ಕಾಮ್ರೇಡ್ ಸಿ.ನಾರಾಯಣ

ಕುಂದಾಪುರ, ಎ.14: ಸಿಪಿಐ(ಎಂ) ಪಕ್ಷದ ಹಿರಿಯ ಮುಖಂಡ ಕಾಮ್ರೇಡ್ ಸಿ.ನಾರಾಯಣ (80) ಅಲ್ಪಕಾಲದ ಅಸೌಖ್ಯದಿಂದ ಗುರುವಾರ ಬೆಳಗ್ಗೆ ಕುಂದಾಪುರ ಚರ್ಚ್ ರೋಡ್‌ನ ಸ್ವಗೃಹದಲ್ಲಿ ನಿಧನರಾದರು.
ಹೆಂಚು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ನಾರಾಯಣ, ಕಾರ್ಮಿಕ ಸಂಘಟನೆಯಲ್ಲಿ ಮುಖ್ಯ ಪಾತ್ರ ವಹಿಸಿದ್ದರು. ರೈತ- ಕೃಷಿ ಕೂಲಿಗಾರರ ಸಂಘಟನೆ ರಚಿಸಿ, ರೈತ- ಕಾರ್ಮಿಕರ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಒಂದು ಬಾರಿ ಪುರಸಭಾ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. ನಾರಾಯಣ ಅವರ ನಿಧನಕ್ಕೆ ಸಿಪಿಎಂ ಪಕ್ಷದ ಉಡುಪಿ ಜಿಲ್ಲಾ ಸಮಿತಿ, ಸಿಐಟಿಯು ಜಿಲ್ಲಾ ಸಮಿತಿ, ಉಡುಪಿ ಜಿಲ್ಲಾ ಹೆಂಚು ಕಾರ್ಮಿಕರ ಸಂಘ ಹಾಗೂ ಇತರ ಸಾಮೂಹಿಕ ಸಂಘಟನೆಗಳು ಸಂತಾಪ ವ್ಯಕ್ತಪಡಿಸಿವೆ.
ಮೃತರು ಪತ್ನಿ, ಪುತ್ರಿ ಹಾಗೂ ಮೂವರು ಪುತ್ರರನ್ನು ಅಗಲಿದ್ದಾರೆ.
Next Story





