ಮೋದಿ ಮುಖ್ಯಮಂತ್ರಿ, ಪ್ರಧಾನಿಯಾದದ್ದು ದಲಿತ ಹುಡುಗಿಯಿಂದ !

ಅಹ್ಮದಾಬಾದ್ , ಎ. 14: ಗುಜರಾತ್ ಸಮಾಜ ಕಲ್ಯಾಣ ಹಾಗು ಸಬಲೀಕರಣ ಸಚಿವ ರಮಣಲಾಲ್ ವೋರ ಪ್ರಕಾರ ನರೇಂದ್ರ ಮೋದಿ ಎಲ್ಲ ಅಡೆತಡೆಗಳನ್ನು ಎದಿರಿಸಿಯೂ 14 ವರ್ಷ ರಾಜ್ಯದ ಮುಖ್ಯಮಂತ್ರಿಯಾಗಿ ಉಳಿಯಲು ಕಾರಣ ಓರ್ವ ದಲಿತ ಬಾಲಕಿಯಂತೆ !
ರವೀನ ಜಾಧವ್ ಎಂಬ ದಲಿತ ಹುಡುಗಿ ಮುಖ್ಯಮಂತ್ರಿಗಳ ಬಂಗಲೆಯಲ್ಲಿ ಗೃಹ ಪ್ರವೇಶದ ಸಂದರ್ಭದಲ್ಲಿ ಇಟ್ಟಿದ್ದ ಪವಿತ್ರ ಭಸ್ಮ ಮೋದಿಯವರನ್ನು ಸೊಹ್ರಾಬುದ್ದೀನ್ , ಇಷ್ರತ್ ಹಾಗು ಸಿ ಬಿ ಐ ಮತ್ತಿತರ ವಿವಾದಗಳಿಂದ ರಕ್ಷಿಸಿದೆ ಎಂಬುದು ಈ ಸಚಿವರ ವಾದ. ಹೀಗೆಂದು ಬುಧವಾರ ಇನ್ನೋರ್ವ ಸಚಿವ ಭೂಪೇಂದ್ರ ಸಿಂಗ್ ಚುಡಾಸಮ ಅವರು ಬರೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ವೋರ ಹೇಳಿದ್ದಾರೆ.
"ಈ ದಲಿತ ಹುದುಗೆಇ ಮುಖ್ಯಮಂತ್ರಿಗಳ ನಿವಾಸದಲ್ಲಿ ಆ ಪವಿತ್ರ ಭಸ್ಮ ಇಟ್ಟಿದ್ದೇ ಅವರು ಎಲ್ಲ ಹಾನಿಗಳಿಂದ ರಕ್ಷಿಸಿಕೊಳ್ಳಲು ಕಾರಣ. 2001 ರಲ್ಲಿ ಮೋದಿ ಮುಖ್ಯಮಂತ್ರಿಯಾಗಿ ಬಂದಾಗ ತಮ್ಮ ಅಧಿಕೃತ ನಿವಾಸದಲ್ಲಿ ಈ ದಲಿತ ಹುಡುಗಿ ಭಸ್ಮ ಇಟ್ಟ ಮೇಲೆಯೇ ಅವರು ಮನೆಗೆ ಪ್ರವೇಶ ಮಾಡಿದ್ದು. ಆ ಬಳಿಕ ಸೊಹ್ರಾಬುದ್ದೀನ್ , ಇಷ್ರತ್ ಜಹಾನ್, ಸಿ ಬಿ ಐ ದಾಳಿ ಏನೆಲ್ಲಾ ನಡೆಯಿತು . ಆದರೆ ಅವರು 14 ವರ್ಷ ಮುಖ್ಯಮಂತ್ರಿಯಾಗಿ ಮುಂದುವರಿದು ಕೊನೆಗೆ ಪ್ರಧಾನ ಮಂತ್ರಿಯಾಗಿ ಇಲ್ಲಿಂದ ದೆಹಲಿದೆ ಹೋದರು. ಇದಕ್ಕೆಲ್ಲ ಆ ದಲಿತ ಹುಡುಗಿ ರವೀನ ಜಾಧವ್ ಕಾರಣ " ಎಂದು ವೋರ ಹೇಳಿದ್ದಾರೆ.







