ಮಂಗಳೂರು : ‘ಸಮ್ಮರ್ ಫೆಸ್ಟಿವಲ್-2016’ಗೆ ಚಾಲನೆ
ಸಮ್ಮರ್ ಫೆಸ್ಟಿವಲ್, ಸಮ್ಮರ್ ಫೆಸ್ಟಿವಲ್ 2

ಮಂಗಳೂರು, ಎ. 14: ರೋಯಲ್ ಕಾರ್ನಿವಲ್ ಎಗ್ಸಿಬಿಟ್ ವತಿಯಿಂದ ಬಂಗ್ರ ಕೂಳೂರಿನ ಗೋಲ್ಡ್ ಫಿಂಚ್ ಸಿಟಿಯಲ್ಲಿ ಆಯೋಜಿಸಲಾಗಿರುವ ‘ಸಮ್ಮರ್ ಫೆಸ್ಟಿವಲ್-2016’ ಬೃಹತ್ ವಸು ಪ್ರದರ್ಶನಕ್ಕೆ ಇಂದು ಚಾಲನೆ ದೊರೆಯಿತು.
ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ ಉದ್ಘಾಟನೆಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಡಿಕ್ಸ್ ಎಂಜಿನಿಯರಿಂಗ್ ಪ್ರೊಜೆಕ್ಟ್ ಪ್ರೈ.ಲಿ.ನ ನಿರ್ದೇಶಕ ದೇವಾನಂದ ಶೆಟ್ಟಿ, ರೋಯಲ್ ಕಾರ್ನಿವಲ್‌ನ ಮುಶ್ತಾಕ್ ಖತೀಬ್, ಸೈಯ್ಯದ್ ಹಫೀಝ್ ಮೊದಲಾದವರು ಉಪಸ್ಥಿತರಿದ್ದರು.
ವಸ್ತು ಪ್ರದರ್ಶನದಲ್ಲಿ ವಿಶೇಷ ಆಕರ್ಷಣೆಯಾಗಿ ಮಂಗಳೂರಿನ ಇತಿಹಾಸದಲ್ಲೇ ಪ್ರಥಮ ಬಾರಿಗೆ ವಿಶ್ವದ 7 ಅದ್ಭುತಗಳಾದ ತಾಜ್‌ಮಹಲ್, ಗ್ರೇಟ್ ವಾಲ್ ಆಫ್ ಚೀನಾ, ಕ್ರೈಸ್ಟ್ ರೆದೀಮೆರ್, ಪಿಸಾ ಟವರ್, ಮೆಕ್ಸಿಕೋ ಪಿರಮಿಡ್, ರೋಮನ್ ಕೊಲೊಸಿಯಮ್, ಐಫೇಲ್ ಟವರ್‌ಗಳ ಮಾದರಿಗಳನ್ನು ಕಾಣುವ ಹಾಗೂ ಸೆಲ್ಫಿ ತೆಗೆದುಕೊಳ್ಳುವ ಅವಕಾಶ ಗ್ರಾಹಕರಿಗೆ ಲಭ್ಯವಿದೆ.
ಸಮ್ಮರ್ ಫೆಸ್ಟಿವಲ್-2016’ ವಸ್ತುಪ್ರದರ್ಶನವು ಪ್ರತಿ ದಿನ ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ 45 ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ.





