ಜಿಲ್ಲಾ ಪಂಚಾಯತ್ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ಅಂತಿಮ ಪಟ್ಟಿ ಪ್ರಕಟ
ಬೆಂಗಳೂರು, ಎ. 15: ಜಿಲ್ಲಾ ಪಂಚಾಯತ್‌ಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳಲ್ಲಿನ ಅನುಸೂಚಿತ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರಿಗೆ ಹಾಗೂ ಮೀಸಲಿರಿಸಿದವರಿಗೆ ಹಂಚಿಕೆಯಾದ ಹುದ್ದೆಗಳ ಅಂತಿಮ ಪಟ್ಟಿಯನ್ನು ಸರಕಾರ ಪ್ರಕಟಿಸಿದೆ.
ಬಾಗಲಕೋಟೆ-ಅಧ್ಯಕ್ಷ ಸಾಮಾನ್ಯ(ಮ), ಉಪಾಧ್ಯಕ್ಷ ಹಿಂದುಳಿದ ವರ್ಗ(ಅ), ಬೆಂಗಳೂರು ನಗರ ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಪರಿಶಿಷ್ಟ ಜಾತಿ(ಮ), ಬೆಂಗಳೂರು ಗ್ರಾಮಾಂತರ ಅಧ್ಯಕ್ಷ ಹಿಂದುಳಿದ ವರ್ಗ(ಅ), ಪರಿಶಿಷ್ಟ ಜಾತಿ(ಮ), ಬೆಳಗಾವಿ ಅಧ್ಯಕ್ಷ ಪರಿಶಿಷ್ಟ ಜಾತಿ(ಮ), ಉಪಾಧ್ಯಕ್ಷ ಸಾಮಾನ್ಯ, ಬಳ್ಳಾರಿ ಅಧ್ಯಕ್ಷ ಹಿಂದುಳಿದ ವರ್ಗ(ಬ) (ಮ), ಉಪಾಧ್ಯಕ್ಷ ಪರಿಶಿಷ್ಟ ಜಾತಿ. ಬೀದರ್ ಅಧ್ಯಕ್ಷ ಪರಿಶಿಷ್ಟ ಪಂಗಡ(ಮ), ಉಪಾಧ್ಯಕ್ಷ ಸಾಮಾನ್ಯ, ವಿಜಯಪುರ ಅಧ್ಯಕ್ಷ ಹಿಂದುಳಿದ ವರ್ಗ (ಅ), ಉಪಾಧ್ಯಕ್ಷ ಸಾಮಾನ್ಯ, ಚಾಮರಾಜನಗರ ಅಧ್ಯಕ್ಷ ಪರಿಶಿಷ್ಟ ಪಂಗಡ, ಉಪಾಧ್ಯಕ್ಷ ಸಾಮಾನ್ಯ, ಚಿಕ್ಕಬಳ್ಳಾಪುರ ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಹಿಂದುಳಿದ ವರ್ಗ (ಅ) (ಮ), ಚಿಕ್ಕಮಗಳೂರು ಅಧ್ಯಕ್ಷ ಪರಿಶಿಷ್ಟ ಜಾತಿ ಮಹಿಳೆ , ಉಪಾಧ್ಯಕ್ಷ ಸಾಮಾನ್ಯ.
ಚಿತ್ರದುರ್ಗ ಅಧ್ಯಕ್ಷ ಸಾಮಾನ್ಯ(ಮ), ಉಪಾಧ್ಯಕ್ಷ ಪರಿಶಿಷ್ಟ ಪಂಗಡ, ದಕ್ಷಿಣ ಕನ್ನಡ ಅಧ್ಯಕ್ಷ ಪರಿಶಿಷ್ಟ ಜಾತಿ, ಉಪಾಧ್ಯಕ್ಷ ಸಾಮಾನ್ಯ(ಮ), ದಾವಣಗೆರೆ ಅಧ್ಯಕ್ಷ ಸಾಮಾನ್ಯ(ಮ), ಉಪಾಧ್ಯಕ್ಷ ಪರಿಶಿಷ್ಟ ಜಾತಿ, ಧಾರವಾಡ ಸಾಮಾನ್ಯ(ಮ), ಉಪಾಧ್ಯಕ್ಷ ಹಿಂದುಳಿದ ವರ್ಗ(ಅ), ಗದಗ ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಸಾಮಾನ್ಯ(ಮ), ಗುಲ್ಬರ್ಗ ಅಧ್ಯಕ್ಷ ಸಾಮಾನ್ಯ(ಮ), ಉಪಾಧ್ಯಕ್ಷ ಪರಿಶಿಷ್ಟ ಜಾತಿ(ಮ), ಹಾಸನ ಅಧ್ಯಕ್ಷ ಪರಿಶಿಷ್ಟ ಪಂಗಡ(ಮ), ಉಪಾಧ್ಯಕ್ಷ ಸಾಮಾನ್ಯ.
ಹಾವೇರಿ ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಸಾಮಾನ್ಯ(ಮ), ಕೊಡಗು ಅಧ್ಯಕ್ಷ ಪರಿಶಿಷ್ಟ ಜಾತಿ, ಉಪಾಧ್ಯಕ್ಷ ಸಾಮಾನ್ಯ(ಮ), ಕೋಲಾರ ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಪರಿಶಿಷ್ಟ ಪಂಗಡ(ಮ), ಕೊಪ್ಪಳ ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಹಿಂದುಳಿದ ವರ್ಗ(ಅ) (ಮ).
ಮಂಡ್ಯ ಅಧ್ಯಕ್ಷ ಸಾಮಾನ್ಯ(ಮ), ಉಪಾಧ್ಯಕ್ಷ ಪರಿಶಿಷ್ಟ ಪಂಗಡ(ಮ), ಮೈಸೂರು ಅಧ್ಯಕ್ಷ ಹಿಂದುಳಿದ ವರ್ಗ(ಅ)(ಮ), ಉಪಾಧ್ಯಕ್ಷ ಸಾಮಾನ್ಯ, ರಾಯಚೂರು ಅಧ್ಯಕ್ಷ ಹಿಂದುಳಿದ ವರ್ಗ(ಅ) (ಮ), ಉಪಾಧ್ಯಕ್ಷ ಸಾಮಾನ್ಯ, ರಾಮನಗರ ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಸಾಮಾನ್ಯ(ಮ), ಶಿವಮೊಗ್ಗ ಅಧ್ಯಕ್ಷ ಸಾಮಾನ್ಯ(ಮ), ಹಿಂದುಳಿದ ವರ್ಗ(ಬ) (ಮ).
ತುಮಕೂರು ಅಧ್ಯಕ್ಷ ಹಿಂದುಳಿದ ವರ್ಗ(ಅ), ಉಪಾಧ್ಯಕ್ಷ ಪರಿಶಿಷ್ಟ ಜಾತಿ, ಉತ್ತರ ಕನ್ನಡ ಅಧ್ಯಕ್ಷ ಪರಿಶಿಷ್ಟ ಜಾತಿ(ಮ), ಉಪಾಧ್ಯಕ್ಷ ಹಿಂದುಳಿದ ವರ್ಗ(ಅ), ಉಡುಪಿ ಅಧ್ಯಕ್ಷ ಪರಿಶಿಷ್ಟ ಜಾತಿ, ಉಪಾಧ್ಯಕ್ಷ ಸಾಮಾನ್ಯ(ಮ), ಯಾದಗಿರಿ ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಸಾಮಾನ್ಯ(ಮ) ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಎಂ.ಬಿ.ಧೋತ್ರೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ರೇವಣ್ಣ ಕನಸು ಭಗ್ನ
ತೀವ್ರ ಕೂತೂಹಲ ಕೆರಳಿಸಿದ್ದ ಹಾಸನ ಜಿಲ್ಲಾ ಪಂಚಾಯತ್‌ನಲ್ಲಿ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರ ಸೊಸೆ, ಮಾಜಿ ಸಚಿವ ಎಚ್.ಡಿ.ರೇವಣ್ಣ ಪತ್ನಿ ಭವಾನಿ ರೇವಣ್ಣ ಅಧ್ಯಕ್ಷೆಯಾಗುವ ಕನಸು ಭಗ್ನಗೊಂಡಿದೆ.





