ನಿಮ್ಮ ಚರ್ಮದ ಕಾಂತಿ ಹೆಚ್ಚಿಸುವ 8 ಆಹಾರಗಳು
ಲಿಂಬೆ
ಲಿಂಬೆಯಲ್ಲಿ ವಿಟಮಿನ್ ಸಿ, ವಿಟಮಿನ್ ಬಿ ಮತ್ತು ಫಾಸ್ಪರಸ್ ಇದೆ. ಲಿಂಬೆಯ ಪ್ರಾಕೃತಿಕ ಆಸಿಡುಗಳು ಮೃತಕೋಶಗಳನ್ನು ನಿವಾರಿಸಿ ಮುಪ್ಪನ್ನು ದೂರ ಮಾಡುತ್ತದೆ. ಚರ್ಮದಲ್ಲಿರುವ ತೂತುಗಳನ್ನು ಸ್ವಚ್ಛ ಮಾಡಿ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ. ಲಿಂಬೆ ರಸ, ಮೊಟ್ಟೆಯ ಬಿಳಿ ಪದರ ಮತ್ತು ದ್ರಾಕ್ಷಿ ರಸದ ಮಿಶ್ರಣ ಚರ್ಮವನ್ನು ಮೃದು ಮತ್ತು ಹೊಳೆಯುವಂತೆ ಮಾಡುತ್ತದೆ. ಲಿಂಬೆ ರಸವನ್ನು ಹಿಂಡಿ ಚರ್ಮದ ನಷ್ಟವಾಗಿರುವ ಭಾಗಗಳಿಗೆ ಹಚ್ಚಿಕೊಳ್ಳಬಹುದು.
ಕೇಲ್
ಕೇಲ್ ಎನ್ನುವ ಕೋಸುಗಡ್ಡೆ ಜಾತಿಯ ಸಸ್ಯ ಹಸಿರು ತರಕಾರಿಗಳ ರಾಜ. ವಿಟಮಿನ್ ಸಿ, ವಿಟಮಿನ್ ಎ ಮತ್ತು ವಿಟಮಿನ್ ಕೆ ಚರ್ಮದ ಅಂಗಾಂಶಗಳನ್ನು ರಿಪೇರಿ ಮಾಡುತ್ತವೆ. ಕಣಗಳಿಂದಾಗುವ ನಷ್ಟ ಮತ್ತು ಹೊಳಪು ಕಡಿಮೆಯಾದಾಗ ಇದರಿಂದ ಲಾಭವಿದೆ. ಕೇಲ್ ಸ್ಮೂತಿ ಕುಡಿಯುವುದು ಅಥವಾ ಸಲಾಡ್‌ಗೆ ಕೇಲ್ ಸೇರಿಸುವುದು ಆರೋಗ್ಯಕರ. ಇದನ್ನು ಬಟಾಟೆ ಚಿಪ್ಸ್ ಬದಲಾಗಿ ಕಾಯಿಸಿ ಸ್ನಾಕ್ಸ್ ತರಹ ತಿನ್ನಬಹುದು.
ಬಟಾಟೆ
ಬಟಾಟೆ ಸಹಜವಾದ ಬ್ಲೀಚಿಂಗ್ ಏಜೆಂಟ್ ಆಗಿ ಕೆಲಸ ಮಾಡುತ್ತದೆ. ಹೀಗಾಗಿ ಚರ್ಮದ ಬಣ್ಣ ಮಾಸಿದಾಗ ಇದನ್ನು ಬಳಸಬಹುದು. ಮೃತಕೋಶಗಳನ್ನು ನಿವಾರಿಸುವುದು, ಸೂರ್ಯನಿಂದಾದ ತ್ವಜೆ ಬಣ್ಣ ಮಾಸುವಿಕೆ, ಕಲೆಗಳು ಮತ್ತು ಕಪ್ಪುಗಲೆಗಳ ನಿವಾರಣೆಗೆ ಉತ್ತಮ. ಬಟಾಟೆ ಮಿಶ್ರಣದ ಫೇಸ್‌ಮಾಸ್ಕನ್ನು 30 ನಿಮಿಷಗಳ ಕಾಲ ಹಚ್ಚಿಕೊಂಡರೆ ಸಾಕು. ಅಥವಾ ಬಟಾಟೆ ರಸವನ್ನು ಹಿಂಡಿ ಬೌಲಲ್ಲಿ ಹಾಕಿ ಮುಖದ ಮೇಲೆ ಹಚ್ಚಬಹುದು.
ಕಿತ್ತಳೆ
ಕಿತ್ತಳೆಯ ಸಿಪ್ಪೆ ವಾಸ್ತವದಲ್ಲಿ ವಿಟಮಿನ್ ಸಿಯನ್ನು ಕಿತ್ತಳೆಗಿಂತ ಹೆಚ್ಚು ಹೊಂದಿರುತ್ತದೆ. ಸಿಪ್ಪೆಯಲ್ಲಿ ಆಂಟಿಮೈಕ್ರೊಬಿಯಾಲ್ ಮತ್ತು ಆಂಟಿ ಬ್ಯಾಕ್ಟೀರಿಯ ತತ್ವಗಳು ಇರುತ್ತವೆ. ಇದರ ಫೇಸ್‌ಪ್ಯಾಕುಗಳನ್ನು ನಿತ್ಯವೂ ಬಳಸುವುದರಿಂದ ಹೊಳೆಯುವ ಚರ್ಮವನ್ನು ಪಡೆಯಬಹುದು. ಕಿತ್ತಳೆ ಸಿಪ್ಪೆ ಮತ್ತು ಯೊಗಾರ್ಟ್ ಫೇಸ್‌ಪ್ಯಾಕ್ ಚರ್ಮಕ್ಕೆ ನವಚೇತನ ನೀಡುತ್ತದೆ. ಒಂದು ಚಮಚ ಕಿತ್ತಳೆ ಸಿಪ್ಪೆ ಪೌಡರ್ ಮತ್ತು 2 ಚಮಚ ಯೋಗಾರ್ಟ್ ಬೆರೆಸಿ ಪೇಸ್ಟ್ ತಯಾರಿಸಿ ಹಚ್ಚಿಕೊಳ್ಳಬೇಕು.
ಅವಕಾಡೋ
ಲ್ಯೂಟಿನ್ ಮತ್ತು ಬೀಟಾ ಕ್ಯಾರೋಟಿನ್ ಆಂಟಿ ಆಕ್ಸಿಡಂಟ್‌ಗಳನ್ನು ಹೊಂದಿರುವ ಅವಕಾಡೋ (ಬೆಣ್ಣೆಹಣ್ಣು) ಚರ್ಮವನ್ನು ಮೃದುಗೊಳಿಸಿ ತೇವಾಂಶ ಇರುವಂತೆ ನೋಡಿಕೊಳ್ಳುತ್ತದೆ. ಅವಕಾಡೋ ಮಾಸ್ಕನ್ನು ಜೇನುತುಪ್ಪದ ಜೊತೆಗೆ ಹಚ್ಚಿಕೊಳ್ಳಬಹುದು.
ಟೊಮ್ಯಾಟೊ
ಟೊಮ್ಯಾಟೋದಲ್ಲಿ ಪ್ರಾಕೃತಿಕ ವಿಟಮಿನ್ ಮತ್ತು ಲವಣಗಳು ತುಂಬಿಕೊಂಡಿವೆ. ವಿಟಮಿನ್ ಎ, ಕೆ, ಬಿ1, ಬಿ3, ಬಿ5, ಬಿ6, ಬಿ7 ಮತ್ತು ವಿಟಮಿನ್ ಸಿ ಇದೆ. ಆದರೆ ಟೊಮ್ಯಾಟೊದಲ್ಲಿರುವ ಲಿಕೊಪಿನ್ ಆಂಟಿ ಆಕ್ಸಿಡಂಟ್ ಮುಪ್ಪು ನಿರೋಧಕವಾಗಿ ಕೆಲಸ ಮಾಡುತ್ತದೆ. ಟೊಮ್ಯಾಟೋ ರಸವನ್ನು ಹಿಂಡಿ ಚರ್ಮಕ್ಕೆ ಹಚ್ಚುವುದು ಉತ್ತಮ. ಚರ್ಮದ ತೂತುಗಳನ್ನು ಬಿಗಿ ಮಾಡಲೂ, ಮೊಡವೆ ನಿವಾರಿಸಲೂ ಟೊಮ್ಯಾಟೊ ರಸ ನೆರವಾಗುತ್ತದೆ. ಇದು ಪ್ರಾಕೃತಿಕ ಸನ್ ಸ್ಕ್ರೀನ್ ಆಗಿಯೂ ಕೆಲಸ ಮಾಡುತ್ತದೆ.
ಬೀಟ್‌ರೂಟ್
ಈ ಗುಲಾಬಿ ಬಣ್ಣದ ತರಕಾರಿ ವಿಟಮಿನ್ ಮತ್ತು ಲವಣಗಳಿಂದ ತುಂಬಿಕೊಂಡಿದೆ. ಉರಿಯೂತ ನಿವಾರಿಸುವ ಇದರ ತತ್ವಗಳು ಮೊಡವೆಗಳನ್ನು ನಿವಾರಿಸಲು ಸಹಕಾರಿ. ಬೀಟ್‌ರೂಟ್ ರಸದ ಫೇಸ್ ಮಾಸ್ಕ್ ಹಚ್ಚುವುದರಿಂದ ಚರ್ಮಕ್ಕೆ ಹೊಳಪು ಸಿಗುತ್ತದೆ. ರಕ್ತ ಶುದ್ಧೀಕರಣಕ್ಕೆ ಬೀಟ್‌ರೂಟ್ ಜ್ಯೂಸ್ ಉತ್ತಮ.
ಕ್ಯಾರೆಟ್
ದೊಡ್ಡ ಪ್ರಮಾಣದ ಬೀಟಾ ಕ್ಯಾರೊಟಿನ್ ಇರುವ ಕಾರಣ ಹೊಳೆಯುವ ಚರ್ಮಕ್ಕೆ ಕ್ಯಾರೆಟುಗಳು ಉತ್ತಮ. ಅದು ಕೋಶಗಳು ನಾಶವಾಗುವುದು ತಪ್ಪಿಸಿ ಮುಪ್ಪಾಗುವಿಕೆಯನ್ನು ನಿಧಾನಗೊಳಿಸುತ್ತದೆ. ಕ್ಯಾರೆಟ್ ಜ್ಯೂಸಲ್ಲಿರುವ ವಿಟಮಿನ್ ಎ ದೇಹದ ಅಂಗಾಂಶಗಳು, ಕಣ್ಣುಗಳು, ಮೂಳೆಗಳು ಮತ್ತು ಹಲ್ಲಿನ ಆರೋಗ್ಯಕ್ಕೆ ಉತ್ತಮ. ಕ್ಯಾರೆಟುಗಳಲ್ಲಿ ವ್ಯಾಪಕ ಪ್ರಮಾಣದ ವಿಟಮಿನ್ ಸಿ ಇದ್ದು, ಕೊಲಾಜೆನ್ ಬೆಳವಣಿಗೆ ಉತ್ತೇಜಿಸಿ ಮೊಡವೆ ಮತ್ತು ಕಪ್ಪುಕಲೆಗಳನ್ನು ಕಡಿಮೆಗೊಳಿಸುತ್ತದೆ.