ಕಾಸರಗೋಡಿನಲ್ಲಿ ಕಾಡಾನೆಗಳ ಹಾವಳಿ; ಕೃಷಿ ನಾಶ

ಕಾಸರಗೋಡು, ಎ. 16: ಜಿಲ್ಲೆಯ ಗಡಿಪ್ರದೇಶವಾದ ಅಡೂರಿನಲ್ಲಿ ಕಾಡಾನೆಗಳ ಹಾವಳಿ ತೀವ್ರಗೊಂಡಿದ್ದು, ಅಪಾರ ಕೃಷಿ ನಾಶಕ್ಕೆ ಕಾರಣವಾಗಿದೆ.
ಅಡೂರು ಪಾಂಡಿಯ ಶ್ರೀನಿವಾಸ್ ಹೆಬ್ಬಾರ್ ಎಂಬವರ ತೋಟಕ್ಕೆ ನುಗ್ಗಿದ ಕಾಡಾನೆಗಳು 25ಕ್ಕೂ ಅಧಿಕ ಅಡಿಕೆ, 50ಕ್ಕೂ ಹೆಚ್ಚು ಬಾಳೆ ಗಿಡಗಳನ್ನು ನೆಲಸಮ ಮಾಡಿವೆ.
ಆನೆಗಳ ಹಿಂಡೇ ನಾಡಿಗಿಳಿದಿದ್ದು, ಕೆಲ ದಿನಗಳಿಂದ ಪರಿಸರದ ಜನತೆ ಭೀತಿಯಲ್ಲಿ ದಿನದೂಡುವಂತಾಗಿದೆ. ನೀರು, ಆಹಾರ ಹುಡುಕಿಕೊಂಡು ಆನೆಗಳು ನಾಡಿಗಿಳಿದು ದಾಂಧಲೆ ನಡೆಸುತ್ತಿದ್ದು, ಕೃಷಿಕರಲ್ಲಿ ಚಿಂತೆಗೆ ಕಾರಣವಾಗಿದೆ.
Next Story





