ಶುಶ್ರೂಷಕ ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆ
ಬೆಂಗಳೂರು, ಎ.15: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಇಂದು ನಡೆಸಿದ ಶುಶ್ರೂಷಕ ಹುದ್ದೆಯ ಪರಿಶಿಷ್ಟ ಜಾತಿ, ಪಂಗಡ ಮತ್ತು ಪ್ರವರ್ಗ-1ರ ಬಿ.ಎಸ್ಸಿ ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆಯ ಪ್ರಕ್ರಿಯೆಗಾಗಿ ಒಟ್ಟು 865 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದು, ಒಟ್ಟು 700 ಅಭ್ಯರ್ಥಿಗಳು ಪರಿಶೀಲನಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದಾರೆ. ಪಿಜಿಇಟಿ ಅಭ್ಯರ್ಥಿಗಳು: ಮೊದಲ ಸುತ್ತಿನ ವೈದ್ಯಕೀಯ, ದಂತ ವೈದ್ಯಕೀಯ ಸ್ನಾತಕೋತ್ತರ ಸೀಟು ಹಂಚಿಕೆಯ ಪಿಜಿಇಟಿ ಕೌನ್ಸೆಲಿಂಗ್ ಪ್ರಗತಿಯಲ್ಲಿದ್ದು, ಇಂದು 83 ಅಭ್ಯರ್ಥಿಗಳು ತಮ್ಮ ದಾಖಲಾತಿಗಳನ್ನು ಸಲ್ಲಿಸಿದ್ದು, 31ಅಭ್ಯರ್ಥಿಗಳು ಪ್ರವೇಶಾನುಮತಿ ಪತ್ರಗಳನ್ನು ಪಡೆದುಕೊಂಡಿದ್ದಾರೆ. ಎ. 21ರವರೆಗೆ ಇಚ್ಛೆ ಆಯ್ಕೆಗೆ ಮತ್ತು ಶುಲ್ಕಪಾವತಿಗೆ ಅವಕಾಶವಿದೆ ಎಂದು ಪರೀಕ್ಷಾ ಪ್ರಾಧಿಕಾರದ ಪ್ರಕಟನೆ ಹೇಳಿದೆ.
Next Story





