ಭಟ್ಕಳ : ಶಿಕ್ಷಕ ಶ್ರೀಧರ ಶೇಟ್‌ಗೆ ಬೀಳ್ಕೊಡುಗೆ
ಭಟ್ಕಳ : ಬೆಳಕೆ ಸರಕಾರಿ ಪ್ರೌಢಶಾಲೆಯಆಂಗ್ಲ ಭಾಷಾ ಶಿಕ್ಷಕ ಶ್ರೀಧರ ಶೇಟ್ ಶಿರಾಲಿಯವರು ಜಾಲಿಯ ಸರಕಾರಿ ಪ್ರೌಢಶಾಲೆಗೆ ವರ್ಗಾವಣೆೊಂಡ ಹಿನ್ನೆಲೆಯಲ್ಲಿಅವರಿಗೆ ಶಿಕ್ಷಕ ವೃಂದದವರಿಂದ ಬೀಳ್ಕೊಡುಗೆ ಏರ್ಪಡಿಸಲಾಗಿತ್ತು.
ಅಧ್ಯಕ್ಷತೆ ವಹಿಸಿದ್ದ ಬೆಳಕೆ ಪ್ರೌಢಶಾಲಾ ಮುಖ್ಯಾಧ್ಯಾಪಕಚಂದ್ರಕಾಂತಗಾಂವಕರ್ ಮಾತನಾಡಿ ಶ್ರೀಧರ ಶೇಟ್‌ರವರು ಕವಿ, ಕಲಾವಿದ, ವ್ಯಂಗ್ಯಚಿತ್ರಕಾರ ಮತ್ತುಅತ್ಯುತ್ತಮಕಾರ್ಯಕ್ರಮ ನಿರೂಪಕರಾಗಿಯಷ್ಟೇಅಲ್ಲದೆಅತ್ಯುತ್ತಮ ಶಿಕ್ಷಕರಾಗಿ ಸೇವೆ ಸಲ್ಲಿಸಿ ವಿದ್ಯಾರ್ಥಿಗಳಿಗೆ ಅರ್ಥವಾಗುವರೀತಿ ಬೋಧಿಸುತ್ತಿದ್ದರುಎಂದರು. ಹಿರಿಯ ಶಿಕ್ಷಕ ಚಂದ್ರಶೇಖರ ಬೈಲೂರು ಮಾತನಾಡಿ ಶ್ರೀಧರ ಶೇಟ್‌ರವರೊಂದಿಗಿನತಮ್ಮಒಡನಾಟವನ್ನು ನೆನಪಿಸಿಕೊಂಡರು. ವಿಜ್ಞಾನ ಶಿಕ್ಷಕ ಮಂಜುನಾಥ ನಾಯ್ಕ ಶೇಟ್‌ರವರ ಕ್ರಿಯಾಶೀಲತೆ, ಕಲೆಗಾರಿಕೆ ಮತ್ತು ಸ್ನೇಹಶೀಲತೆಯ ಕುರಿತು ಮಾತನಾಡಿದರು. ಶಿಕ್ಷಕರಾದ ಶೈಲಾ ಕುಮಟಾ, ರೇಷ್ಮಾ ನಾಯಕ ಮತ್ತು ನಾಗಪ್ಪಗೌಡ ಮಾತನಾಡಿದರು.ವಿದ್ಯಾರ್ಥಿಗಳ ಪರವಾಗಿಗೀತಾ, ಚಂದನಾ, ವಂದನಾ, ಅಕ್ಷಯಮತ್ತು ವೆಂಕಟೇಶ ಮಾತನಾಡಿದರು.ಅಶ್ವತ್ ಪ್ರಾರ್ಥಿಸಿದರು.ಶಿಕ್ಷಕಿ ಜಯಂತಿಗೌಡ ಸ್ವಾಗತಿಸಿದರು.ಶಿಕ್ಷಕಿ ಗೀತಾ ನಾಯ್ಕ ವಂದಿಸಿದರು.ಶಿಕ್ಷಕ ಪ್ರಕಾಶ ಶಿರಾಲಿ, ರಾಜು ಬಾಂದೇಕರ್, ಪ್ರಶಾಂತಿ ನಾಯ್ಕ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.





