ದೋಣಿ ಮಗುಚಿ ಮೀನುಗಾರ ಮೃತ್ಯು
ಬೈಂದೂರು, ಎ.14: ಸೊಮೇಶ್ವರ ಬೀಚ್ ಬಳಿಯ ಅಳಿವೆಯಲ್ಲಿ ದೋಣಿಯೊಂದು ಮಗುಚಿ ಬಿದ್ದ ಪರಿಣಾಮ ಮೀನುಗಾರರೊಬ್ಬರು ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ಶಿರೂರು ಗ್ರಾಮದ ಕರಾವಳಿಯ ಶಾಂತರಾಮ (37) ಎಂದು ಗುರುತಿಸಲಾಗಿದೆ. ಇವರು ಎ.13ರಂದು ಅಪರಾಹ್ನ 3ಗಂಟೆ ಸುಮಾರಿಗೆ ಪಾತಿ ದೋಣಿಯಲ್ಲಿ ಮೀನುಗಾರಿಕೆಗಾಗಿ ಸಮುದ್ರಕ್ಕೆ ತೆರಳಿದ್ದರು. ಮೀನುಗಾರಿಕೆ ಮುಗಿಸಿ ವಾಪಸು ಬರುವಾಗ ದೋಣಿ ಮಗುಚಿ ಬಿತ್ತೆನ್ನಲಾಗಿದೆ. ಇದರಿಂದ ನೀರಿನಲ್ಲಿ ಮುಳುಗಿ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಶಾಂತರಾಮ್ ಸಂಜೆ 6 ಗಂಟೆಗೆ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟರು. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





