70 ಕೋಟಿಯ ಭೂಮಿಯನ್ನು ಹೇಮಮಾಲಿನಿಗೆ ಬಿಟ್ಟಿಯಾಗಿ ಕೊಟ್ಟ ಬಿಜೆಪಿ ಸರಕಾರ !

ಮುಂಬೈ :ಮಹಾರಾಷ್ಟ್ರದ ಬಿಜೆಪಿ ಸರಕಾರವು ಹಿರಿಯ ನಟಿ ಹಾಗೂ ಸಂಸದೆ ಹೇಮಮಾಲಿನಿಗೆ ನೃತ್ಯಶಾಲೆಯನ್ನು ಸ್ಥಾಪಿಸುವ ಸಲುವಾಗಿ ಮುಂಬೈನ ಪ್ರಮುಖ ಅಂಧೇರಿಪ್ರದೇಶದಲ್ಲಿ 2000 ಚದರ ಮೀಟರ್ ಭೂಮಿಯನ್ನು ವಸ್ತುಶಃ ಬಿಟ್ಟಿಯಾಗಿ ನೀಡಲು ನಿರ್ಧರಿಸಿದೆ. ಈಭೂಮಿಯ ನಿಜವಾದ ಮೌಲ್ಯ ರೂ 70 ಕೋಟಿಯಾಗಿದ್ದರೆ,ಸರಕಾರ ಅದನ್ನು ಹೇಮಮಾಲಿನಿಗೆ ಕೇವಲ ರೂ. 1.75 ಲಕ್ಷಕ್ಕೆ ನೀಡಲಿದೆ.
ಈ ನಿರ್ಧಾರದಿಂದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಸಾಕಷ್ಟು ಟೀಕೆಗೆ ಗುರಿಯಾಗಿದ್ದು ಅವರುಡ್ರೀಮ್ ಗರ್ಲ್ ಎಂದೇ ಒಂದು ಕಾಲದಲ್ಲಿ ಬಾಲಿವುಡ್ಡಿನಲ್ಲಿ ಖ್ಯಾತಿ ಪಡೆದಿದ್ದ ಹೇಮಾಮಾಲಿನಿಗೆ ಅನಗತ್ಯ ಔದಾರ್ಯ ತೋರಿಸುತ್ತಿದ್ದಾರೆಂದು ಆರೋಪಿಸಲಾಗಿದೆ.
ಆದರೆ ಸರಕಾರ ನೀಡಿದ ಸ್ಪಷ್ಟೀಕರಣದಂತೆಚ್ಯಾರಿಟೇಬಲ್ ಹಾಗೂ ಶಿಕ್ಷಣ ಟ್ರಸ್ಟುಗಳುಫೆಬ್ರವರಿ 1,1976ರ ಮಾರುಕಟ್ಟೆ ದರದಂತೆಭೂಮಿಯ ಮೌಲ್ಯದ 25% ಮೊತ್ತವನ್ನು ಮಾರ ನೀಡಿದರೆ ಸಾಕು. ಅಂತೆಯೇಹೇಮಾಮಾಲಿನಿಯವರಿಗೆ ನೀಡಲಾಗುವ ಭೂಮಿಯ ಮಾರುಕಟ್ಟೆ ದರ 1976ರ ದರದಂತೆಚದರ ಮೀಟರಿಗೆರೂ 350 ಆಗಿದ್ದರೆ, 2000 ಚದರ ಮೀಟರಿಗೆ ರೂ 7 ಲಕ್ಷ ಆಗುತ್ತದೆ. ಈ ಮೊತ್ತದ 25% ಮೊತ್ತ ರೂ 1.75ಲಕ್ಷ ಆಗುತ್ತದೆ.
ಸರಕಾರಿ ಮೂಲಗಳ ಪ್ರಕಾರ ಈ ಭೂಮಿಯ ನಿಜವಾದ ಮೌಲ್ಯ ರೂ 23 ಕೋಟಿ ಆಗಿದ್ದರೆ, ರಿಯಲ್ ಎಸ್ಟೇಟ್ಮೂಲಗಳು ಹೇಳುವಂತೆ ಈ ಭೂಮಿಯ ಮೌಲ್ಯ ರೂ 70 ಕೋಟಿಯಾಗಿದೆ.
ಹೇಮಾ ಮಾಲಿನಿ ತಮ್ಮ ಚ್ಯಾರಿಟಿ ಸಂಸ್ಥೆ ನಾಟ್ಯ ವಿಹಾರ್ ಕಲಾ ಕೇಂದ್ರದ ಮೂಲಕ ನೃತ್ಯ ಶಾಲೆ ಸ್ಥಾಪಿಸಲು ಭೂಮಿ ಒದಗಿಸಲು 1996ರಲ್ಲಿಯೇ ಅರ್ಜಿ ಸಲ್ಲಿಸಿದ್ದರೆ,19 ವರ್ಷಗಳ ನಂತರ ಡಿಸೆಂಬರ್ 2015ರಲ್ಲಿ ಅಂಧೇರಿಯ ಅಂಬಿವ್ಲಿಯಲ್ಲಿ ಭೂಮಿಯನ್ನು ಮಂಜೂರುಗೊಳಿಸಲಾಗಿದೆ.
1996ರಲ್ಲಿ ಅಂದಿನ ಶಿವಸೇನಾ-ಬಿಜೆಪಿ ಸರಕಾರ ಆಕೆಗೆ ಭೂಮಿ ಮಂಜೂರುಗೊಳಿಸಿ ನಟಿ ಅದಕ್ಕೆ ರೂ 10 ಲಕ್ಷ ಪಾವತಿಸಿದ್ದರೂ ಈ ಭೂಮಿ ಸಂರಕ್ಷಿತ ಕರಾವಳಿ ನಿಯಂತ್ರಣ ವಲಯದಲ್ಲಿ ಬರುವುದರಿಂದ ಅಲ್ಲಿನೃತ್ಯ ಶಾಲೆ ಸ್ಥಾಪಿಸಲು ಸಾಧ್ಯವಾಗಿಲ್ಲ.







