ಬೆಲ್ಜಿಯಂ ಸಾರಿಗೆ ಸಚಿವೆ ರಾಜೀನಾಮೆ

ಬ್ರಸೆಲ್ಸ್, ಎ. 15: ಬೆಲ್ಜಿಯಂನ ಸಾರಿಗೆ ಸಚಿವೆ ಜ್ಯಾಕ್ವೆಲಿನ್ ಗ್ಯಾಲಂಟ್ ಇಂದು ರಾಜೀನಾಮೆ ನೀಡಿದ್ದಾರೆ. ಕಳೆದ ತಿಂಗಳು ದಾಳಿ ನಡೆಯುವುದಕ್ಕಿಂತ ಒಂದು ವರ್ಷದ ಮೊದಲೇ ಬ್ರಸೆಲ್ಸ್ ವಿಮಾನ ನಿಲ್ದಾಣದ ಭದ್ರತೆಯನ್ನು ಟೀಕಿಸಿ ಐರೋಪ್ಯ ಒಕ್ಕೂಟ ಸಲ್ಲಿಸಿದ ವರದಿಯ ಬಗ್ಗೆ ಸಚಿವೆ ಸುಳ್ಳು ಹೇಳಿದ್ದಾರೆ ಎಂಬ ಪ್ರತಿಪಕ್ಷಗಳ ಆರೋಪದ ಹಿನ್ನೆಲೆಯಲ್ಲಿ ಅವರು ಈ ಕ್ರಮಕ್ಕೆ ಮುಂದಾಗಿದ್ದಾರೆ.
ಐರೋಪ್ಯ ಒಕ್ಕೂಟದ ಅಧಿಕಾರಿಗಳು 2015ರ ಮಾರ್ಚ್‌ನಲ್ಲಿ ಕಳುಹಿಸಿದ ವರದಿಯ ಬಗ್ಗೆ ತನ್ನ ಕಚೇರಿಗೆ ಮಾಹಿತಿಯಿರಲಿಲ್ಲ ಎಂದು ಜ್ಯಾಕ್ವೆಲಿನ್ ಈ ಮೊದಲು ಹೇಳುತ್ತಾ ಬಂದಿದ್ದರು.
Next Story





