ಅಮ್ರಪಾಲಿಯ ವಿರುದ್ಧ ಧೋನಿಯ ನಂತರ ದೂಸ್ರಾ ಎಸೆದ ಹರ್ಭಜನ್ ಸಿಂಗ್
2011ರಲ್ಲಿ ವಿಶ್ವಕಪ್ ಗೆದ್ದ ತಂಡಕ್ಕೆ ಮನೆ ಕೊಡುವೆ ಎಂದ ಕಂಪೆನಿ ಮನೆಕೊಟ್ಟೇ ಇಲ್ಲ!

ಹೊಸದಿಲ್ಲಿ, ಎಪ್ರಿಲ್ 16: ರಿಯಲ್ ಎಸ್ಟೇಟ್ ಡೆವಲಪರ್ಸ್ ಕಂಪೆನಿಯೊಂದಿಗೆ ಸಂಬಂಧ ಕಡಿದುಕೊಂಡ ಮಹೇಂದ್ರ ಸಿಂಗ್ ಧೋನಿಯನ್ನು ಸಹ ಆಟಗಾರ ಹರ್ಭಜನ್‌ಸಿಂಗ್ ಬೆಂಬಲಿಸಿದ್ದಾರೆ. ಸ್ಪಿನ್ ಬೌಲರ್ ಹರ್ಭಜನ್ ಸಿಂಗ್ ಶನಿವಾರ ಟ್ವೀಟ್ ಮಾಡಿ ಧೋನಿಯನ್ನು ಶ್ಲಾಘಿಸಿದ್ದು ಅಮ್ರಪಾಲಿ ಗ್ರೂಪ್ ಮಾಲಕರು ಒಪ್ಪಂದವನ್ನು ಉಲ್ಲಂಘಿಸಿದ ಆರೋಪವನ್ನು ಹೊರಿಸಿದ್ದಾರೆ.
ಹರ್ಭಜನ್ ಸಿಂಗ್ ಟ್ವೀಟ್‌ನಲ್ಲಿ ಅಮ್ರಪಾಲಿ ಗ್ರೂಪ್ ಬ್ರಾಂಡ್ ಅಂಬಾಸಿಡರ್ ಸ್ಥಾನವನ್ನು ತೊರೆದು ಉತ್ತಮ ಕೆಲಸವನ್ನು ಮಾಡಿದ್ದಾರೆ. 2011ರಲ್ಲಿ ನಡೆದ ವರ್ಲ್ಡ್ ಕಪ್ ಸಮಯದಲ್ಲಿ ಗೆದ್ದ ಭಾರತೀಯ ಕ್ರಿಕೆಟರ್‌ಗಳಿಗೆ ಮನೆ ನೀಡುವ ತನ್ನ ಕೊಡುಗೆಯನ್ನು ಅದು ನಿಭಾಯಿಸಿಲ್ಲ ಎಂದು ಹೇಳಿದ್ದಾರೆ. ಇನ್ನೊಂದೆಡೆ ಅಮ್ರಪಾಲಿ ಗ್ರೂಪ್‌ನ ಸಿಎಂಡಿ ಅನಿಲ್ ಶರ್ಮ ಅಧಿಕೃತ ಹೇಳಿಕೆಯಲ್ಲಿ 2011ರಲ್ಲಿ ವಿಶ್ವಕಪ್‌ಗೆದ್ದ ಭಾರತೀಯ ಕ್ರಿಕೆಟ್ ತಂಡಕ್ಕೆ ಗ್ರೇಟರ್ ನೋಯ್ಡೆದ ವೆಸ್ಟ್ ನೋಯ್ಡ್‌ದಲ್ಲಿ ಮನೆ ಅಲಾಟ್ ಮಾಡಲಾಗಿತ್ತು. ಅವರು ಟ್ಯಾಕ್ಸ್ ಭರ್ತಿಮಾಡಿ ಉಳಿದ ಪ್ರಕ್ರಿಯೆಯನ್ನು ಪೂರ್ತಿಗೊಳಿಸಿ ಮನೆಯನ್ನು ಪಡೆಯಬೇಕಾಗಿದೆ ಎಂದು ಹೇಳಿದ್ದಾರೆ.
ಸಾಕ್ಷಿಧೋನಿ ರಾಜೀನಾಮೆ ನೀಡಿರುವುದನ್ನು ಉಲ್ಲೇಖಿಸಿದ ಶರ್ಮ ಅಮ್ರಪಾಲಿ ಮಾಹಿ ಡೆವಲಪರ್ಸ್ 2011ರಲ್ಲಿ ಹುಟ್ಟು ಹಾಕಲಾಯಿತು. ಡೆಹ್ರಾಡೂನ್‌ನಲ್ಲಿ ಇದು ಆಸ್ಪತ್ರೆಯನ್ನು ಕೂಡಾ ನಿರ್ಮಿಸಿದೆ. ಇದರಲ್ಲಿ ಗ್ರೂಪ್‌ನ ಶೇ.75 ಮತ್ತು ಸಾಕ್ಷಿಧೋನಿಯ ಶೇ.25 ಪಾಲುದಾರಿಕೆ ಇದೆ. ಸಾಕ್ಷಿ ಧೋನಿ ಈಗ ಇದರೊಂದಿಗೆ ಸಂಬಂಧವನ್ನು ಹೊಂದಿಲ್ಲ. ಅವರನ್ನು ಬಿಡುವ ಪ್ರಕ್ರಿಯೆಯನ್ನು ಪೂರ್ತಿಗೊಳಿಸಲಾಗುತ್ತಿದೆ ಎಂದು ಶರ್ಮ ಹೇಳಿದ್ದಾರೆಂದು ವರದಿಗಳು ತಿಳಿಸಿವೆ.
ಇದಕ್ಕಿಂತ ಮೊದಲು ಟೀಮ್ ಇಂಡಿಯಾದ ನಾಯಕ ಮಹೇಂದ್ರ ಧೋನಿ ರಿಯಲ್ ಎಸ್ಟೇಟ್ ಕಂಪೆನಿ ಅಮ್ರಪಾಲಿ ಬಿಲ್ಡರ್ಸ್‌ನೊಂದಿಗೆ ತನ್ನ ಸಂಬಂಧವನ್ನು ಕಡಿದುಕೊಂಡಿದ್ದರು. ಈಗ ಅವರು ಅಮ್ರಪಾಲಿಯ ಬ್ರಾಂಡ್ ಅಂಬಾಸಡರ್ ಆಗಿಲ್ಲ. ಆದರೆ ಧೋನಿಯಾವಾಗ ಅಮ್ರಪಾಲಿಯಿಂದ ಬೇರೆಯಾದರು ಎಂಬುದು ಗೊತ್ತಾಗಿಲ್ಲ. ಧೋನಿ ಕೇವಲ ಅಂಬಾಸಡರ್‌ಮಾತ್ರ ಆಗಿರಲಿಲ್ಲ. ಅವರು ಒಬ್ಬ ಪಾಲುದಾರ ಕೂಡಾ ಆಗಿದ್ದರು.
ಅನಿಲ್ ಶರ್ಮಾ ಧೋನಿ ಒಪ್ಪಂದ ಕಡಿದುಕೊಂಡಿದ್ದನ್ನು ದೃಢಪಡಿಸಿದ್ದು. ಈ ವಿವಾದದಲ್ಲಿಧೋನಿಯ ಯಾವುದೇ ತಪ್ಪಿಲ್ಲ.ಆದ್ದರಿಂದ ಅವರ ಹೆಸರನ್ನು ಎಳೆದು ತರುವುದು ಸರಿಯಲ್ಲ. 2010ರಲ್ಲಿ ಅಮ್ರಪಾಲ್ ಕಂಪೆನಿ ಧೋನಿಯನ್ನು ಬ್ರಾಂಡ್ ಅಂಬಾಸಡರ್ ಮಾಡಿತ್ತು. ಅಮ್ರಪಾಲ್‌ನ ಪ್ರತಿ ಹೊಸ ಪ್ರಾಜೆಕ್ಟ್‌ನಲ್ಲಿ ಧೋನಿಯಮುಖ ಇರುತ್ತಿತ್ತು.
ಅದೇವೇಳೆ ಅಮ್ರಪಾಲಿಯ ಹೂಡಿಕೆದಾರರು ಸೋಶಿಯಲ್ ಮೀಡಿಯದಲ್ಲಿ ಪ್ಲಾಟ್ ಸಿಗದ್ದರಿಂದ ಧೋನಿಯ ವಿರುದ್ಧ ಅಭಿಯಾನ ಹಮ್ಮಿಕೊಂಡಿದ್ದಾರೆ. ಆನಂತರ ಧೋನಿ ಬಿಲ್ಡರ್‌ರೊಂದಿಗೆ ಮಾತಾಡುವ ಮಾತು ಕೊಟ್ಟಿದ್ದರು. ಆದರೆ ಅಮ್ರಪಾಲಿ ಗ್ರೂಪ್ ಕಾರಣಾಂತರಗಳಿಂದ ಪ್ರಾಜೆಕ್ಟ್‌ನ ಕೆಲಸ ನಿಧಾನಗೊಂಡಿತ್ತು. ಈಗ ಶೀಘ್ರಗತಿಯಲ್ಲಿ ಕೆಲಸ ಮುಂದುವರಿಯುತ್ತಿದೆ ಮತ್ತು ಆದಷ್ಟು ಬೇಗ ಪ್ಲಾಟ್‌ಗಳು ಹೂಡಿಕೆದಾರರಿಗೆ ಸಿಗಲಿದೆ ಎಂದು ಹೇಳಿರುವುದಾಗಿ ವರದಿಯಾಗಿದೆ.







