ಬರ ಕಾಮಗಾರಿಗೆ ಸರಕಾರದ ಬಳಿ ಹಣದ ಕೊರತೆ ಇಲ್ಲ: ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಎ.15: ಬರ ಕಾಮಗಾರಿಗೆ ಸರಕಾರದ ಬಳಿ ಹಣದ ಕೊರತೆ ಇಲ್ಲ. ಎಲ್ಲ ಜಿಲ್ಲಾಧಿಕಾರಿಗಳ ಬಳಿ ಸಾಕಷ್ಟು ಹಣವಿದೆ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಬೀದರ‍್ ನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿ ಕುಡಿಯುವ ನೀರಿನ ಸಮಸ್ಯೆಗೆ ತಕ್ಷಣ ಸ್ಪಂದಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ, ,ನೀರಿನ ಸಮಸ್ಯೆ ಇರುವ ಕಡೆ ಟ್ಯಾಂಕರ‍್ ಮೂಲಕ ನೀರು ಪೂರೈಕೆ ಮಾಡಬೇಕು. ಖಾಸಗಿಯವರು ನೀರು ಪೂರೈಸುತ್ತಿರುವ ಟ್ಯಾಂಕರ‍್ ನ್ನು ವಶಕ್ಕೆ ಪಡೆದುಕೊಂಡು ನೀರು ಪೂರೈಕೆ ಮಾಡಲಾಗುವುದು . ಕುಡಿಯುವ ನೀರು, ಜಾನುವಾರುಗಳ ಮೇವು , ಉದ್ಯೋಗ ನೀಡಲು ಎಷ್ಟೇ ಖಚಾದರೂ ಸರಕಾರದ ಬಳಿ ಹಣವಿದೆ ಎಂದು ಮುಖ್ಯ ಮಂತ್ರಿ ಸ್ಪಷ್ಟಪಡಿಸಿದರು.
Next Story





