ಬೆಳ್ತಂಗಡಿ: ಅಕ್ರಮ ಗೋ ಸಾಗಾಟ: ಇಬ್ಬರ ಬಂಧನ
ಪ್ರದೀಪ್ ಹಾಗೂ ಕೃಷ್ಣಪ್ಪ ಬಂಧಿತರು.

ಬೆಳ್ತಂಗಡಿ, ಎ.14: ತಾಲೂಕಿನ ಇಂದಬೆಟ್ಟು ಎಂಬಲ್ಲಿ ಅಕ್ರಮ ಗೋ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಬೆಳ್ತಂಗಡಿ ಠಾಣಾ ಪೊಲೀಸರು ಬಂಧಿಸಿದ್ದು, ಸಾಗಾಟಕ್ಕೆ ಬಳಸಿದ್ದ ವಾಹನ ಹಾಗೂ ಗೋವನ್ನು ವಶಪಡಿಸಿಕೊಂಡಿದ್ದಾರೆ. ಇಂದಬೆಟ್ಟುವಿನ ಪ್ರದೀಪ್(26) ಹಾಗೂ ಕೃಷ್ಣಪ್ಪ(58) ಬಂಧಿತರು.
ದನ ಸಾಗಾಟ ಪ್ರಕರಣದಲ್ಲಿ ವಾಹನದಲ್ಲಿದ್ದ ಹಸನ್ ಎಬಾತ ತಪ್ಪಿಸಿ ಪರಾರಿಯಾಗಿದ್ದಾರೆ.
ಬಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು ನ್ಯಾಯಾಲಯವು ಜಾಮೀನು ನೀಡಿ ಬಿಡುಗಡೆ ಮಾಡಿದೆ
Next Story





