ಉತ್ತರ ಪ್ರದೇಶದಲ್ಲಿ ಬಿಜೆಪಿಯಿಂದ, ರಾಹುಲ್, ಅಖಿಲೇಶ್, ಅಸದುದ್ದೀನ್ ಶೀಲಹರಣ ಮಾಡುವವರಂತೆ ಬಿಂಬಿಸುವ ಪೋಸ್ಟರ್ ವಿವಾದ

ಹೊಸದಿಲ್ಲಿ, ಎಪ್ರಿಲ್.15: ಉತ್ತರ ಪ್ರದೇಶದ ಬಿಜೆಪಿಯ ಅಧ್ಯಕ್ಷರಾಗಿ ನಿಯುಕ್ತರಾದ ಕೇಶವ್ ಪ್ರಸಾದ್ ಮೌರ್ಯ ಪೋಸ್ಟರ್ ವಿವಾದವೊಂದರಲ್ಲಿ ಸಿಲುಕಿದ್ದಾರೆ. ಪೋಸ್ಟರ್‌ನಲ್ಲಿ ಮೌರ್ಯರನ್ನು ಭಗವಾನ್ ಕೃಷ್ಣರಂತೆ ತೋರಿಸಲಾಗಿದೆ. ಉತ್ತರ ಪ್ರದೇಶವನ್ನು ದ್ರೌಪದಿಯಂತೆ ತೋರಿಸಲಾಗಿದ್ದು ಮಾಯಾವತಿ, ರಾಹುಲ್ ಗಾಂಧಿ, ಅಖಿಲೇಶ್ ಯಾದವ್, ಆಝಂಖಾನ್ ಮತ್ತು ಎಐಎಂಐಎಂ ಪ್ರಮುಖ ಅಸದುದ್ದೀನ್ ಉವೈಸಿಯವರನ್ನು ಉತ್ತರಪ್ರದೇಶದ ಶೀಲಹರಣ ಮಾಡುತ್ತಿರುವಂತೆ ಮತ್ತು ದ್ರೌಪದಿ ಕೇಶವ್ ಪ್ರಸಾದ್ ಮೌರ್ಯರಿಂದ ಸಹಾಯ ಯಾಚನೆ ಮಾಡುತ್ತಿರುವಂತೆ ಪೋಸ್ಟರ್ ನಲ್ಲಿತೋರಿಸಿರುವುದು ವರದಿಯಾಗಿದೆ.
ಈ ಪೋಸ್ಟರ್‌ನ್ನು ವಾರಣಾಸಿಯಲ್ಲಿ ಮೌರ್ಯರ ಬೆಂಬಲಿಗ ಬಿಜೆಪಿ ಕಾರ್ಯಕರ್ತ ಅಂಟಿಸಿದ್ದಾನೆ. ಪೋಸ್ಟರ್ ಬಹಿರಂಗವಾದ ಮೇಲೆ ಉತ್ತರಪ್ರದೇಶದ ವಿಪಕ್ಷ ನಾಯಕರು ಬಿಜೆಪಿಯ ವಿರುದ್ಧ ಟೀಕೆಗಳ ಸುರಿಮಳೆಗೈದಿದ್ದಾರೆ. ಮೌರ್ಯ ತನಗೆ ಪೋಸ್ಟರ್ ಅಂಟಿಸಿರುವ ಕುರಿತು ಯಾವುದೇ ಮಾಹಿತಿ ಇಲ್ಲ ಎಂದು ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ನ್ಯೂಸ್ ಚ್ಯಾನೆಲ್ ಒಂದರಲ್ಲಿ ಮಾತಾಡುತ್ತ ತನಗೂ ಈ ಪೋಸ್ಟರ್‌ಗೂ ಯಾವುದೇ ಸಂಬಂಧವಿಲ್ಲ. ಇದು ಯಾವುದೊ ಅತಿ ಉತ್ಸಾಹಿ ಕಾರ್ಯಕರ್ತ ಮಾಡಿದ ಕೆಲಸವಿದು. ಎಂದು ಹೇಳಿದ್ದಾರೆ.ಸೋಶಿಯಲ್ ಮೀಡಿಯಾದಲ್ಲಿಯೂ ಈ ಪೋಸ್ಟರ್ ಹರಿದಾಡುತ್ತಿದೆ. ಮೌರ್ಯ, ಬಿಜೆಪಿ, ಅಮಿತ್‌ಶಾ ಮತ್ತು ಮೋದಿಯವರೆಗೂ ವ್ಯಂಗ್ಯ ಅದರಲ್ಲಿ ಹರಿದಾಡುತ್ತಿದೆ ಎಂದು ವರದಿಗಳು ತಿಳಿಸಿವೆ.







