ಎ.17 ರಂದು ಗುಡ್ಡೆ ಅಂಗಡಿ ಮಸೀದಿ ಮೇಲಂತಸ್ತು ಉದ್ಘಾಟನೆ

ವಿಟ್ಲ : ಪಾಣೆಮಂಗಳೂರು ಸಮೀಪದ ಗುಡ್ಡೆಅಂಗಡಿ ನೂರುದ್ದೀನ್ ಜುಮಾ ಮಸೀದಿಯ ಮೇಲಂತಸ್ತು ಉದ್ಘಾಟನೆ, ವಕ್ಫ್ ನಿರ್ವಹಣೆ ಹಾಗೂ ಖಾಝಿ ಸ್ವೀಕಾರ ಸಮಾರಂಭವು ಎ 17 ರಂದು ಸಂಜೆ 4 ಗಂಟೆಗೆ ಮಸೀದಿ ವಠಾರದಲ್ಲಿ ನಡೆಯಲಿದೆ.
ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಮಸೀದಿ ಮೇಲಂತಸ್ತು ಉದ್ಘಾಟಿಸಿ ವಕ್ಫ್ ನಿರ್ವಹಣೆಗೈಯುವರು. ಸಮಸ್ತ ಕೇಂದ್ರ ಮುಶಾವರ ಸದಸ್ಯ ಶೈಖುನಾ ಕೆ.ಪಿ. ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಮಿತ್ತಬೈಲು ದುವಾಶಿರ್ವಚನಗೈಯುವರು. ಮಸೀದಿ ಖತೀಬ್ ಮುಸ್ತಫಾ ಫೈಝಿ ಪಾತೂರು ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ರಾಜ್ಯ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್, ಮಂಗಳೂರು ಶಾಸಕ ಹಾಜಿ ಬಿ.ಎ. ಮೊದಿನ್ ಬಾವ, ಮುಡಾ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಜಿಲ್ಲಾ ವಕ್ಫ್ ಬೋರ್ಡ್ ಚೆಯರ್‌ಮೆನ್ ಹಾಜಿ ಎಸ್.ಎಂ. ರಶೀದ್, ಹಜ್ ಕಮಿಟಿ ಜಿಲ್ಲಾ ಚೆಯರ್‌ಮೆನ್ ಹಾಜಿ ವೈ. ಮುಹಮ್ಮದ್ ಕುಂಞಿ, ಜಿ.ಪಂ. ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಕೆ.ಎಸ್.ಎ. ಅಲ್-ಮುಝೈನ್ ಮೆನೇಜಿಂಗ್ ಡೈರೆಕ್ಟರ್ ಹಾಜಿ ಝಕರಿಯಾ, ಬುಡಾ ಅಧ್ಯಕ್ಷ ಪಿಯೂಸ್ ಎಲ್. ರೋಡ್ರಿಗಸ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಬಂಟ್ವಾಳ ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ, ಉಪಾಧ್ಯಕ್ಷ ಮುಹಮ್ಮದ್ ನಂದರಬೆಟ್ಟು, ಮನಪಾ ಕಾರ್ಪೊರೇಟರ್ ರವೂಫ್ ಬಜಾಲ್, ಮುಸ್ಲಿಂ ಸೆಂಟ್ರಲ್ ಕಮಿಟಿ ಕೋಶಾಧಿಕಾರಿ ಮೂಸಾ ಮೊದಿನ್ ಮೊದಲಾದವರು ಭಾಗವಹಿಸಲಿದ್ದಾರೆ.
ಶೈಖ್ ಮೌಲವಿ ದರ್ಗಾ ಶರೀಫ್ ಇದರ ಉರೂಸ್ ಕಾರ್ಯಕ್ರಮ ಸಮಾರೋಪ ಕಾರ್ಯಕ್ರಮ ನಡೆಯಲಿದೆ ಎಂದು ಮಸೀದಿ ಕಾರ್ಯದರ್ಶಿ ಅಬ್ದುಲ್ ಹಮೀದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





