ಎ.20ರಿಂದ ‘ದಕ್ಷಿಣ ಭಾರತ ರಂಗೋತ್ಸವ’
ಬೆಂಗಳೂರು, ಎ.14: ರಾಷ್ಟ್ರೀಯ ನಾಟಕ ಶಾಲೆ ವತಿಯಿಂದ ಎ.20 ರಿಂದ ಹತ್ತು ದಿನಗಳ ಕಾಲ ರಾಷ್ಟ್ರೀಯ ನಾಟಕೋತ್ಸವದ ಭಾಗವಾಗಿ ‘ದಕ್ಷಿಣ ಭಾರತ ರಂಗೋತ್ಸವ’ವನ್ನು ನಗರದ ಗುರುನಾನಕ್ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಾಟಕ ಶಾಲೆಯ ಶಿಬಿರ ನಿರ್ದೇಶಕ ಸಿ.ಬಸವಲಿಂಗಯ್ಯ, ದಕ್ಷಿಣ ಭಾರತದಲ್ಲಿನ ಕಲೆ ಮತ್ತು ಸಂಸ್ಕೃತಿಯನ್ನು ಬೆಂಬಲಿಸುವುದು ಹಾಗೂ ಸೌಹಾರ್ದತೆಗಾಗಿ ಇಂತಹ ಕಾರ್ಯಕ್ರಮಗಳು ಆವಶ್ಯಕವಾಗಿದೆ. ಆ ಹಿನ್ನೆಲೆಯಲ್ಲಿ ರಂಗೋತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ರಂಗೋತ್ಸವವನ್ನು ಎ.20ರಂದು ಜ್ಞಾನಪೀಠ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ಉದ್ಘಾಟನೆ ಮಾಡಲಿದ್ದು, ಪ್ರೊ.ಮರುಳಸಿದ್ದಪ್ಪ, ಸಚಿವೆ ಉಮಾಶ್ರೀ ಇನ್ನಿತರರು ಭಾಗವಹಿಸಲಿದ್ದಾರೆಂದು ತಿಳಿಸಿದರು.
ಎ.20ರಿಂದ 29ರವರೆಗೆ ಮೋಹೆ ಪಿಯಾ (ಹಿಂದಿ), ತಾವೂಸ್ ಚಮನ್ ಜಿ ಮೈನಾ (ಹಿಂದಿ), ತುಕ್ಕೆ ಪೆ ತುಕ್ಕ (ಹಿಂದಿ), ತಮಾಶ (ಕನ್ನಡ), ಚತುಷ್ ಕೋನ್ (ಹಿಂದಿ), ಆಗಮನ (ಕನ್ನಡ), ಕುದಿರೈ ಮುಟ್ಟೈ(ತಮಿಳು), ನಾಯಕುರಾಲು ನಾಗಮ್ಮ(ತೆಲುಗು), ಮುಖ್ಯಮಂತ್ರಿ(ಕನ್ನಡ), ಚರಿತ್ರೆಪುಸ್ತಕತಿಲ್ ಎಕ್ಕುಓರೇಡ್ (ಮಲಯಾಳಂ) ಕ್ರಮವಾಗಿ ಪ್ರತಿದಿನ ಸಂಜೆ 7ಕ್ಕೆ 10 ನಾಟಕಗಳು ಪ್ರದರ್ಶನಗೊಳ್ಳಲಿವೆ ಎಂದು ತಿಳಿಸಿದರು.





