ನಾಳೆಯಿಂದ ಪಿಯು ಪರೀಕ್ಷೆಯ ಮೌಲ್ಯ ಮಾಪನ : ಸಚಿವ ಕಿಮ್ಮನೆ ರತ್ನಾಕರ್
ಪರ್ಯಾಯ ಮಾರ್ಗದ ಮೂಲಕ ಸರಕಾರದ ಚಿಂತನೆ

ಬೆಂಗಳೂರು, ಎ.14: ಬೇಡಿಕೆ ಈಡೇರಿಸದಿದ್ದರೆ ಮೌಲ್ಯ ಮಾಪನ ಮಾಡುವುದಿಲ್ಲ ಎಂದು ಪಿಯು ಉಪನ್ಯಾಸಕರು ಪಟ್ಟು ಹಿಡಿದು ಧರಣಿ ಕುಳಿತಿರುವ ಹಿನ್ನೆಲೆಯಲ್ಲಿ ಸರಕಾರ ಪರ್ಯಾಯ ಮಾರ್ಗದ ಮೂಲಕ ಮೌಲ್ಯ ಮಾಪನ ನಡೆಸಲು ನಿರ್ಧರಿಸಿದೆ. ಶುಕ್ರವಾರದಿಂದ ಮೌಲ್ಯಮಾಪನ ಆರಂಭಗೊಳ್ಳಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ತಿಳಿಸಿದ್ದಾರೆ.
ಎಪ್ರಿಲ್ ಅಂತ್ಯದೊಳಗೆ ಮೌಲ್ಯಮಾಪನ ಪೂರ್ಣಗೊಳ್ಳಲಿದ್ದು, ಮೇ ಮೊದಲ ವಾರದಲ್ಲಿ ಫಲಿತಾಂಶ ಪ್ರಕಟಿಸಲಾಗುವುದು ಎಂದು ಸಚಿವ ಕಿಮ್ಮನೆ ತಿಳಿಸಿದ್ದಾರೆ.
ಮೌಲ್ಯಮಾಪನಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಬೇರೆ ಉಪನ್ಯಾಸಕರಿದ್ದಾರೆ. ಅನಕ್ಷರಸ್ಥರ ಕೈಯಲ್ಲಿ ಮೌಲ್ಯಮಾಪನ ಮಾಡಿಸುವುದಿಲ್ಲ ಎಂದು ಸಚಿವ ಕಿಮ್ಮನೆ ರತ್ನಾಕರ ಸ್ಪಷ್ಟಪಡಿಸಿದರು.
Next Story





