ಕಮ್ಯುನಿಸ್ಟ್ ನಾಯಕ ಲೆನಿನ್ ಶವವೇ ಈಗ ರಷ್ಯದಿಂದ ಭಾರೀ ಖರ್ಚು ಮಾಡಿಸುತ್ತಿದೆ!

ಮಾಸ್ಕೊ, ಎಪ್ರಿಲ್ 15: ರಷ್ಯದ ಕಮ್ಯುನಿಸ್ಟ್ ನಾಯಕ ವ್ಯಾಲ್ಡಿಮೀರ್ ಲೆನಿನ್‌ರ ಮೃತದೇಹದ ಸಂರಕ್ಷಣೆಗಾಗಿ ರಷ್ಯ ಸರಕಾರ ಈವರ್ಷ ಎರಡು ಲಕ್ಷ ಡಾಲರ್ ಖರ್ಚು ಮಾಡುತ್ತಿದೆ ಎಂದು ವರದಿಯಾಗಿದೆ. ರಷ್ಯದ ಸ್ಟೇಟ್ ಪ್ರೊಕ್ಯೊರ್‌ಮೆಂಟ್ ಏಜೆನ್ಸಿಯ ವೆಬ್‌ಸೈಟ್‌ನಲ್ಲಿ ಇಷ್ಟು ವೆಚ್ಚಮಾಡುವುದರಿಂದ ಲೆನಿನ್‌ನರ ಮೃತದೇಹವನ್ನು ಜೀವಂತವಿರುವುದಕ್ಕೆ ಸಮಾನ ರೀತಿಯಲ್ಲಿ ಇರಿಸಲು ಸಾಧ್ಯವಿದೆ ಎಂದು ಹೇಳಲಾಗಿದೆ. ಬಯೋಮೆಡಿಕಲ್ ವಿಧಾನದಲ್ಲಿ ಲೆನಿನ್ ಶವದ ಸಂರಕ್ಷಣೆಗಾಗಿ ಏಜೆನ್ಸಿಯೊಂದನ್ನು ಹುಡುಕಲಾಗುತ್ತಿದೆ. ರಷ್ಯದ ಬಯೊಮೆಡಿಕಲ್ ಟೆಕ್ನಾಲಜಿ ರಿಸರ್ಚ್ ಆಂಡ್ ಟ್ರೈನಿಂಗ್ ಸೆಂಟರ್ ಲೆನಿನ್‌ರ ಶವದ ಸಂರಕ್ಷಣೆಯನ್ನು 1924ರಿಂದ ಮಾಡುತ್ತಾಬಂದಿದೆ. ಅಂದು ಮೊದಲಬಾರಿ ಲೆನಿನ್ ಶವವನ್ನು ಜನರ ದರ್ಶನಕ್ಕಾಗಿ ಮಾಸ್ಕೊದ ರೆಡ್‌ಸ್ಕ್ವೇರ್‌ನಲ್ಲಿ ಇರಿಸಲಾಗಿತ್ತು. ಆದರೆ ಸೋವಿಯತ್ ಯೂನಿಯನ್ ಮುರಿದು ಬಿದ್ದ ಬಳಿಕ ಲೆನಿನ್‌ರ ಶವವನ್ನು ದಫನ ನಡೆಸಬೇಕೆಂಬ ಮಾತುಗಳು ಕೇಳಲಾರಂಬಿಸಿವೆ. ಇತ್ತೀಚೆಗಿನ ಆನ್‌ಲೈನ್ ಮತದಾನದ ಪ್ರಕಾರ ಶೇ.62ಮಂದಿ ಲೆನಿನ್‌ರನ್ನು ಗೌರವಾದರಗಳೊಂದಿಗೆ ದಫನಗೈಯ್ಯಬೇಕಾಗಿದೆ ಎಂದು ಹೇಳಿದ್ದಾರೆ. ಆದರೆ ಈ ಚಿಂತನೆಯನ್ನು ಕ್ರೆಮ್ಲಿನ್ ಆರಂಭದಲ್ಲಿಯೇ ನಿರಾಕರಿಸಿದೆ.
ಲೆನಿನ್‌ರ ಶವದ ಸಂರಕ್ಷಣೆಗಾಗಿ ಆಗುವ ವೆಚ್ಚದ ಕುರಿತು ಸೋಶಿಯಲ್ ಮೀಡಿಯದಲ್ಲಿ ಜನರು ಮಾತಾಡುತ್ತಿದ್ದಾರೆ. ಕೆಲವು ಮಂದಿ ಒಂದು ಮಮ್ಮಿಯ ಸಂರಕ್ಷಣೆಗೆ ಮಾಡುವ ಈ ಖರ್ಚು ಬಹಳ ಹೆಚ್ಚಾಯಿತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಲೆನಿನ್ ಸ್ವಯಂ ತನ್ನನ್ನು ಒಂದು ಮೂರ್ತಿ ಮಾಡಿಡುವುದನ್ನು ವಿರೋಧಿಸಿದ್ದರು ಎಂದು ಹೇಳಿದ್ದಾರೆ. ಒಬ್ಬ ವ್ಯಕ್ತಿ ವ್ಯಂಗ್ಯವಾಗಿ ಕಮ್ಯುನಿಸ್ಟ್‌ರಿಗೆ ಒಂದು ದಿವಸ ಬೋಲ್ಶೇವಿಕ್ ನಾಯಕರ ಕ್ಲೋನ್ ತಯಾರಿಸಿ ಅವರು ಅಧಿಕಾರಕ್ಕೆ ಮರಳುವ ಭರವಸೆ ಇದೆ ಎಂದು ಬರೆದಿದ್ದಾನೆ. ಇನ್ನೊಬ್ಬ ಒಂದುವೇಳೆ ಲೆನಿನ್‌ರನ್ನು ದಫನ ಮಾಡುವ ವಿಚಾರ ಮಾಡುವುದಾದರೆ ಮೊದಲು ಸೋವಿಯತ್ ದೌತ್ಯದ ನಂತರದ ನಾಯಕ ಬೋರಿಸ್ ಯೆಲ್ಸಿನ್‌ರ ಘೋರಿಯನ್ನು ಅಗೆಯಬೇಕಾದೀತು ಎಂದು ಬರೆದಿದ್ದಾನೆ







