ಡೆವಿಲ್ಸ್‌ಗೆ ಬೆದರಿದ ಕಿಂಗ್ಸ್ ಇಲೆವೆನ್
ಝಹೀರ್ ಖಾನ್ ಬಳಗಕ್ಕೆ ಎಂಟು ವಿಕೆಟ್‌ಗಳ ಜಯ

ಹೊಸದಿಲ್ಲಿ, ಎ.15: ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ವಿರುದ್ಧ ಇಲ್ಲಿ ನಡೆದ ಐಪಿಎಲ್ ಟ್ವೆಂಟಿ-20 ಟೂರ್ನಿಯ ಏಳನೆ ಪಂದ್ಯದಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡ 8 ವಿಕೆಟ್‌ಗಳ ಜಯ ಗಳಿಸಿದೆ.
ಇಲ್ಲಿನ ಫಿರೋಝ್ ಷಾ ಕೊಟ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ ಗೆಲುವಿಗೆ 112 ರನ್‌ಗಳ ಸುಲಭ ಸವಾಲು ಪಡೆದ ಡೇರ್ ಡೆವಿಲ್ಸ್ ತಂಡ ಇನ್ನೂ 39 ಎಸೆತಗಳು ಬಾಕಿ ಇರುವಾಗಲೇ 2 ವಿಕೆಟ್ ನಷ್ಟದಲ್ಲಿ 113 ರನ್ ಗಳಿಸಿತು.
ಡೆಲ್ಲಿ ತಂಡದ ಆರಂಭಿಕ ದಾಂಡಿಗ ವಿಕೆಟ್ ಕೀಪರ್ ಕ್ವಿಂಟನ್ ಡಿ ಕಾಕ್ ಔಟಾಗದೆ 59 ರನ್(42ಎ, 9ಬೌ,1ಸಿ) ಗಳಿಸಿ ತಂಡದ ಗೆಲುವಿಗೆ ದೊಡ್ಡ ಕೊಡುಗೆ ನೀಡಿದರು. ಕೇರಳದ ಯುವ ದಾಂಡಿಗ ಸಂಜು ಸ್ಯಾಮ್ಸನ್ 33 ರನ್ ಗಳಿಸಿದರು.
2.1 ಓವರ್‌ಗಳಲ್ಲಿ 9 ರನ್‌ಗೆ ಮೊದಲ ವಿಕೆಟ್ ಕಳೆದುಕೊಂಡ ಡೆಲ್ಲಿ ತಂಡಕ್ಕೆ ಅನಂತರ ಕ್ವಿಂಟನ್ ಡಿ ಕಾಕ್ ಮತ್ತು ಸ್ಯಾಮ್ಸನ್ ಎರಡನೆ ವಿಕೆಟ್‌ಗೆ 91 ರನ್ ಸೇರಿಸಿದರು. ತಂಡದ ಸ್ಕೋರ್ 12.5 ಓವರ್‌ಗಳಲ್ಲಿ 100ಕ್ಕೆ ತಲುಪುವಾಗ ಡೆಲ್ಲಿಯ ಎರಡನೆ ವಿಕೆಟ್ ಕಳೆದುಕೊಂಡಿತು. ಬಳಿಕ ಪವನ್ ನೇಗಿ (ಔಟಾಗದೆ 8 ರನ್) ಅವರು ಕ್ವಿಂಟನ್‌ಗೆ ಜೊತೆಯಾದರು. ಇವರು ಬ್ಯಾಟಿಂಗ್ ಮುಂದುವರಿಸಿ ತಂಡದ ಗೆಲುವಿಗೆ ಅಗತ್ಯದ ರನ್ ಸೇರಿಸಿದರು. ಶ್ರೇಯಸ್ ಅಯ್ಯರ್ 3 ರನ್ ಗಳಿಸಿ ಔಟಾದರು.
ಕಿಂಗ್ಸ್ ಇಲೆವೆನ್ 111/9: ಟಾಸ್ ಸೋತು ಬ್ಯಾಟಿಂಗ್ ಇಳಿಸಲ್ಪಟ್ಟ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟದಲ್ಲಿ 111 ರನ್ ಗಳಿಸಿತ್ತು.
ಅಮಿತ್ ಮಿಶ್ರಾ(4-11) ದಾಳಿಗೆ ಸಿಲುಕಿದ ಪಂಜಾಬ್ ತಂಡಕ್ಕೆ ಸ್ಪರ್ಧಾತ್ಮಕ ಸವಾಲನ್ನು ಸೇರಿಸಲು ಸಾಧ್ಯವಾಗಲಿಲ್ಲ. ಮನನ್ ವೋರಾ(32) ತಂಡದ ಪರ ಗರಿಷ್ಠ ಸ್ಕೋರ್ ದಾಖಲಿಸಿದರು.
ಶಾನ್ ಮಾರ್ಷ್(13), ಅಕ್ಷರ್ ಪಟೇಲ್(11), ಮೋಹಿತ್ ಶರ್ಮ(15), ಸಾಹು (ಔಟಾಗದೆ 18) ಎರಡಂಕೆಯ ಸ್ಕೋರ್ ದಾಖಲಿಸಿದರು.
ಮುರಳಿ ವಿಜಯ್(1), ನಾಯಕ ಡೇವಿಡ್ ಮಿಲ್ಲರ್(9), ವೃದ್ಧಿಮಾನ್ ಸಹಾ(3), ಜಾನ್ಸನ್(4), ಸಂದೀಪ್ ಶರ್ಮ(ಔಟಾಗದೆ1) ಒಂದಕೆಯ ಸ್ಕೋರ್ ದಾಖಲಿಸಿದರು.
,,,,,,,,,,,,
ಸ್ಕೋರ್ ಪಟ್ಟಿ
ಕಿಂಗ್ಸ್ ಇಲೆವೆನ್ ಪಂಜಾಬ್ 20 ಓವರ್‌ಗಳಲ್ಲಿ 111/9
ಮುರಳಿ ವಿಜಯ್ ರನೌಟ್01
ಎಂ.ವೋರಾ ಬಿ ಮಿಶ್ರಾ 32
ಶಾನ್ ಮಾರ್ಷ್ ಸ್ಟಂಪ್ಡ್ ಕ್ವಿಂಟನ್ ಬಿ ಮಿಶ್ರಾ 13
ಮಿಲ್ಲರ್ ಎಲ್‌ಬಿಡಬ್ಲು ಬಿ ಮಿಶ್ರಾ 09
ಮ್ಯಾಕ್ಸ್‌ವೆಲ್ ಸಿ ಬ್ರಾಥ್‌ವೈಟ್ ಬಿ ಮಿಶ್ರಾ 00
ಅಕ್ಷರ್ ಪಟೇಲ್ ಸಿ ನೇಗಿ ಬಿ ಯಾದವ್11
ಸಹಾ ರನೌಟ್03
ಜಾನ್ಸನ್‌ಬಿ ಮೋರಿಸ್04
ಮೋಹಿತ್ ಶರ್ಮ ಸಿ ಮೊರೀಸ್ ಬಿ ಖಾನ್ 15
ಪಿ.ಸಾಹು ಔಟಾಗದೆ18
ಸಂದೀಪ್ ಶರ್ಮ ಔಟಾಗದೆ01
ಇತರೆ04
ವಿಕೆಟ್ ಪತನ: 1-8, 2-37, 3-52, 4-52, 5-59, 6-65, 7-73, 8-90, 9-99.
ಬೌಲಿಂಗ್ ವಿವರ
ಝಹೀರ್ ಖಾನ್4-1-14-1
ಪಿ.ನೇಗಿ1-0-10-0
ಮೋರಿಸ್ 4-0-19-1
ಬ್ರಾಥ್‌ವೈಟ್4-0-33-0
ಎ.ಮಿಶ್ರಾ3-0-11-4
ಜೆ.ಯಾದವ್4-0-23-1
ಡೆಲ್ಲಿ ಡೇರ್‌ಡೆವಿಲ್ಸ್ 13.3 ಓವರ್‌ಗಳಲ್ಲಿ 113/2
ಕ್ವಿಂಟನ್ ಡಿ ಕಾಕ್ ಔಟಾಗದೆ59
ಶ್ರೇಯಸ್ ಅಯ್ಯರ್ ಸಿ ಸಹಾ ಬಿ ಶರ್ಮ03
ಸ್ಯಾಮ್ಸನ್ ಬಿ ಪಟೇಲ್33
ಪಿ.ನೇಗಿ ಔಟಾಗದೆ08
ಇತರೆ10
ವಿಕೆಟ್ ಪತನ: 1-9, 2-100
ಬೌಲಿಂಗ್ ವಿವರ
ಸಂದೀಪ್ ಶರ್ಮ 2.0-1-06-1
ಜಾನ್ಸನ್3.0-0-28-0
ಮೋಹಿತ್ ಶರ್ಮ2.0-0-10-0
ಅಕ್ಷರ್ ಪಟೆಲ್3.0-0-25-1
ಪಿ.ಸಾಹು2.3-0-27-0
ಮ್ಯಾಕ್ಸ್‌ವೆಲ್1.0-0-11-0
ಪಂದ್ಯಶ್ರೇಷ್ಠ: ಅಮಿತ್ ಮಿಶ್ರಾ





