ನೀವು ಎಂಜಾಯ್ ಮಾಡುತ್ತಿರುವುದು ಫಾಸ್ಟ್ ಫುಡ್ ಅಲ್ಲ, ಅಪಾಯಕಾರಿ ರಾಸಾಯನಿಕಗಳನ್ನು!

ಬರ್ಗರ್‌ಗಳು, ಪಿಜಾಗಳು ಮತ್ತು ಫ್ರೆಂಚ್ ಫ್ರೈಗಳು ನಿಮ್ಮ ಜೀವನದ ಅವಿಭಾಜ್ಯ ಅಂಗಗಳಾಗಿವೆಯೆ? ಫಾಸ್ಟ್ ಫುಡ್ ಸೇವಿಸುವ ಮೊದಲು ಜಾಗ್ರತೆ. ಇದರಿಂದ ಫ್ತಾಲೇಟ್ಸ್ ಎನ್ನುವ ಅಪಾಯಕಾರಿ ರಾಸಾಯನಿಕಗಳು ಅತ್ಯಧಿಕ ಪ್ರಮಾಣದಲ್ಲಿ ದೇಹ ಪ್ರವೇಶಿಸಬಹುದು. ಆಹಾರ ಪ್ಯಾಕೇಜಿಂಗಿನಲ್ಲಿ ಇದನ್ನು ಬಳಸುತ್ತಿದ್ದಾರೆ.
ಆಹಾರ ಪ್ಯಾಕೇಜಿಂಗ್ ವಸ್ತುಗಳನ್ನು ತಯಾರಿಸಲು ಬಳಸುವ ಔದ್ಯಮಿಕ ರಾಸಾಯನಿಕ ವಿಭಾಗಕ್ಕೆ ಸೇರಿದೆ ಫ್ತಾಲೇಟ್ಸ್. ಡೈರಿ ಉತ್ಪನ್ನಗಳು ಮತ್ತು ಇತರ ವಸ್ತುಗಳನ್ನು ಫಾಸ್ಟ್ ಫುಡ್‌ಗಳಾಗಿ ಬದಲಿಸುವಾಗ ಟ್ಯೂಬಿಂಗಿನಲ್ಲಿ ಫ್ತಾಲೇಟ್ಸ್ ಬಳಕೆಯಾಗುತ್ತದೆ. ಅಧ್ಯಯನವೊಂದು ಹೇಳಿರುವ ಪ್ರಕಾರ ಫಾಸ್ಟ್ ಫುಡ್ ಸೇವಿಸಿದ ವ್ಯಕ್ತಿಗಳ ಮೂತ್ರದಲ್ಲಿ ಅಧಿಕ ಪ್ರಮಾಣದಲ್ಲಿ ಫ್ತಾಲೇಟ್ಸ್ ಕಂಡುಬಂದಿದೆ. ಸಂಸ್ಕರಿತ ಆಹಾರ ಕಡಿಮೆ ಸೇವಿಸುವ ವ್ಯಕ್ತಿಗಳಿಗೆ ಹೋಲಿಸಿದಲ್ಲಿ ಶೇ.24ರಿಂದ ಶೇ.40ರಷ್ಟು ಅಧಿಕ ಪ್ರಮಾಣದಲ್ಲಿ ಫ್ತಾಲೇಟ್ಸ್ ಕಂಡುಬಂದಿದೆ. ನಮ್ಮ ಅಧ್ಯಯನದಲ್ಲಿ ಫ್ತಾಲೇಟ್ಸ್‌ನಿಂದಾಗಿ ಮಕ್ಕಳು ಮತ್ತು ವಯಸ್ಕರಲ್ಲಿ ಹಲವಾರು ಗಂಭೀರ ಆರೋಗ್ಯ ಸಮಸ್ಯೆಗಳು ಕಂಡುಬಂದಿರುವುದನ್ನು ಗುರುತಿಸಿದ್ದೇವೆ ಎಂದು ಮುಖ್ಯ ಸಂಶೋಧಕ ಜಾರ್ಜ್ ವಾಷಿಂಗ್ಟನ್ ವಿಶ್ವವಿದ್ಯಾಲಯದ ಅಮಿ ಜೋಟಾ ಹೇಳಿದ್ದಾರೆ. ಅಧ್ಯಯನ ಹೇಳುವ ಪ್ರಕಾರ, ಟು ಫ್ತಾಲೇಟ್ಸ್ ಡೈ ಫ್ತಾಲೇಟ್ ಮತ್ತು ಡೈಸೊನೊನಿಲ್ ಫ್ತಾಲೇಟ್ ಉತ್ಪನ್ನಗಳ ಜೊತೆಗೆ ಬೆರೆಯುತ್ತದೆ ಮತ್ತು ಮಾನವ ದೇಹ ಪ್ರವೇಶಿಸುತ್ತದೆ ಎನ್ನುವ ಕಾಳಜಿ ಹೊರತಾಗಿಯೂ ಅದನ್ನು ಸಂಸ್ಕರಿತ ಆಹಾರ ಪ್ಯಾಕೇಜಿಂಗಲ್ಲಿ ಬಳಸಲಾಗುತ್ತಿದೆ. ಈ ವಸ್ತುಗಳು ದೇಹ ಪ್ರವೇಶಿಸಿ ಸಂತಾನೋತ್ಪತ್ತಿ ವ್ಯವಸ್ಥೆ ಮೇಲೆ ಪ್ರಭಾವ ಬೀರಿ ಸಂತಾನಫಲ ಕ್ಷೀಣವಾಗುವ ಸಾಧ್ಯತೆಯಿದೆ ಎಂದು ಅಧ್ಯಯನ ಹೇಳೀದೆ. ಧಾನ್ಯಗಳು ಮತ್ತು ಮಾಂಸಾಹಾರದ ಮೇಲೆ ಫ್ತಾಲೇಟ್ಸ್ ಪರಿಣಾಮ ಹೆಚ್ಚಾಗಿರಬಹುದು ಎಂದು ಹೇಳಲಾಗಿದೆ. ಬ್ರೆಡ್, ಕೇಕ್, ಪಿಜಾ, ಬ್ಯುರಿಟೊಸ್, ಅಕ್ಕಿ ಆಹಾರಗಳು ಮತ್ತು ನೂಡಲ್ಸ್ ಮೇಲೆ ಹೆಚ್ಚು ಪರಿಣಾಮ ಬೀರಲಿದೆ. ಅಧ್ಯಯನ ತಂಡವು 8877 ಪ್ರತಿನಿಧಿಗಳನ್ನು ಪರೀಕ್ಷಿಸಿ ಅವರ ಆಹಾರ ಕ್ರಮವನ್ನು ವಿಚಾರಿಸಿಕೊಂಡು ಸಂಶೋಧನಾ ವರದಿ ಸಿದ್ಧಪಡಿಸಿದೆ. ಅವರ ಮೂತ್ರದ ಸ್ಯಾಂಪಲ್‌ಗಳನ್ನೂ ಪರೀಕ್ಷಿಸಲಾಗಿದೆ. ಇದಲ್ಲದೆ ಬೈಸ್ಫಿನಾಲ್ ಎ ಅಥವಾ ಬಿಪಿಎ ಎನ್ನುವ ರಾಸಾಯನಿಕವೂ ಪ್ಲಾಸ್ಟಿಕ್ ಆಹಾರ ಪ್ಯಾಕೇಜಿಂಗಲ್ಲಿ ದೇಹದೊಳಗೆ ಪ್ರವೇಶಿಸುವುದುನ್ನು ಅಧ್ಯಯನ ವಿವರಿಸಿದೆ. ಬಿಪಿಎ ದೇಹ ಪ್ರವೇಶಿಸುವುದರಿಂದ ಆರೋಗ್ಯ ಮತ್ತು ನಡವಳಿಕೆ ಸಮಸ್ಯೆಯನ್ನು ಯಉವ ಮಕ್ಕಳಲ್ಲಿ ತರುವ ಸಾಧ್ಯತೆಯಿದೆ. ಸಂಸ್ಕರಿತ ಆಹಾರ ಸೇವಿಸದೆ ಇರುವವರಿಗೆ ಹೋಲಿಸಿದರೆ ಸೇವಿಸುವವರ ದೇಹದಲ್ಲಿ ಹೆಚ್ಚು ಬಿಪಿಎ ಪತ್ತೆಯಾಗಿದೆ.





