ಪುತ್ತೂರು: ದ್ವಿಚಕ್ರ ವಾಹನಗಳ ಕಳವು
ಪುತ್ತೂರು: ಮನೆಯ ಅಂಗಳದಲ್ಲಿ ನಿಲ್ಲಿಸಲಾಗಿದ್ದ 2 ಹೋಂಡಾ ಡಿಯೋ ದ್ವಿಚಕ್ರ ವಾಹನಗಳನ್ನು ಕಳವು ಮಾಡಿದ ಘಟನೆ ಎ. 13 ರಂದು ತಡರಾತ್ರಿ ನಡೆದಿದೆ. ಪುತ್ತೂರು ನಗರದ ಹೊರವಲಯದ ಪಡ್ಡಾಯೂರು ಎಂಬಲ್ಲಿನ ಚಂದ್ರಶೇಖರ ಹೆಗ್ಡೆ ಮತ್ತು ಕಿರಣ್ ಕುಮಾರ್ ಅವರಿಗೆ ಸೇರಿದ ದ್ವಿಚಕ್ರ ವಾಹನಗಳನ್ನು ಕಳವು ನಡೆಸಲಾಗಿದೆ. ಇವರು ಬುಧವಾರ ರಾತ್ರಿ ತಮ್ಮ ಮನೆಯ ಅಂಗಳದಲ್ಲಿ ವಾಹನವನ್ನು ನಿಲ್ಲಿಸಿದ್ದರು. ಗುರುವಾರ ಬೆಳಿಗ್ಗೆ ನೋಡಿದಾಗ ಕಳವು ನಡೆಸಿರುವುದು ತಿಳಿದು ಬಂದಿತ್ತು. ಮಂಗಳವಾರ ರಾತ್ರಿ ನಗರದ ಕಲ್ಲಾರೆ ಎಂಬಲ್ಲಿಂದ ಹೋಂಡಾ ಡಿಯೋ ದ್ವಿಚಕ್ರವನ್ನು ಕಳವು ಮಾಡಲಾಗಿತ್ತು. ಎರಡು ದಿನಗಳ ಅವಧಿಯಲ್ಲಿ ಪುತ್ತೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 3 ಹೋಂಡಾ ಡಿಯೋ ವಾಹನಗಳು ಕಳವಾಗಿವೆ.
ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





