ಪಪುವ ನ್ಯೂಗಿನಿ: ವಿಮಾನ ಪತನ: 12 ಸಾವು

ಸಿಯೋಲ್, ಎ. 14: ಪಪುವ ನ್ಯೂಗಿನಿಯ ಪಶ್ಚಿಮದ ಗುಡ್ಡಗಾಡು ಪ್ರಾಂತವೊಂದರಲ್ಲಿ ಭೂಸ್ಪರ್ಶ ಮಾಡಲು ಪ್ರಯತ್ನಿಸುತ್ತಿದ್ದ ಸಣ್ಣ ವಿಮಾನವೊಂದು ಬುಧವಾರ ಪತನಗೊಂಡಿದೆ ಎಂದು ಆಸ್ಟ್ರೇಲಿಯದ ಅಧಿಕಾರಿಗಳು ಮತ್ತು ಮಾಧ್ಯಮಗಳು ಗುರುವಾರ ವರದಿ ಮಾಡಿವೆ.
ಅಪಘಾತದಲ್ಲಿ ವಿಮಾನದಲ್ಲಿದ್ದ 12 ಮಂದಿ ಮೃತಪಟ್ಟಿದ್ದಾರೆ.
ಸನ್‌ಬರ್ಡ್ ಏವಿಯೇಶನ್ ವಿಮಾನವು ಕಿಯುಂಗ ವಿಮಾನದ ರನ್‌ವೇ ತಲುಪುವ ಸ್ವಲ್ಪ ಮುನ್ನ ಕೆಸರಿನ ಹೊಂಡವೊಂದರಲ್ಲಿ ಪತನಗೊಂಡಿತು. ಆಗ ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರು ಮತ್ತು ಆಸ್ಟ್ರೇಲಿಯನ್ ಪೈಲಟ್ ಮೃತಪಟ್ಟರು ಎಂದು ಆಸ್ಟ್ರೇಲಿಯನ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಶನ್ ಹೇಳಿದೆ.
ಪಪುವ ನ್ಯೂಗಿನಿಯಲ್ಲಿ 2000ದ ಬಳಿಕ 20ಕ್ಕೂ ಅಧಿಕ ವಿಮಾನಗಳು ಪತನಗೊಂಡಿವೆ. ಇಲ್ಲಿನ ಗುಡ್ಡಗಾಡು ಪ್ರದೇಶಗಳು ಮತ್ತು ಸಂಪರ್ಕ ರಸ್ತೆಗಳ ಕೊರತೆಯಿಂದಾಗಿ ಅವಶ್ಯ ಸಂದರ್ಭಗಳಲ್ಲಿ ಇಲ್ಲಿನ ನಿವಾಸಿಗಳು ವಾಯಯಾನದ ಮೊರೆ ಹೋಗುತ್ತಾರೆ.
Next Story





