13 ವರ್ಷದ ಬಾಲಕ ಅಕ್ಷತ್, ಬೆಸ ಸಂಚಾರಿ ಸೂತ್ರ ಕಂಡು ಹಿಡಿದ!

ಹೊಸದಿಲ್ಲಿ, ಎ. 16: ದಿಲ್ಲಿಯ ಶಾಲಾ ಬಾಲಕ ಅಕ್ಷತ್ ವಾತಾವರಣ ಮಾಲಿನ್ಯದಿಂದ ಪಾರಾಗುವ ಫಾರ್ಮುಲಾವನ್ನು ಕಂಡು ಹುಡುಕಿದ. ಅದಕ್ಕಾಗಿ ಹೆಸರಿನ ಒಂದು ವೆಬ್‌ಸೈಟನ್ನು ತಯಾರಿಸಿದ. ಅದರಿಂದ ಪ್ರತಿಕ್ರಿಯೆ ಅಥವಾ ರೈಡ್ ಶೇರ್ ಮಾಡುವ ಯಾವುದೇ ಸಂಭಾವ್ಯ ಪ್ರಯಾಣವನ್ನು ಕಂಡು ಹುಡುಕಬಹುದಾಗಿದೆ.
orahi.comಅವನು ತನ್ನ ಕಂಪೆನಿ ಕಾರ್ಪೂಲ್ ಎಫ್‌ನ್ನು ಗೆ
ಮಾರಿದ್ದಾನೆ. ಆದರೆ ಎಷ್ಟಕ್ಕೆ ಮಾರಿದ್ದಾನೆ ಎಂದು ಯಾವುದೇ ಮಾಹಿತಿಯಿಲ್ಲ. ದಿಲ್ಲಿ ಸರಕಾರ ಮೊದಲಬಾರಿ ಜನವರಿಯಲ್ಲಿ ವಾತಾವರಣ ಮಲಿನವಾಗದಂತೆ ನಿಯಂತ್ರಿಸಲಿಕ್ಕಾಗಿ ಆಡ್‌ಇವನ್ ಯೋಜನೆ ಜಾರಿಗೆ ತಂದಿತ್ತು. ಆಗ ಅಕ್ಷತ್‌ನ ಬಳಿ ವಾಹನಗಳ ಭರಾಟೆಯಿಂದ ಪಾರಾಗಲು ಐಡಿಯಾ ಇತ್ತು. ತಾನೇ ಒಂದು ವೆಬ್‌ಸೈಟ್ ನಿರ್ಮಿಸಲು ನಿರ್ಧರಿಸಿದ. ಅವನ ಐಡಿಯಾ ಬಹಳ ಸಾಮಾನ್ಯದ್ದೇ ಆಗಿತ್ತು. ಆದರೆ ಇದನ್ನು ಮಾಡಲಿಕ್ಕಾಗಿ ಆತ ಜಟಿಲ ಕೋಡ್‌ನ್ನು ತಯಾರಿಸಬೇಕಿತ್ತು. ಅವನು ತನ್ನ ಸಹೋದರ ಮತ್ತು ಐಟಿ ಉದ್ಯಮಿ ತಂದೆಯಿಂದ ಕೋಡಿಂಗ್‌ನ್ನು ಕಲಿತುಕೊಂಡ.
oddeven.com
ಕಳೆದ ವರ್ಷ ಡಿಸೆಂಬರ್‌ನಲ್ಲಿ ಮೂರು ವಾರ ಕೋಡಿಂಗ್‌ನಲ್ಲಿ ಕೆಲಸ ಮಾಡುವ ಲಾಂಚ್ ಮಾಡಿದ. ಹಣದಿಂದ ಹಿಡಿದು ಎಲ್ಲ ರೀತಿಯ ಒಪ್ಪಂದಗಳಲ್ಲದೆ ಎಮಿಟಿ ಇಂಟರ್‌ನ್ಯಾಶನಲ್ ಸ್ಕೂಲ್ ವಿದ್ಯಾರ್ಥಿ ಅಕ್ಷತ್ ಆರೋಹಿ ಕಂಪೆನಿಯ ಟೆಕ್ನಿಕಲ್ ಸಲಹಾ ಮಂಡಳಿಯ ಸದಸ್ಯನಾಗಿರುತ್ತಾನೆ ಮತ್ತು ಆರೋಹಿ ಒಂದು ವರ್ಷದವರೆಗೆ ಅವನಿಗೆ ತರಬೇತಿ ನೀಡಿದೆ. ಆರೋಹಿ ಮುಖ್ಯ ಎಕ್ಸಿಕ್ಯೂಟಿವ್ ಆಫೀಸರ್ ಅರುಣ್‌ಭಾಟಿ, ಅಕ್ಷತ್‌ನೊಂದಿಗೆ ಡೀಲ್ ಎಷ್ಟು ಸುಲಭವಾಗಿ ಮಾಡಬಹುದೆಂದು ಭಾವಿಸಿದ್ದರೋ ಅಷ್ಟು ಸುಲಭವಾಗಿ ನಡೆದಿಲ್ಲ ಎಂದು ಹೇಳಿದ್ದಾರೆ.
ವೆಬ್‌ಸೈಟ್‌ನ ಹೆಸರು ಸುಲಭದಲ್ಲಿ ನೆನಪಿಡುವಂತಹದ್ದಾಗಿತ್ತು. ಈಗ ಅದಕ್ಕೆ ಮೂವತ್ತು ಸಾವಿರ ಯೂಸರ್ಸ್ ಇದ್ದಾರೆ. ನಮಗೆ ಎಪ್ರಿಲ್ 15ರಲ್ಲಿ ಆಡ್‌ಇವನ್‌ನ ಎರಡನೆ ಚರಣ ಆರಂಭವಾಗಿ ಆಮೇಲೆ ಇದರ ಬಳಕೆದಾರರು ಹೆಚ್ಚಲಿದ್ದಾರೆ ಎಂದು ಭರವಸೆ ಇದೆ ಎಂದು ಅರುಣ್ ಭಾಟಿ ಹೇಳಿದ್ದಾರೆ.
ಅಕ್ಷತ್ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಇದು ಈಗ ಅವನ ಆರಂಭವಾಗಿದೆ. ಭವಿಷ್ಯದಲ್ಲಿ ಸಾಮಾಜಿಕ ಸಮಸ್ಯೆ ಪರಿಹಾರಕ್ಕೆ ಇನ್ನೂ ಅನೇಕ ಕಂಪೆನಿಗಳನ್ನು ಲಾಂಚ್‌ಮಾಡುವ ಕುರಿತು ಅಕ್ಷತ್ ಯೋಚಿಸುತ್ತಿದ್ದಾನೆಂದು ಅರುಣ್‌ಭಾಟಿ ತಿಳಿಸಿರುವುದಾಗಿ ವರದಿಯಾಗಿದೆ.





