10 ಮಂದಿ ವಿರುದ್ಧ ಪ್ರಕರಣ ದಾಖಲು
ಅಂತರ್ಧರ್ಮೀಯ ಮದುವೆ ಖಂಡಿಸಿ ಸಂಘಪರಿವಾರ ಪ್ರತಿಭಟನೆ
ಮಂಡ್ಯ, ಎ.14: ಅಂತರ್‌ಧರ್ಮೀಯ ಯುವಕನ ಜತೆ ಮದುವೆ ನಿಶ್ಚಯವಾಗಿರುವ ಯುವತಿ ಮನೆಯ ಎದುರು ಪ್ರತಿಭಟನೆ ನಡೆಸಿದ ಸಂಘಪರಿವಾರದ ಕೆಲಮಂದಿಯ ವಿರುದ್ಧ ಪೊಲೀಸರು ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ.
ಮೂರು ದಿನಗಳ ಹಿಂದೆ ಯುವತಿ ಆಶಿತಾ ಮನೆ ಎದುರು ಸಂಘಪರಿವಾರದ ಕೆಲವರು ಲವ್ ಜಿಹಾದ್ ಹೆಸರಿನಲ್ಲಿ ಪ್ರತಿಭಟನೆ ನಡೆಸಿದ್ದು, ನಗರದ ಪೂರ್ವ ಠಾಣೆ ಪೊಲೀಸರು 10 ಮಂದಿ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಂತರ್‌ಧರ್ಮೀಯ ಪ್ರೇಮಿಗಳ ಮದುವೆಗೆ ಎರಡೂ ಕುಟುಂಬಗಳು ಒಪ್ಪಿವೆ. ಆದರೆ, ಕೆಲವರು ಇದನ್ನು ವಿರೋಧಿಸುವ ಮೂಲಕ ಸಮಾಜದ ಅಶಾಂತಿ ಕದಡುವ ಯತ್ನ ನಡೆಸಿರುವ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story





