ವಿಷ ಜಂತು ಕಚ್ಚಿ ಮಹಿಳೆ ಮೃತ್ಯು
ಬ್ರಹ್ಮಾವರ, ಎ.14: ವಿಷ ಜಂತು ಕಡಿದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಎ.13ರಂದು ಸಂಜೆ ವೇಳೆ ಹಾವಂಜೆ ಗ್ರಾಮದ ಇರ್ಮಾಡಿಬೆಟ್ಟು ಎಂಬಲ್ಲಿ ನಡೆದಿದೆ.
ಮೃತರನ್ನು ಇರ್ಮಾಡಿಬೆಟ್ಟುವಿನ ರುದ್ರಮ್ಮ ಶೆಡ್ತಿ(42) ಎಂದು ಗುರು ತಿಸಲಾಗಿದೆ. ಇವರು ಮನೆಯ ಹಿಂಬ ದಿಯ ಹಟ್ಟಿ ಗೋಡೆಯಲ್ಲಿದ್ದ ತೂತಿಗೆ ಕಾಲಿಟ್ಟು ಕುಳಿತುಕೊಂಡಿದ್ದು, ಈ ವೇಳೆ ಕಾಲಿನ ಹೆಬ್ಬೆರಳಿಗೆ ವಿಷ ಜಂತು ಕಚ್ಚಿ ತ್ತೆನ್ನಲಾಗಿದೆ. ಇದರಿಂದ ತೀವ್ರವಾಗಿ ಅಸ್ವಸ್ಥಗೊಂಡ ಅವರು ಉಡುಪಿ ಜಿಲ್ಲಾಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





