ಇಂದು ಮರೋಳಿ ದೇವಸ್ಥಾನ ರಸ್ತೆ ಉದ್ಘಾಟನೆ
ಮಂಗಳೂರು, ಎ. 15: ಸುಮಾರು 2.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಮರೋಳಿ ಶ್ರೀ ಸೂರ್ಯನಾರಾಯಣ ದೇವಸ್ಥಾನದ ರಸ್ತೆ ಉದ್ಘಾಟನಾ ಸಮಾರಂಭವು ಎ.16ರಂದು ಬೆಳಗ್ಗೆ 9:30ಕ್ಕೆ ಮರೋಳಿ ಜೋಡುಕಟ್ಟೆ ಬಳಿ ನೆರವೇರಲಿದೆ. ಕಾರ್ಯಕ್ರಮದಲ್ಲಿ ಮೇಯರ್ ಎಂ. ಹರಿನಾಥ, ಶಾಸಕ ಜೆ.ಆರ್. ಲೋಬೊ, ಸಂಸದ ನಳಿನ್ ಕುಮಾರ್ ಕಟೀಲು ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story





