ಮುಂಡಗೋಡ : ಹೊಲದಲ್ಲಿ ಕೆಲಸ ಮಾಡುತ್ತಿದ್ದವರ ಮೇಲೆ ಹಲ್ಲೆ
ಮುಂಡಗೋಡ : ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಗದ್ದೆಗೆ ನುಗ್ಗಿ ಇದು ನಮ್ಮ ಹೊಲ ಎಂದು ಕೆಲಸಮಾಡುತ್ತಿದ ಎರಡು ಜನರ ಮೇಲೆ ಹಲ್ಲೆಮಾಡಿ ಹೊಡೆಬಡೆ ಮಾಡಿದ ಘಟನೆ ತಾಲೂಕಿನ ಉಗ್ಗಿನಕೇರಿ ಗ್ರಾಮದಲ್ಲಿ ನಡೆದಿದೆ.
ಹಲ್ಲೆಗೆ ಒಳಗಾದವರನ್ನು ಬಸುವರಾಜ ನಲಗೆ (52) ಹಾಗು ರಾಮಚಂದ್ರ ನಲಗೆ(70)ಎಂದು ತಿಳಿದು ಬಂದಿದೆ.
ಅಕ್ರಮವಾಗಿ ಪ್ರವೇಶಮಾಡಿ ಹಲ್ಲೆಮಾಡಿದವರನ್ನು ಈಶ್ವರಪ್ಪ ಸಂಗಮತ (60), ಫಕ್ಕಿರಪ್ಪ ಸಂಗಮತ (25) ಮತ್ತು ಬಸವ್ವ ಸಂಗಮತ(55) ಎಂದು ಹೇಳಲಾಗಿದೆ.
ಗುರವಾರ ಬೆಳಗ್ಗೆ ಹಲ್ಲೆಗೆ ಒಳಗಾದವರು ತಮ್ಮ ಹೊಲದಲ್ಲಿ ಕೆಲಸದಲ್ಲಿ ನಿರತರಾಗಿದ್ದಾಗ ಬಸುವರಾಜ ನಲಗೆ ಗೆ ಈಶ್ವರಪ್ಪ ಎದಗೆ ಗುದ್ದಿದ್ದಾನೆ ಫಕ್ಕಿರಪ್ಪ ರಾಮಚಂದ್ರ ನಲಗೆ ಗೆ ಬಡಿಗೆಯಿಂದ ಹೊಡೆದು ಗಾಯಗೊಳಿಸಿದ್ದಾನೆ. ಬಸವ್ವ ಇನ್ನೂ ಹೊಡೆಯಿರಿ ಎಂದು ಪ್ರಚೋದನೆ ಕೊಟ್ಟಿದ್ದಾಳೆ ಎಂದು ಬಸವರಾಜ ನಲಗೆ ಪೊಲೀಸ ದೂರಿನಲ್ಲಿ ತಿಳಿಸಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
Next Story





