ನಟ ದಿಲೀಪ್ ಕುಮಾರ್ ಆಸ್ಪತ್ರೆಗೆ ದಾಖಲು

ಮುಂಬೈ, ಎ.16: ಖ್ಯಾತ ಚಿತ್ರ ನಟ ದಿಲೀಪ್ ಕುಮಾರ್ ಅವರು ಉಸಿರಾಟದ ಸಮಸ್ಯೆಯಿಂದಾಗಿ ಇಂದು ಬೆಳಗ್ಗಿನ ಜಾವ ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
94ರ ಹರೆಯದ ದಿಲೀಪ್ ಕುಮಾರ್ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ವೈದ್ಯರು ನಿಗಾ ವಹಿಸಿದ್ದಾರೆಂದು ಆಸ್ಪತ್ರೆಯ ವೈದ್ಯರಾದ ಡಾ.ಜಲೀಲ್ ಪಾರ್ಕರ್ ತಿಳಿಸಿದ್ದಾರೆ.
ಆರು ದಶಕಗಳ ಕಾಲ ಚಿತ್ರ ರಂಗದಲ್ಲಿ ಮಿಂಚಿದ್ದ ದಿಲೀಪ್ ಕುಮಾರ‍್ (ಮುಹಮ್ಮದ್ ಯೂಸುಫ್ ಖಾನ್) ಅವರಿಗೆ ಮಧುಮತಿ, ದೇವ್‌ದಾಸ್, ಮುಘಲ್ -ಎ-ಆಝಮ್, ಗಂಗಾ ಜಮುನಾ, ಕರ್ಮ ಮತ್ತಿತರ ಚಿತ್ರಗಳು ಖ್ಯಾತಿಯನ್ನು ತಂದು ಕೊಟ್ಟಿತ್ತು.
ಚಿತ್ರ ರಂಗಕ್ಕೆ ನೀಡಿದ್ದ ಅನನ್ಯ ಕೊಡುಗೆಗಾಗಿ 2015ರಲ್ಲಿ ದಿಲೀಪ್ ಕುಮಾರ್‌ಗೆ ಪದ್ಮವಿಭೂಷಣ, 1991 ಪದ್ಮಭೂಷಣ, 1994ರಲ್ಲಿ ದಾದಾಸಾಹೇಬ್ ಪಾಲ್ಕೆ ಪ್ರಶಸ್ತಿ ನೀಡಲಾಗಿತ್ತು.
Next Story





