಆಗಲಿದೆ.
ಕಾಂಗ್ರೆಸ್ ಆಡಳಿತ ಕಾಲದಲ್ಲಿ “ ರಿಲಯನ್ಸ್ ಫ್ರೆಷ್” ಎಂಬ ವಿಫಲ ಯತ್ನವೊಂದು ನಡೆದದ್ದು ನೆನಪಿದೆಯೇ? ಅವರದ್ದೇ ಕ್ರಷಿಭೂಮಿ, ಅವರದ್ದೇ ಬೆಳೆ, ಅವರದ್ದೇ ಸಾಗಾಟ, ಅವರದ್ದೇ ಉಗ್ರಾಣ, ಅವರದ್ದೇ ಮಾರಾಟ – ಇಂತಹದೊಂದು ಏಕಸ್ವಾಮ್ಯಕ್ಕೆ ಸಾರ್ವಜನಿಕ ವಿರೋಧ ಬಂದು, ಈ ಯೋಜನೆ ವಿಫಲಗೊಂಡಿತ್ತು. ಆಗ ಊರೂರಲ್ಲಿ ಏಜಂಟರನ್ನು ಬಿಟ್ಟು ಭೂಮಿ ಖರೀದಿಗೆ ಹೊರಟಿದ್ದ ರಿಲಯನ್ಸ್ ಈ ಕಾನೂನಿನಡಿ ನೇರಾನೇರ ಭೂಮಿ ಗುತ್ತಿಗೆಗೆ ಪಡೆಯಬಹುದಾಗಿದೆ.
ಈ ದೇಶದ ಅತಿದೊಡ್ಡ ಕ್ರಷಿ ಆಮದುಗಾರರು ಯಾರು ಗೊತ್ತೇ? ಇದೇ ಅಂಬಾನಿ, ಅದಾನಿ ಅಂಡ್ ಕೋ. ಸಹಜವಾಗಿಯೇ ಈ ಮಂದಿಗೆ ಸರ್ಕಾರದ ಈ ಮಿತಿರಹಿತ ಭೂಗುತ್ತಿಗೆ ಕಾನೂನು ಅಮಿತಾನಂದ ತರಲಿದೆ. ಅದಕ್ಕೆ ಸರಿಯಾಗಿ ಕರಡು ಕಾಯಿದೆ "ಕ್ರಷಿ ಮತ್ತು ಸಂಬಂಧಿತ ಚಟುವಟಿಕೆಗಳಿಗೆ" ಎಂದು ಹೇಳುತ್ತಿದೆ. ಆ ವಿವರಣೆ ಕಣ್ಣಿದ್ದವರಿಗೆ ಅದೇನೆಂದು ಹೇಳುತ್ತದೆ: “Agriculture and Allied Activities ” shall mean raising of crops including food and non food crops, fodder or grass; fruits and vegetables, flowers, any other horticultural crops and plantation; animal husbandry and dairy; poultry farming, stock breeding; fishery; agro forestry, agro-processing and other related activities by farmers and farmer groups.


ಕರ್ನಾಟಕದಲ್ಲಿ ಉಳುವವನೇ ಹೊಲದೊಡೆಯ ಎಂದು ಭೂಸುಧಾರಣಾ ಮಸೂದೆಗೆ ಒಪ್ಪಿಗೆ ಕೊಟ್ಟವರು ನಾವು. ಈಗ ದನ್ನು ಮತ್ತೆ ಬಲಾಡ್ಯರ ಕೈಗೆ ಗುತ್ತಿಗೆಯಾಗಿ ಹಿಂದೆಕೊಡುವ ಕಾನೂನು ಇದು. ತಮಾಷೆ ಎಂದರೆ, ಈ ಭೂಮಸೂದೆಯ ವಿರೋಧ ಮಾಡಿದ ಮೇಲುವರ್ಗಗಳು ಹಾಗೂ ಭೂಮಸೂದೆಯ ಕಾರಣದಿಂದಾಗಿ ಶಿಕ್ಷಣ-ಆರ್ಥಿಕ ಬಲ, ಸಾಮಾಜಿಕ ಸ್ಥಾನಮಾನ ಪಡೆದಿರುವ ಕೆಳಜಾತಿಗಳು ಒಟ್ಟು ಸೇರಿ ಈಗ “ನವಬಲಾಡ್ಯ”ಕಾರ್ಪೋರೇಟ್ ಗಳ ಕೈಗೆ ಕೋಲು ಕೊಟ್ಟು ಪೆಟ್ಟು ತಿನ್ನಲು ಹೊರಟಿರುವುದು.
ಆಸಕ್ತಿ ಇರುವವರಿಗೆ ಈ ಕರಡು ಕಾಯಿದೆ ಓದಲು ಲಿಂಕ್ ಇಲ್ಲಿದೆ: http://niti.gov.in/mgov_file/Final_Report_Expert_Group_on_Land_Leasing.pdf

share
ರಾಜಾರಾಂ ತಲ್ಲೂರ್
ರಾಜಾರಾಂ ತಲ್ಲೂರ್
Next Story
X