ಮಹಿಳಾ ಉದ್ಯಮಿಗಳಿಂದ ಆರ್ಥಿಕ ಪ್ರಗತಿ: ರಿತೇಶ್ ಮೆಹ್ತಾ

ಬೆಂಗಳೂರು, ಎ.15: ಮಹಿಳಾ ಉದ್ಯಮಿ ಗಳು ಯಶಸ್ವಿಯಾದರೆ ದೇಶದ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಗೊಳಿಸಲು ಸಾಧ್ಯ ಎಂದು ಭಾರತದಲ್ಲಿ ಫೇಸ್‌ಬುಕ್‌ನ ಆರ್ಥಿಕ ಪ್ರಗತಿ ಯ ಉಪಕ್ರಮಗಳ ವಿಭಾಗದ ಮುಖ್ಯಸ್ಥ ರಿತೇಶ್‌ಮೆಹ್ತಾ ಅಭಿಪ್ರಾಯಪಟ್ಟಿದ್ದಾರೆ.
ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿ ಸುವ ಉದ್ದೇಶದಿಂದ ಶುಕ್ರವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಆಯೋಜಿಸಲಾಗಿದ್ದ ಫೇಸ್‌ಬುಕ್‌ನ ‘ಬೂಸ್ಟ್ ಯುವರ್ ಬಿಸಿನೆಸ್ ಫಾರ್ ವುಮೆನ್’ ಕಾರ್ಯಕ್ರಮ ವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಸಮುದಾಯದೊಳಗೆ ಬಂಡವಾಳ ಹೂಡಿಕೆ, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವಲ್ಲಿಯೂ ಮಹಿಳೆಯರು ಮುಂಚೂಣಿ ಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಉದ್ಯಮಕ್ಷೇತ್ರದಲ್ಲೂ ಮಹಿಳೆಯರು ಮತ್ತಷ್ಟು ಸಾಧನೆಗಳನ್ನು ಮಾಡಲು ಅನುಕೂಲವಾಗು ವಂತೆ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ ಎಂದು ಅವರು ಹೇಳಿದರು.
ಉತ್ತರಪ್ರದೇಶದಲ್ಲಿ ಆಯೋಜಿಸಲಾಗಿದ್ದ ಈ ಅಭಿಯಾನ ಮತ್ತು ಹಲವು ಕಾರ್ಯಕ್ರಮ ಗಳಡಿಯಲ್ಲಿ ಮೂರು ಸಾವಿರಕ್ಕೂ ಹೆಚ್ಚು ಸಣ್ಣ ವ್ಯಾಪಾರಿಗಳಿಗೆ ತರಬೇತಿ ನೀಡಿ ಯಶಸ್ವಿಯಾದ ಬೆನ್ನಲ್ಲೇ ಇದೀಗ ಬೆಂಗಳೂರಿ ನಲ್ಲೂ ಇದನ್ನು ಆರಂಭಿಸಲಾಗಿದೆ ಎಂದು ರಿತೇಶ್‌ಮೆಹ್ತಾ ತಿಳಿಸಿದರು.
ದೇಶದೆಲ್ಲೆಡೆ ಇರುವ ಮಹಿಳಾ ಉದ್ಯಮಿಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಆಯೋಜಿಸಲಾಗಿರುವ ಈ ಅಭಿಯಾನದಲ್ಲಿ ಕಾರ್ಯಾಗಾರಗಳ ಸರಣಿ ಮೂಲಕ ಮಹತ್ವಾಕಾಂಕ್ಷೆ ಹೊಂದಿದ ಮತ್ತು ಈಗಾಗಲೇ ಉದ್ಯಮಿಗಳಾಗಿರುವ ಮಹಿಳೆಯರಿಗೆ ಹಲವು ವಿಧದ ತರಬೇತಿ, ಸಲಹೆ ಸೂಚನೆಗಳನ್ನು ನೀಡಲಾಗುತ್ತದೆ ಎಂದು ಅವರು ಹೇಳಿದರು.
ಜೊತೆಗೆ ಆನ್‌ಲೈನ್ ಸಂಪ ನ್ಮೂಲಗಳ ಮೂಲಕ ವ್ಯವಹಾರದ ಜ್ಞಾನ ವೃದ್ಧಿ, ಕೌಶಲ್ಯಾಭಿವೃದ್ಧಿ, ವ್ಯವಹಾರಗಳ ಕೊಂಡಿಗಳು, ವ್ಯವಹಾರ ಪ್ರಗತಿಗೆ ಅಗತ್ಯವಾದ ತಂತ್ರಜ್ಞಾನಗಳ ಬಗ್ಗೆ ಮಾಹಿತಿ ಯನ್ನೂ ನೀಡಲಾಗುತ್ತದೆ. ಉದ್ಯಮಿಗಳು, ನಾಗರಿಕ ಸೇವಾ ಸಂಘಗಳು ಮತ್ತು ಸಾರ್ವಜನಿಕ ವಲಯಗಳ ಸಹಯೋಗದಲ್ಲಿ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ರಿತೇಶ್ ಮೆಹ್ತಾ ತಿಳಿಸಿದರು.
ಇತ್ತೀಚಿನ ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿರುವ ಮೂರು ದಶಲಕ್ಷಕ್ಕೂ ಅಧಿಕ ಅತಿಸಣ್ಣ ಉದ್ದಿಮೆಗಳು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಮಹಿಳಾ ಮಾಲಕತ್ವ ಹೊಂದಿವೆ. ಈ ಉದ್ದಿಮೆಗಳು ದೇಶದ ಕೈಗಾರಿಕಾ ಪ್ರಗತಿಯಲ್ಲಿ ಶೇ.3ರಷ್ಟು ಪಾಲನ್ನು ಹೊಂದಿವೆ. ಸುಮಾರು 8 ದಶಲಕ್ಷಕ್ಕೂ ಅಧಿಕ ಉದ್ಯೋಗವನ್ನು ನೀಡಿವೆ. ಜಾಗತಿಕ ಮಟ್ಟದಲ್ಲಿ ಸರಾಸರಿ ಶೇ.40ರಷ್ಟು ಮಹಿಳಾ ಕಾರ್ಮಿಕರಿದ್ದಾರೆ. ಭಾರತದಲ್ಲಿ ಇವರ ಪ್ರಮಾಣ ಶೇ.24ರಷ್ಟಿದೆ ಎಂದು ಅವರು ವಿವರಣೆ ನೀಡಿದರು.
ಜಾಗತಿಕವಾಗಿ 50 ದಶಲಕ್ಷ ಸಣ್ಣ ಮತ್ತು ಮಧ್ಯಮ ವ್ಯವಹಾರಗಳಿಗೆ ಸಂಬಂಧಿಸಿದ ಫೇಸ್‌ಬುಕ್ ಪೇಜ್‌ಗಳಿವೆ. ಕಳೆದ ನಾಲ್ಕು ವರ್ಷಗಳಲ್ಲಿ(2012-2015) ಭಾರತದಲ್ಲಿ ಹೊಸದಾಗಿ ಆರಂಭವಾದ ಮಹಿಳಾ ಉದ್ಯಮಗಳ ಕುರಿತಾದ ಫೇಸ್‌ಬುಕ್ ಪೇಜ್‌ಗಳ ಸಂಖ್ಯೆ 6 ಪಟ್ಟು ಹೆಚ್ಚಳವಾಗಿದೆ ಎಂದು ಅವರು ಹೇಳಿದರು.
ಸಮಾರಂಭದಲ್ಲಿ ಯೆಲ್ಲೊ ಅಂಬ್ರೆಲ್ಲಾ ಪ್ರೊಡಕ್ಷನ್ ಸಂಸ್ಥೆಯ ಮಾಲಕಿ ನೀಲ್ಮಾ ದಿಲೀಪನ್ ಸೇರಿದಂತೆ ಸುಮಾರು 350ಕ್ಕೂ ಹೆಚ್ಚು ಮಹಿಳಾ ಉದ್ಯಮಿಗಳು ಪಾಲ್ಗೊಂಡಿದ್ದರು.







