ಪೆಟ್ರೋಲ್ ಲೀ.ಗೆ 74 ಪೈ. ಡೀಸೆಲ್ 1.30 ರೂ.ಕಡಿತ

ಹೊಸದಿಲ್ಲಿ,ಎ.15: ಪೆಟ್ರೋಲ್ ಬೆಲೆಯನ್ನು ಪ್ರತಿ ಲೀ.ಗೆ 74 ಪೈಸೆ ಮತ್ತು ಡೀಸೆಲ್ ಬೆಲೆಯನ್ನು ಪ್ರತಿ ಲೀ.ಗೆ 1.30 ರೂ.ಕಡಿತಗೊಳಿಸಲಾಗಿದೆ. ನೂತನ ದರಗಳು ಶುಕ್ರವಾರ ಮಧ್ಯರಾತ್ರಿಯಿಂದಲೇ ಜಾರಿಗೊಂಡಿವೆ.
ದಿಲ್ಲಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀ.ಗೆ 61.87 ರೂ.ಇದ್ದುದು ಈಗ 61.13 ರೂ.ಗೆ ತಗ್ಗಿದೆ. ಡೀಸೆಲ್ ಪ್ರತಿ ಲೀ.ಗೆ 49.31 ರೂ.ನಿಂದ 48.01ಕ್ಕೆ ಇಳಿದಿದೆ.
ಎ.4ರಂದು ಪೆಟ್ರೋಲ್ ಮೇಲೆ ಪ್ರತಿ ಲೀ.ಗೆ 2.19 ರೂ. ಮತ್ತು ಡೀಸೆಲ್ ಮೇಲೆ ಪ್ರತಿ ಲೀ.ಗೆ 98 ಪೈಸೆಯಷ್ಟು ಏರಿಕೆಯನ್ನು ಮಾಡಲಾಗಿತ್ತು. ಸತತ ಎರಡು ಏರಿಕೆಯ ಬಳಿಕ ಶುಕ್ರವಾರದ ಬೆಲೆ ಇಳಿಕೆಯು ಬಳಕೆದಾರರಿಗೆ ಕೊಂಚ ನೆಮ್ಮದಿಯನ್ನು ನೀಡಿದೆ.
Next Story





