ಪಾಕಿಸ್ತಾನದ ಮುಖ್ಯ ಆಯ್ಕೆಗಾರನ ಪ್ರಸ್ತಾವಕ್ಕೆ ಸಮಯ ಕೇಳಿದ ಇಂಝಮಾಮುಲ್ ಹಕ್

ಕರಾಚಿ,ಎಪ್ರಿಲ್16: ಪಾಕಿಸ್ತಾನದ ಮಾಜಿನಾಯಕ ಇಂಝಮಾಮುಲ್ ಹಕ್ ಪಾಕಿಸ್ತಾನದ ಮುಖ್ಯ ಆಯ್ಕೆಗಾರನ ಸ್ಥಾನವಹಿಸಿಕೊಳ್ಳಬೇಕೆಂಬ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸುತ್ತಾ ತನಗೆ ನಿರ್ಧರಿಸಲು ಸಮಯದ ಅಗತ್ಯವಿದೆ ಎಂದು ತಿಳಿಸಿದ್ದಾರೆ. ಪಾಕ್ ಕ್ರಿಕೆಟ್ ಬೋರ್ಡ್‌ನ ಅಧಿಕಾರಿ ಪಿಸಿಬಿ ಅಧ್ಯಕ್ಷ ಶಹರ್ಯಾರ್‌ಖಾನ್‌ರು ಇಂಝಮಾಮ್‌ರನ್ನು ತನ್ನ ಮನೆಗೆ ಕರೆಸಿಕೊಂಡು ಈ ಕುರಿತು ವಿಸ್ತ್ರತವಾಗಿ ಚರ್ಚಿಸಿದ್ದಾರೆ ಎಂದು ತಿಳಿಸಿರುವುದಾಗಿ ವರದಿಯಾಗಿದೆ.
ಅಧಿಕಾರಿಯು" ಶಹರ್ಯಾರ್‌ಖಾನ್ ಇಂಝಮಾಮ್‌ರನ್ನು ಮುಖ್ಯ ಆಯ್ಕೆಗಾರನ ಸ್ಥಾನ ವಹಿಸಿಕೊಳ್ಳುವಂತೆ ಕೇಳಿದರು. ಈಗ ಅವರು ಪಾಕಿಸ್ತಾನದ ಮುಖ್ಯ ಕೋಚ್ ಹುದ್ದೆಯಲ್ಲಿದ್ದಾರೆ.ಅವರಕೆಲವು ವಿಷಯಗಳನ್ನು ಮುಂದಿಟ್ಟಿದ್ದು ಅದರಲ್ಲಿ ಸಹಮತ ವ್ಯಕ್ತವಾಗಿದೆ" ಎಂದು ತಿಳಿಸಿದ್ದಾರೆ.
ಶಹರ್ಯಾರ್ ಇಂಝಮಾಮ್‌ರಿಗೆ ಸೂಕ್ತ ಅಧಿಕಾರ ಸಂಪೂರ್ಣ ಅಧಿಕಾರ ನೀಡಲು ಸಿದ್ಧರಿದ್ದಾರೆ. ಮತ್ತು ಅವರಿಗೆ ಉಪಯುಕ್ತ ಆರ್ಥಿಕ ಪ್ಯಾಕೇಜ್‌ನ ಆಶ್ವಾಸನೆಯನ್ನೂ ನೀಡಲಾಗಿದೆ. ಈಗ ಅವರಿಗೆ ಮುಖ್ಯ ಕೋಚ್ ಹುದ್ದೆಗಾಗಿ 12000 ಡಾಲರ್ ನೀಡುತ್ತಿದೆ ಎಂದು ಪಿಸಿಬಿ ಅಧಿಕಾರಿ ತಿಳಿಸಿರುವುದಾಗಿ ವರದಿಯಾಗಿದೆ. ಇಂಝಮಾಮ್‌ರು ಪಿಸಿಬಿ ಪ್ರಮುಖರಲ್ಲಿ ಅಪ್ಘಾನಿಸ್ತಾನದ ಕ್ರಿಕೆಟ್ ಬೋರ್ಡ್‌ನೊಂದಿಗೆ ಡಿಸೆಂಬರ್‌ವರೆಗೆ ಒಪ್ಪಂದ ಇದೆ ತಿಳಿಸಿದ್ದು ಆದ್ದರಿಂದ ಅವರು ಹೆಚ್ಚು ಸಮಯವನ್ನು ಕೇಳುತ್ತಿದ್ದಾರೆ. ಅಪ್ಘಾನಿಸ್ತಾನದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲು ಅವರು ಬಯುಸುತ್ತಿದ್ದಾರೆ ಮತ್ತು ವಿನಯಪೂರ್ಣವಾಗಿ ಕೋಚ್‌ಹುದ್ದೆಯನ್ನು ತೊರೆಯಲು ಅವರು ಬಯಸಿದ್ದಾರೆಂದು ಅಧಿಕಾರಿ ತಿಳಿಸಿರುವುದಾಗಿ ವರದಿಯಾಗಿದೆ.







