ಹರೇಕಳ : ಶ್ರೀ ರಾಮಕೃಷ್ಣ ಅನುದಾನಿತ ಫೌಡಶಾಲೆಯಲ್ಲಿ ಡಾ.ಬಿ.ಆರ್ ಅಂಬೆಡ್ಕರ್ರವರ 125ನೇ ಜನ್ಮ ದಿನ ಆಚರಣೆ

ಹರೇಕಳ ಶಾಲೆಯಲ್ಲಿ ಡಾ.ಬಿ.ಆರ್ ಅಂಬೆಡ್ಕರ್ವರ ಜನ್ಮ ದಿನಾಚರಣೆ
ಕೊಣಾಜೆ:ಹರೇಕಳ ಶ್ರೀ ರಾಮಕೃಷ್ಣ ಅನುದಾನಿತ ಫೌಡಶಾಲೆಯಲ್ಲಿ ಡಾ.ಬಿ.ಆರ್ ಅಂಬೆಡ್ಕರ್ರವರ 125ನೇ ಜನ್ಮ ದಿನವನ್ನು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಗುರುವಾರ ಆಚರಿಸಲಾಯಿತು. ಹರೇಕಳ ಶಾಲಾ ಸ್ವರ್ಣಮಹೋತ್ಸವ ಸಮಿತಿಯ ಅಧ್ಯಕ್ಷರಾದ ಕಡೆಂಜ ಅಶೋಕ್ ಕುಮಾರ್ ಚೌಟರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಭಾರತೀಯ ಸಮಾಜಕ್ಕೆ ಕಳಂಕವನ್ನುಂಟು ಮಾಡಿದ ಮತ್ತು ಸಾಮಾಜಿಕ ಪಧ್ದತಿಯಲ್ಲಿ ಅತ್ಯಂತ ಅಮಾನವೀಯ ಆಚರಣೆಯಾದ ಅಸ್ಪ್ರಶ್ಯತೆಯ ವಿರುಧ್ದ ಹೋರಾಡಿ ದೇಶಕ್ಕೊಂದು ಗೌರವ ತಂದು ಕೊಟ್ಟವರು ಡಾ.ಬಿ.ಆರ್ ಅಂಬೇಡ್ಕರ್ ಅವರು. ಆದುದರಿಂದಲೇ ಜನರು ಅವರನ್ನು ಪ್ರೀತಿಯಿಂದ ಬಾಬಾ ಸಾಹೇಬ್ ಎಂದೇ ಕರೆಯುತ್ತಿದ್ದರು ಎಂದು ಹೇಳಿದರು. ಶಾಲಾ ಮುಖ್ಯೋಪಾಧ್ಯಾಯ .ಕೆ.ರವೀಂದ್ರ ರೈ ಅವರು ಅಂಬೆಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪಾಂಜಲಿ ಸಮರ್ಪಿಸಿ ನುಡಿನಮನ ಸಲ್ಲಿಸಿದರು. ಶಾಲಾ ಮಕ್ಕಳಿಗೆ ಅಂಬೆಡ್ಕರ್ರವರ ಜೀವನ ಚಿತ್ರಗಳನ್ನು ಬಿಂಬಿಸುವ ನಾಟಕ ನೃತ್ಯ. ಸಂಗೀತ ಕಾರ್ಯಕ್ರಮಗಳಲ್ಲದೆ ಭಾಷಣ ಸ್ಪರ್ಧೆಗಳು ನಡೆದವು. ಶಾಲಾ ಸಂಚಾಲಕ ಜಯರಾಮ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಕಡೆಂಜ ಸೋಮಶೇಖರ ಚೌಟ ಶಾಲಾ ಅಧ್ಯಾಪಕರುಗಳು ವೇದಿಕೆಯಲ್ಲಿ ಉಪಸ್ಧಿತರಿದ್ದರು. ರವಿಶಂಕರ್ ಸ್ವಾಗತಿಸಿದರು. ಕೃಷ್ಣ ಶಾಸ್ತ್ರಿ ಧನ್ಯವಾದ ಸಲ್ಲಿಸಿದರು. ತ್ಯಾಗಂ ಕಾರ್ಯಕ್ರಮ ನಿರೂಪಿಸಿದರು.





