ಟೆಂಪೋ ಢಿಕ್ಕಿ: ಸೈಕಲ್ ಸವಾರ ಮೃತ್ಯು
ಪಡುಬಿದ್ರೆ, ಎ.15: ಸೈಕಲ್‌ಗೆ ಟೆಂಪೋ ಢಿಕ್ಕಿ ಹೊಡೆದ ಪರಿಣಾಮ ಸೈಕಲ್ ಸವಾರ ಮೃತಪಟ್ಟ ಘಟನೆ ಶುಕ್ರವಾರ ಮುಂಜಾನೆ ಎರ್ಮಾಳು ನಾರಲ್ತಾಯ ಗುಡಿಯ ಬಳಿ ನಡೆದಿದೆ.
ನಾರಲ್ತಾಯ ಗುಡಿಯ ಬಳಿ ನಿವಾಸಿ ನಾಗೇಶ (32) ಘಟನೆಯಲ್ಲಿ ಮೃತಪಟ್ಟ ಸೈಕಲ್ ಸವಾರ. ನಾಗೇಶ್ ರಸ್ತೆ ಬದಿಯಲ್ಲಿ ಸೈಕಲ್‌ನಲ್ಲಿ ಸಂಚರಿಸುತ್ತಿದ್ದಾಗ ಅತೀ ವೇಗವಾಗಿ ಬಂದ ಕೋಳಿ ಸಾಗಾಟದ ಟೆಂಪೋ ಸೈಕಲ್‌ಗೆ ಢಿಕ್ಕಿ ಹೊಡೆಯಿತು. ಘಟನೆಯಿಂದಾಗಿ ನಾಗೇಶ್ ತೀವ್ರವಾಗಿ ಗಾಯಗೊಂಡಿದ್ದು, ಸ್ಥಳೀಯರು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟರು. ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





