ಆಮಿನ
ಪುತ್ತೂರು: ಪುತ್ತೂರು ತಾಲೂಕಿನ ಸಂಪ್ಯದ ಕಮ್ಮಾಡಿ ನಿವಾಸಿ ಉದ್ಯಮಿ ಹಾಗೂ ಪುತ್ತೂರು ತಾಲೂಕು ಮುಸ್ಲಿಂ ಸಂಯುಕ್ತ ಜಮಾಅತ್ ಅಧ್ಯಕ್ಷ ಹಾಜಿ ಎಸ್ ಇಬ್ರಾಹಿಂ ಕಮ್ಮಾಡಿ ಅವರ ಪತ್ನಿ ಆಮಿನ(64) ಅಲ್ಪ ಕಾಲದ ಅಸೌಖ್ಯದಿಂದ ಗುರುವಾರ ಸಂಜೆ ನಿಧನರಾದರು.
ಮೃತರ ಮನೆಗೆ ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ ಕಾಂತಪುರಂ. ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ, ಮೂಡಿಗೆರೆ ಖಾಝಿ ಎಂ.ಎ. ಖಾಸಿಂ ಮುಸ್ಲಿಯಾರ್, ಬೇಕಲ್ ಖಾಝಿ, ಅಬ್ದುಲ್ ಹಮೀದ್ ಮುಸ್ಲಿಯಾರ್ ಮಚ್ಚಂಪಾಡಿ ಮಾಣಿ, ಪುತ್ತೂರು ಕೇಂದ್ರ ಜುಮ್ಮಾ ಮಸೀದಿ ಮುದ್ರ್ರಿಸ್ ಅಸ್ಸಯ್ಯದ್ ಅಹ್ಮದ್ ಪೂಕೋಯ ತಂಙಳ್, ಅಸ್ಸಯದ್ ಹಾದೀ ತಂಙಳ್ ಮಂಜೇಶ್ವರ, ಪುತ್ತೂರು ಬದ್ರಿಯಾ ಜುಮಾ ಮಸೀದಿ ಖತೀಬ್ ಎಸ್.ಬಿ. ಮುಹಮ್ಮದ್ ದಾರಿಮಿ, ಶಾಸಕಿ ಶಕುಂತಳಾ ಶೆಟ್ಟಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಹೇಮನಾಥ ಶೆಟ್ಟಿ, ಜಿ.ಪಂ. ಸದಸ್ಯರಾದ ಎಂ.ಎಸ್. ಮಹಮ್ಮದ್, ಅನಿತಾ ಹೇಮನಾಥ ಶೆಟ್ಟಿ. ಹಾಜಿ ಮುಸ್ತಫಾ ಕೆಂಪಿ ಸೇರಿದಂತೆ ಹಲವಾರು ಧಾರ್ಮಿಕ, ಸಾಮಾಜಿಕ ಮತ್ತು ರಾಜಕೀಯ ಮುಖಂಡರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ನೀಡಿದರು. ಮೃತರ ಅಂತ್ಯವಿಧಿಯನ್ನು ಗುರುವಾರ ರಾತ್ರಿ ಸಂಪ್ಯ ಕಮ್ಮಾಡಿ ಮಸೀದಿ ವಠಾರದಲ್ಲಿ ನಡೆಸಲಾಯಿತು. ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ ನೇತೃತ್ವದಲ್ಲಿ ಮಯ್ಯತ್ ನಮಾರ್ ನಿರ್ವಹಿಸಲಾಯಿತು. ಮೃತರು ಪತಿ ಹಾಜಿ ಇಬ್ರಾಹಿಂ ಕಮ್ಮಾಡಿ, ಪುತ್ರ ಡಾ. ಅಶ್ರಫ್ ಕಮ್ಮಾಡಿ ಪುತ್ರಿ ಅಫ್ಸಾಬಿ ಹಾಗೂ ಅಳಿಯ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಫಝ್ಲುಲ್ ರಹೀಂ ಮತ್ತು ಬಂಧುಗಳನ್ನು ಅಗಲಿದ್ದಾರೆ.





