ಎಂಎಲ್‌ಸಿಗಳನ್ನು ಹೊರದಬ್ಬಿ ಅವರತ್ತ ಚಪ್ಪಲಿ ಎಸೆದ ಉಪನ್ಯಾಸಕರು ..!
ನಿಮ್ಮಿಂದ ನಮ್ಗೆ ಮೋಸವಾಗಿದೆ. ನೀವು ಇಲ್ಲಿಗೆ ಬರುವುದೇ ಬೇಡ.

ಬೆಂಗಳೂರು, ಎ.14: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಮೌಲ್ಯ ಮಾಪನ ಬಹಿಷ್ಕರಿಸಿ ಫ್ರೀಡಂ ಪಾರ್ಕ್‌ನಲ್ಲಿ ಧರಣಿ ಕುಳಿತಿರುವ ಉಪನ್ಯಾಸಕರು ತಮ್ಮೊಂದಿಗಿದ್ದ ನಾಲ್ವರು ವಿಧಾನ ಪರಿಷತ್ ಸದಸ್ಯರನ್ನು ಹೊರದಬ್ಬಿದ್ದಾರೆ.
ವಿಧಾನ ಪರಿಷತ್ ಸದಸ್ಯರಾದ ಗಣೇಶ್ ಕಾರ್ನಿಕ್ , ಅರುಣ್ ಶಹಾಪುರ‍್ ಸೇರಿದಂತೆ ನಾಲ್ವರನ್ನು ಹೊರಕಳುಹಿಸಿದ್ದಾರೆ. ವಿಧಾನಪರಿಷತ್ ಸದಸ್ಯರು ಉಪನ್ಯಾಸಕರ ಶಿಬಿರದಿಂದ ತೆರಳುತ್ತಿದ್ದಂತೆ ಅವರ ಮೇಲೆ ಚಪ್ಪಲಿ ಎಸೆದು ಆಕ್ರೋಶ ವ್ಯಕ್ತಪಡಿಸಿದರು. ಅವರ ವಿರುದ್ಧ ಘೋಷಣೆ ಕೂಗಿದರು.
ಎಂಎಲ್‌ಸಿಗಳಿಂದ ನಮಗೆ ಅನ್ಯಾಯವಾಗಿದೆ ಎಂದು ಹೇಳಿದ ಉಪನ್ಯಾಸಕರು" ನಿಮ್ಮಿಂದ ನಮ್ಗೆ ಮೋಸವಾಗಿದೆ. . ನೀವು ಇಲ್ಲಿಗೆ ಬರುವುದೇ ಬೇಡ. ನೀವು ಕಣ್ಣೊರೆಸೋದು ನಮ್ಗೆ ಬೇಕಿಲ್ಲ. ಅಷ್ಟಕ್ಕೂ ನೀವ್ಯಾರಿ .. ನಮ್ಮ ಕಷ್ಟ ನಮ್ಗೆ” ಎಂದು ಹೇಳಿದ ತರಾಟೆಗೆ ತೆಗೆದುಕೊಂಡ ಉಪನ್ಯಾಸಕರು ಎಂಎಲ್ಸ್‌ಗಳನ್ನು ತಮ್ಮ ಶಿಬಿರದಿಂದ ಕಳುಹಿಸಿದ್ದಾರೆ.
Next Story





