ಕಾಸರಗೋಡು : ಕಾರು ಮಗುಚಿ ಬಿದ್ದು ಆರು ಮಂದಿಗೆ ಗಾಯ
ಕಾಸರಗೋಡು : ವಿವಾಹ ತಂಡ ಸಂಚರಿಸಿದ್ದ ಕಾರು ಮಗುಚಿ ಬಿದ್ದು ಆರು ಮಂದಿ ಗಾಯಗೊಂಡ ಘಟನೆ ಗುರುವಾರ ಸಂಜೆ ರಾಷ್ಟ್ರೀಯ ಹೆದ್ದಾರಿಯ ಪೊಯಿನಾಚಿ ಯಲ್ಲಿ ನಡೆದಿದೆ. ಕಾನ್ಚ೦ಗಾಡ್ ನ ತನ್ವೀರ್ (21) , ಅಸ್ಗರ್ (22) , ಶಾಮಿಲ್ (18), ಅಸ್ಗರ್ (25), ಇಲ್ಯಾಸ್ (24) ಮತ್ತು ಅಸ್ಮರ್ (17) ಗಾಯಗೊಂಡವರು.
ತನ್ವೀರ್ ಮತ್ತು ಅಸ್ಗರ್ ನನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಚಟ್ಟ೦ಚಾಲ್ ನ ವಧುವಿನ ಮನೆಯಿಂದ ಬಲ್ಲ ಕಡಪ್ಪುರ ದ ವರನ ಮನೆಗೆ ತೆರಳುತ್ತಿದ್ದಾಗ ಇಳಿಜಾರಿನಲ್ಲಿ ಅಟೋ ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲೆತ್ನಿಸಿದಾಗ ನಿಯಂತ್ರಣ ತಪ್ಪಿ ಮಗುಚಿ ಬಿದ್ದು ಈ ದುರ್ಘಟನೆ ಸಂಭವಿಸಿದೆ.
ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ತಲುಪಿಸಿದರು
Next Story