ಎಷ್ಟೇ ಕಿರುಕುಳಕೊಟ್ಟರೂ ದೇಶ ತೊರೆಯಲಾರೆ: ರಾಬರ್ಟ್‌ವಾದ್ರಾ

ಹೊಸದಿಲ್ಲಿ, ಎ. 14: ಹರ್ಯಾಣದ ಭೂ ವಿವಾದದ ಕುರಿತು ಚರ್ಚೆಯಲ್ಲಿರುವ ರಾಬರ್ಟ್‌ವಾದ್ರಾ ಎಎನ್‌ಐಗೆ ನೀಡಿದ ಸಂದರ್ಶನದಲ್ಲಿ ಅವರ ಮತ್ತು ದೇಶಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ತನ್ನ ಅಭಿಪ್ರಾಯವನ್ನು ಪ್ರಕಟಿಸುತ್ತಾ ಏನೇ ಆಗಲಿ ತಾನು ದೇಶ ತೊರೆದು ಹೋಗಲಾರೆ ಎಂದು ಹೇಳಿದ್ದಾರೆ.
ಈಗಿನ ಸರಕಾರ ಮತ್ತು ದೇಶದ ವ್ಯಾಪಾರಿಗಳ ಸ್ಥಿತಿಗತಿಯ ಕುರಿತು ಕೇಳಿದಾಗ ಸರಕಾರ ಅತ್ಯುತ್ತಮವಾಗಿ ಕೆಲಸ ಮಾಡಬೇಕೆಂದು ತನ್ನ ಇಚ್ಛೆಯಾಗಿದೆ. ಆದರೆ ಜನರು ಬಂಡಾಯವೇಳಬಹುದೆಂದು ಅನಿಸುತ್ತದೆ. ಮತ್ತು ಯಾವುದು ಸರಿಯಾದುದು ಮತ್ತು ಯಾವುದು ತಪ್ಪಾದುದು ಎಂದು ಜನರೇ ಅರಿತುಕೊಳ್ಳುತ್ತಾರೆ ಎಂದು ಅವರು ಹೇಳಿದ್ದಾರೆ.
ದೇಶಾದ್ಯಂತ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆಯ ಕುರಿತು ಕೇಳಿದಾಗ ನಾವೊಂದು ವಿವಿಧ ರಾಷ್ಟ್ರವಾಗಿದ್ದೇವೆ. ಜನರು ತಮ್ಮ ಧ್ವನಿಯನ್ನು ಎತ್ತುತ್ತಾರೆ. ಅದನ್ನು ನಾವು ಒಪ್ಪಿಕೊಳ್ಳಬೇಕಾಗಿದೆ. ಯುವಕರಲ್ಲಿ ಯಾವಾಗಲೂ ಹೇಳಲಿಕ್ಕೆ ಏನಾದರೊಂದು ಇದ್ದೇ ಇರುತ್ತದೆ ಎಂದರು. ಯಾರೂ ಕೂಡಾ ದೇಶದ ವಿರುದ್ಧ ಹೋಗಲು ಹೇಳುವುದಿಲ್ಲ. ತಮ್ಮ ಚಿಂತನೆಯ ರೀತಿ ಬೇರೆ ಇರುತ್ತದೆ. ನಾವು ಯುವಕರನ್ನು ಕೀಳ್ಮಟ್ಟದಲ್ಲಿ ತೋರಿಸಲಾರೆವು. ಅಥವಾ ನಮ್ಮ ಶರ್ತಗಳಲ್ಲಿ ಅವರನ್ನು ಇರಿಸಲಾರೆವು. ನನ್ನನ್ನು ಎಷ್ಟೇ ಅಪಮಾನಿಸಿದರೂ ನಾನು ಎಂದೂ ದೇಶವನ್ನು ತೊರೆಯಲಾರೆ. ನನ್ನ ಕುರಿತು ಏನೇ ಹೇಳಿದರೂ ದೇಶಬಿಡಲಾರೆ ಎಂದುದೇಶ ಭಕ್ತಿ ಮತ್ತು ಅವರ ಮೇಲಿರುವ ಆರೋಪಗಳ ಕುರಿತು ಕೇಳಿದಾಗ ರಾಬರ್ಟ್ ವಾದ್ರ ಹೇಳಿರುವುದಾಗಿ ವರದಿಯಾಗಿದೆ.
ರಾಜಕೀಯ ಪ್ರವೇಶದ ಕುರಿತು ಕೇಳಿದಾಗ, ತಾನು ಗಾಂಧಿಪರಿವಾರದ ಸದಸ್ಯನಾದುದು ರಾಜಕೀಯಕ್ಕೆ ಬರಲಿಕ್ಕಾಗಿಯೇ ಎಂದು ಅವರೇ ಮರು ಪ್ರಶ್ನೆ ಎಸೆದರು. ಯಾವಾಗ ನನಗೆ ಜನರಿಗಾಗಿ ಕೆಲಸಮಾಡಲು ಸಾಧ್ಯ ಎಂದು ಅನಿಸುತ್ತದೆ ಆಗ ನನ್ನೊಳಗಿನ ಮನಸ್ಸು ಧ್ವನಿ ಎಬ್ಬಿಸಿದರೆ ಆಗ ರಾಜಕೀಯವನ್ನು ಪ್ರವೇಶಿಸುವೆ ಎಂದು ಅವರು ಹೇಳಿದ್ದಾರೆ.







