ವಿಶ್ವಸಂಸ್ಥೆಯಲ್ಲಿ ಪ್ರಪ್ರಥಮ ಬಾರಿಗೆ ಅಂಬೇಡ್ಕರ್ ಜಯಂತಿ

ಅಂಬೇಡ್ಕರ್ ಆಶೋತ್ತರಗಳ ಈಡೇರಿಕೆಗೆ ಬದ್ಧ: ವಿಶ್ವಸಂಸ್ಥೆ
ವಿಶ್ವಸಂಸ್ಥೆ, ಎ.14: ಭಾರತದ ಸಂವಿಧಾನದ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯನ್ನು ವಿಶ್ವಸಂಸ್ಥೆಯು ಗುರುವಾರ ತನ್ನ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಆಚರಿಸಿದೆ. ಶೋಷಿತರ ಪಾಲಿಗೆ ಅಂಬೇಡ್ಕರ್ ಓರ್ವ ಜಾಗತಿಕ ‘ಸಂಕೇತ’ವಾಗಿದ್ದು, ಅವರ ಆಶೋತ್ತರಗಳನ್ನು ಈಡೇರಿಸಲು ತಾನು ಬದ್ಧವಾಗಿರುವುದಾಗಿ ವಿಶ್ವಸಂಸ್ಥೆ ಈ ಸಂದರ್ಭದಲ್ಲಿ ಘೋಷಿಸಿದೆ.
ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ (ಯುಎನ್‌ಡಿಪಿ)ದ ಅಂಗವಾಗಿ, ಅಂಬೇಡ್ಕರ್ ಅವರ ಜನ್ಮದಿನಾಚರಣೆಯನ್ನು ವಿಶ್ವಸಂಸ್ಥೆಯಲ್ಲಿ ಆಚರಿಸುತ್ತಿರುವುದಕ್ಕಾಗಿ ನಾನು ಭಾರತವನ್ನು ಅಭಿ ನಂದಿಸುತ್ತೇನೆ ಎಂದು ಯುಎನ್‌ಡಿಪಿಯ ಆಡಳಿತಾಧಿಕಾರಿ ಹೆಲೆನ್ ಕ್ಲರ್ಕ್ ತನ್ನ ಮುಖ್ಯ ಭಾಷಣದಲ್ಲಿ ತಿಳಿಸಿದ್ದಾರೆ.
ಅಂಬೇಡ್ಕರ್ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ್ದರು. ಆ ಹಿನ್ನೆಲೆಯಲ್ಲಿ ನಮ್ಮ ಸರಕಾರ ಬಿ.ಬಸವಲಿಂಗಪ್ಪನವರ ಹೆಸರಿನಲ್ಲಿ ಬೆಂಗಳೂರು ವಿವಿಯಲ್ಲಿ ಅಧ್ಯಯನ ಪೀಠ ಆರಂಭಿಸಲಿದೆ. ಅಂಬೇಡ್ಕರ್ ಹೆಸರಿನಲ್ಲಿ ‘ಅಂಬೇಡ್ಕರ್ ಲಂಡನ್ ಸ್ಕೂಲ್ ಆಫ್ ಇಕನಾಮಿಕ್ಸ್’ಅನ್ನು ಬೆಂಗಳೂರಿನಲ್ಲಿ ಆರಂಭಿಸಲು ಚಿಂತನೆ ನಡೆಸಲಾಗುವುದು ಎಂದು ಹೇಳಿದರು.
ಅಂಬೇಡ್ಕರ್ ಅವರಿಗೆ ಗೌತಮ ಬುದ್ಧ ಪ್ರೇರಣೆ ಹೊಂದಿದ್ದಾರೆ. ಅದೇ ರೀತಿಯಲ್ಲಿ ಶೋಷಿತ ಸಮುದಾಯಗಳಿಗೆ ಅಂಬೇಡ್ಕರ್ ಪ್ರೇರಣೆ. ಅಂಬೇಡ್ಕರ್ ಅವರು ದೇಶದಲ್ಲಿ ಅನ್ಯಾಯದ ವಿರುದ್ಧ ಹೋರಾಟ ರೂಪಿಸದಿದ್ದರೆ ದೇಶದಲ್ಲಿ ಚಳವಳಿಗಳೇ ಹುಟ್ಟುತ್ತಿರಲಿಲ್ಲ. ನಮ್ಮ ಸರಕಾರ ಇಂದು ಅಹಿಂದ ಪರ ಕೆಲಸ ಮಾಡುತ್ತಿದ್ದರೆ ಅದಕ್ಕೆ ಅಂಬೇಡ್ಕರ್ ಅವರೇ ಸ್ಫೂರ್ತಿ ಎಂದು ಸಿದ್ಧರಾಮಯ್ಯ ತಿಳಿಸಿದರು.
2016 ಅನ್ನು ಅಂಬೇಡ್ಕರ್ ವರ್ಷ ಎಂದು ಘೋಷಿಸಿದ್ದು, ವಾರ್ತಾ ಇಲಾಖೆಯಿಂದ ಅಂಬೇಡ್ಕರ್ ಅವರ ಕುರಿತು ‘ಧ್ವನಿ-ಬೆಳಕು’ ಕಾರ್ಯಕ್ರಮ, ವಿಚಾರ ಸಂಕಿರಣ, ಛಾಯಾಚಿತ್ರ ಪ್ರದರ್ಶನ, ಕಮ್ಮಟಗಳನ್ನು ಆಯೋಜಿಸಲಾಗುವುದು. ಅಲ್ಲದೆ, ಸಮಾಜ ಕಲ್ಯಾಣ ಇಲಾಖೆಯಿಂದ ಅಂಬೇಡ್ಕರ್ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.
ಲೋಕಸಭೆ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ, ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹದೇವಪ್ಪ , ಮೇಲ್ಮನೆ ಸಭಾಪತಿ ಡಿ.ಎಚ್.ಶಂಕರ ಮೂರ್ತಿ, ಶಾಸಕ ನರೇಂದ್ರಸ್ವಾಮಿ, ಮೇಲ್ಮನೆ ಸದಸ್ಯ ಐವನ್ ಡಿಸೋಜಾ, ಅಂಬೇಡ್ಕರ್ ಅಭಿವೃದ್ದಿ ನಿಗಮದ ಅಧ್ಯಕ್ಷೆ ಮಲ್ಲಾಜಮ್ಮ, ಲಿಡ್ಕರ್ ಅಧ್ಯಕ್ಷ ರಾಮಕೃಷ್ಣ, ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಲಜಾ ನಾಯಕ್, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಬಿಲ್ಕಿಸ್ ಬಾನು ಸೇರಿದಂತೆ ಹಲವು ಗಣ್ಯರು ಸಮಾರಂಭದಲ್ಲಿ ಹಾಜರಿದ್ದರು.
2030ನೆ ಕಾರ್ಯಸೂಚಿಯ ಕುರಿತಾದ ವಿಶ್ವಸಂಸ್ಥೆಯ ದೂರದೃಷ್ಟಿಯನ್ನು ಸಾಕಾರಗೊಳಿಸುವುದಕ್ಕೆ ನೆರವಾಗುವ ನಿಟ್ಟಿನಲ್ಲಿ ನಾವು ಭಾರತದ ಜೊತೆ ನಿಕಟ ಪಾಲುದಾರಿಕೆಯೊಂದಿಗೆ ಮುಂದುವರಿಯಲಿದ್ದೇವೆ. ಜಗತ್ತಿನಾದ್ಯಂತದ ಬಡ ಹಾಗೂ ಶೋಷಿತ ಜನರ ಏಳಿಗೆಯ ಬಗ್ಗೆ ಅಂಬೇಡ್ಕರ್ ಅವರು ಹೊಂದಿದ್ದ ದೂರದೃಷ್ಟಿಯನ್ನು ಸಾಕಾರಗೊಳಿಸುವುದನ್ನು ಖಾತರಿಪಡಿಸುತ್ತೇವೆ’’ ಎಂದು ಕ್ಲಕ್ ಹೇಳಿದರು. ವಿಶ್ವಸಂಸ್ಥೆಯ ಮುಂದಿನ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಸ್ಪರ್ಧೆಯಲ್ಲಿರುವ ಅಭ್ಯರ್ಥಿಗಳ ಸಾಲಿನಲ್ಲಿ ಕ್ಲರ್ಕ್ ಕೂಡಾ ಒಬ್ಬರಾಗಿದ್ದಾರೆ.
ನಾಗರಿಕ ಹಕ್ಕುಗಳ ಸಂಘಟನೆಗಳಾದ ಕಲ್ಪನಾ ಸರೋಜ್ ಪ್ರತಿಷ್ಠಾನ ಹಾಗೂ ಹ್ಯೂಮನ್ ಹೊರಿಝಾನ್ ಪ್ರತಿಷ್ಠಾನಗಳು ಈ ಕಾರ್ಯಕ್ರಮವನ್ನು ಆಯೋಜಿಸಿದ್ದವು.
ರಾಷ್ಟ್ರಗಳು ಹಾಗೂ ಜನತೆಯ ಆರ್ಥಿಕ ಹಾಗೂ ಸಾಮಾಜಿಕ ಪ್ರಗತಿಗೆ, ನಿರಂತರವಾಗಿ ಉಲ್ಬಣಿಸುತ್ತಿರುವ ಅಸಮಾನತೆಯು ಮೂಲಭೂತ ಸವಾಲಾಗಿದೆಯೆಂಬುದನ್ನು ಅರಿತಿದ್ದ ಮಹಾನ್ ವ್ಯಕ್ತಿಯೊಬ್ಬನ ಸಾಧನೆಯನ್ನು ಈ ಕಾರ್ಯಕ್ರಮದಲ್ಲಿ ಸ್ಮರಿಸಲಾಗುತ್ತಿದೆಯೆಂದವರು ಹೇಳಿದರು. ಎಲ್ಲ ರೀತಿಯ ಅಸಮಾನತೆ ಹಾಗೂ ತಾರತಮ್ಯವನ್ನು ಕಡಿಮೆಗೊಳಿಸುವುದೇ ಅಂಬೇಡ್ಕರ್ ಅವರ ದೂರದೃಷ್ಟಿಯಾಗಿತ್ತೆಂದರು.
ಅಂಬೇಡ್ಕರ್ ಅವರ ಚಿಂತನೆಗಳು 60 ವರ್ಷಗಳ ಹಿಂದಿನಂತೆಯೇ ಇಂದು ಸಹ ಪ್ರಸ್ತುತವಾಗಿವೆಯೆಂದು ನ್ಯೂಝಿಲ್ಯಾಂಡ್‌ನ ಮಾಜಿ ಪ್ರಧಾನಿಯೂ ಆದ ಕ್ಲರ್ಕ್ ಹೇಳಿದರು.







