Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ಮರೆವು ...! ಒಂದು ರೋಗವೇ?

ಮರೆವು ...! ಒಂದು ರೋಗವೇ?

ವೆದ್ಯಕೀಯ ಪ್ರಶ್ನಾವಳಿ

ವಾರ್ತಾಭಾರತಿವಾರ್ತಾಭಾರತಿ15 April 2016 11:24 PM IST
share
ಮರೆವು ...! ಒಂದು ರೋಗವೇ?

ಭಾಗ-2

ದೇಹ ತೂಕ: ಹೆಚ್ಚಿನ ದೇಹತೂಕ ಇರುವವರು ಅಥವಾ ಸ್ಥೂಲಕಾಯರು ರಕ್ತ ಸಂಬಂಧಿತ ಕಾಯಿಲೆಗಳಿಗೆ ಅರಕ್ಷಿತ ಸ್ಥಿತಿಯಲ್ಲಿರುವವರು, ರಕ್ತದಲ್ಲಿ ಕೊಲೆಸ್ಟ್ರಾಲ್ ಅಂಶ ಜಾಸ್ತಿಯಾದಲ್ಲಿ, ಮೆದುಳಿನ ರಕ್ತ ಸಂಚಲನಕ್ಕೆ ಅಡಚಣೆಯುಂಟಾಗಿ ಈ ರೀತಿಯ ಕಾಯಿಲೆಗಳಿಗೆ ತುತ್ತಾಗಬಹುದು. ಆದುದರಿಂದ ಉತ್ತಮವಾದ ದೈಹಿಕ ವ್ಯಾಯಾಮ ಕ್ರಮವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಉತ್ತಮ.
 ವಿದ್ಯೆ (education): ಅಧ್ಯಯನಗಳ ಪ್ರಕಾರ, ಹಲವಾರು ವರ್ಷ ಕಲಿಕೆಯಲ್ಲಿ ತೊಡಗಿರುವವರಿಗೆ ಈ ಕಾಯಿಲೆ ತಟ್ಟುವುದು ವಿರಳ. (ಅನೇಕ ಅಪವಾದಗಳಿವೆ) ಅವಿದ್ಯಾವಂತರಿಗೆ ಈ ಕಾಯಿಲೆಯ ತಗಲುವ ಸಾಧ್ಯತೆ ಹೆಚ್ಚು. ಕಲಿಯುವಿಕೆಯು ಮೆದುಳನ್ನು ಆಗಿಂದಾಗೆ ಚೇತನಗೊಳಿಸಿ ಹೆಚ್ಚು ಬಲಪಡಿಸುತ್ತದೆ. ಹಾಗಾಗಿ ಕೆಲವು ಮೆದುಳಿಗೆ ಸಂಬಂಧಿಸಿದ ಕಾಯಿಲೆಗಳನ್ನು ತಡೆಗಟ್ಟುವಲ್ಲಿ ಯಶಸ್ವಿಯಾಗುತ್ತದೆ ಎಂಬ ವಿವರಣೆಯನ್ನು ವಿಜ್ಞಾನಿಗಳು ಕೊಡುತ್ತಾರೆ. ಹೀಗಾಗಿ ನಮ್ಮ ಬಿಡುವಿನ ಸಮಯದಲ್ಲಿ ಒಳ್ಳೆಯ ಪುಸ್ತಕಗಳನ್ನು ಪತ್ರಿಕೆಗಳನ್ನು ಓದುವುದು ಮತ್ತು ಅದರ ಬಗ್ಗೆ ಚರ್ಚೆ ನಡೆಸುವುದು ಉತ್ತಮ ಹವ್ಯಾಸ.
 ಮಾನಸಿಕ ವ್ಯಾಯಾಮ (mental exercise): ಸಂಘ ಜೀವಿಗಳಾಗಿರುವವರು ಮತ್ತು ತಮ್ಮನ್ನು ತಾವೇ ಅನೇಕ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳುವವರಲ್ಲಿ ಈ ಕಾಯಿಲೆಯು ಅಪರೂಪ ಎಂಬ ಅಂಶವು ಸಂಶೋಧನೆಗಳ ಮೂಲಕ ಬೆಳಕಿಗೆ ಬಂದಿದೆ.
ಉದಾ: ಅನೇಕ ಕಾರ್ಯಕ್ರಮಗಳಲ್ಲಿ ಪಾಲು ತೆಗೆದುಕೊಳ್ಳುವುದು. ಒಗಟು ಬಿಡುವ ಹವ್ಯಾಸ, ಕ್ಲಿಷ್ಟ ಪದಬಂಧ ಬಿಡಿಸುವುದು ... ಇತ್ಯಾದಿಗಳು ಉತ್ತಮ ಹವ್ಯಾಸಗಳಾಗಿವೆ.
 ತಲೆಗೆ ಪೆಟ್ಟು / ಮೆದುಳಿನ ಆಘಾತ: (head injury / brain trauma) ಬಹಳಷ್ಟು ಆಲ್ಜೀಮರ್ಸ್ ರೋಗಿಗಳ ವೈದ್ಯಕೀಯ ಚರಿತ್ರೆಯಲ್ಲಿ ಮೆದುಳಿನ ಆಘಾತ ಅಥವಾ ಅಪಘಾತದಲ್ಲಿ ತಲೆಗೆ ಪೆಟ್ಟು ಅಧ್ಯಯನದಿಂದ ಕಂಡುಬಂದ ಸಂಗತಿಗಳು.
ಈ ರೀತಿಯಾಗಿ ಮರೆವು ಎಂಬ ಕಾಯಿಲೆಯು ನಮ್ಮ ಸಮಾಜ ತಪ್ಪಿಸಿಕೊಳ್ಳಲಾಗದ ಅಂಶವಾಗಿ ಬೆಳೆಯುತ್ತಾ ಇದೆ. ಈ ನಿಟ್ಟಿನಲ್ಲಿ ಯುವ ಜನರು ಈ ರೋಗಿಗಳನ್ನು ನೋಡಿಕೊಳ್ಳುವಲ್ಲಿ ಯಾವ ರೀತಿಯಲ್ಲಿ ಸಹಾಯ ಮಾಡಬಹುದು?
    *ಕಾಯಿಲೆಯ ಬಗ್ಗೆ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳಿ.
    *ಶಾಂತಚಿತ್ತರಾಗಿ ಹಾಗೂ ತಾಳ್ಮೆಯಿಂದಿರಿ.
    *ಪ್ರೀತಿ ತೋರಿಸಿರಿ.
    *ರೋಗಿಯೊಂದಿಗೆ ಬೆರೆಯಿರಿ.
    *ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿರಿ.
    *ಗೌರವಿಸಿರಿ ರೋಗಿ ನುಡಿ ತಪ್ಪಿದಲ್ಲಿ ಸರಿಪಡಿಸುವ ಗೊಡವೆಗೆ ಹೋಗದಿರಿ.
    *ಅವರನ್ನು ಆರೈಕೆ ಮಾಡುವವರಿಗೆ ನಿಮ್ಮಿಂದಾದಷ್ಟು ಸಹಾಯ ಮಾಡಿರಿ.
    *ಮನೆಗೆ ಬರುವ ಸ್ನೇಹಿತರಿಗೆ / ಬಂಧುಗಳಿಗೆ ಪೂರ್ವಭಾವಿಯಾಗಿ ರೋಗಿಯ ಕಾಯಿಲೆ ಮತ್ತು ನಡವಳಿಕೆ ಬಗ್ಗೆ ಮಾಹಿತಿ ನೀಡಿರಿ. ಈ ರೀತಿ ಮಾಹಿತಿ ನೀಡಿದಲ್ಲಿ, ಅವರು ಮನೆಗೆ ಬಂದಾಗ ರೋಗಿಯನ್ನು ಎದುರಿಸಲು ಮತ್ತು ಸಹಾಯನುಭೂತಿಯಿಂದ ವರ್ತಿಸಲು ಸಹಾಯ ಆಗಬಹುದು.
    *ನಿಮ್ಮ ಬಿಡುವಿನ ಕೆಲ ಸಮಯವನ್ನು ಅವರೊಂದಿಗೆ ಕಳೆಯಿರಿ
.

ಮರೆವು ಅಥವಾ ಮರೆಗುಳಿತನವು ಒಂದು ಗಂಭೀರವಾದ ಕಾಯಿಲೆಯಾಗಿದೆ. ಈ ರೋಗದಿಂದ ಬಳಲುವ ರೋಗಿಯನ್ನು ನೋಡಿಕೊಳ್ಳಲು ಸ್ನೇಹಿತರ, ಕುಟುಂಬ/ ಬಂಧುಗಳ ಹಾಗೂ ಸಮಾಜದ ನೆರವಿನ ಅಗತ್ಯವಿದೆ. ಅಂಕಿ ಸಂಖ್ಯೆಗಳ ಪ್ರಕಾರ (WHO)  ಭಾರತ ಸಹಿತ ಪ್ರಗತಿಪರ ದೇಶಗಳಲ್ಲಿ ವಯಸ್ಕರ ಸಂಖ್ಯೆಯು ಬೆಳೆಯುತ್ತಾ ಇದೆ. ಮನುಷ್ಯನ ಆಯಸ್ಸು ಹೆಚ್ಚಾದಂತೆ, ಈ ಮರೆವಿನಂತಹ ಕಾಯಿಲೆಗಳು ಒಂದು ಸಮಸ್ಯೆಯಾಗಿ ಬೆಳೆಯುತ್ತಾ ಇವೆ. ಆಲ್ಜೀಮರ್ಸ್ ಡಿಸೀಸ್ ಇಂಟರ್‌ನ್ಯಾಶನಲ್ (ADI)  ಪ್ರಕಾರ ಪ್ರಗತಿಪರ ದೇಶಗಳಲ್ಲಿ 65 ವರ್ಷಗಳಿಂದ ಮೇಲ್ಪಟ್ಟವರು ಶೇ. 5.8 ರಷ್ಟು, 75 ವರ್ಷಗಳಿಗಿಂತ ಮೇಲ್ಪಟ್ಟವರು 15-20 ರಷ್ಟು ಹಾಗೂ 85 ರಷ್ಟು ಮೀರಿದವರಲ್ಲಿ ಶೇ. 25.50 ಜನರಲ್ಲಿ ಈ ರೋಗದ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ. ಈ ಕಾರಣದಿಂದಾಗಿ, ನಮ್ಮ ಜೀವನದ ಘಟ್ಟಗಳಲ್ಲಿಯೂ ಇಂಥಾ ಸಂದರ್ಭಗಳು (ರೋಗಿಗಳನ್ನು ಆರೈಕೆ ಮಾಡುವುದು) ಬರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಈ ನಿಟ್ಟಿನಲ್ಲಿ ನಮ್ಮಿಂದಾದಷ್ಟು ಈ ರೋಗದ ಬಗ್ಗೆ ಮತ್ತು ಚಿಕಿತ್ಸೆಯ ಬಗ್ಗೆ ತಿಳಿದುಕೊಳ್ಳೋಣ.
ಹೀಗೆ ಮಾಡಿದಲ್ಲಿ, ಈಗಿನ ಅಥವಾ ಮುಂಬರುವ ದಿನಗಳಲ್ಲಿ ಬರಬಹುದಾದ ಅಹಿತಕರ ಘಟನೆಗಳಿಗೆ ಸಿದ್ಧರಾಗಿರಲು ಸಾಧ್ಯವಾಗುತ್ತದೆ.

ಮರೆವು ಅಥವಾ ಮರೆಗುಳಿತನವು ಒಂದು ಗಂಭೀರವಾದ ಕಾಯಿಲೆ ಆಗಿದೆ. ಈ ರೋಗದಿಂದ ಬಳಲುವ ರೋಗಿಯನ್ನು ನೋಡಿಕೊಳ್ಳಲು ಸ್ನೇಹಿತರ, ಕುಟುಂಬ/ ಬಂಧುಗಳ ಹಾಗೂ ಸಮಾಜದ ನೆರವಿನ ಅಗತ್ಯವಿದೆ. ಅಂಕಿ ಸಂಖ್ಯೆಗಳ ಪ್ರಕಾರ ಭಾರತ ಸಹಿತ ಪ್ರಗತಿಪರ ದೇಶಗಳಲ್ಲಿ ವಯಸ್ಕರ ಸಂಖ್ಯೆಯು ಬೆಳೆಯುತ್ತಾ ಇದೆ. ಮನುಷ್ಯನ ಆಯಸ್ಸು ಹೆಚ್ಚಾದಂತೆ, ಈ ಮರೆವಿನಂತಹ ಕಾಯಿಲೆಗಳು ಒಂದು ಸಮಸ್ಯೆಯಾಗಿ ಬೆಳೆಯುತ್ತಾ ಇವೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X